ಗಝಲ್
ಹುಟ್ಟಿ ಬೆಳೆಯುವವರೆಗೆ ಪೋಷಕ ಹೆಸರಿನ ಬಂಧನ
ಬೆಳೆದು ಮದುವೆಯಾದರೆ ಗಂಡನ ಬಂಧನ
ಹೆಣ್ಣಿಗೆಲ್ಲಿದೆ ಆರಾಮ -ವಿರಾಮದ ನಂಟು
ಜೀವನ ಪೂರ್ತಿ ಅಡಿಗೆ ಮನೆ ಸಾಮಾನಿನ ಬಂಧನ
ಹೊರಗೆ ಕೆಲಸಕೆ ಹೋಗಿ ಬರಲು
ಸಮಾಜದ ಜನತೆಯ ಮಾತಿನ ಬಂಧನ
ಮನೆಯೊಳಗೆ ದುಡಿದು ಗಳಿಸಲು
ಅತ್ತೆ-ಮಾವ ನಾದಿನಿ ಅತ್ತಿಗೆಯ ತುತ್ತಿನ ಬಂಧನ
ಸುಮ್ಮನೆ ಕೂರಲು ಅಸಾಧ್ಯ ಎಂದೊಡೆ
ಹಿರಿಯರ ಕುಹಕ ಮಾತಿನ ಬಂಧನ.
ಹೆಂಡತಿಗೆ ಮೊಣಕಾಲ ಕೆಳಗೆ ಬುದ್ಧಿಯೆನುತ
ಪತಿರಾಯರ ಮದ-ದರ್ಪ ಗತ್ತಿನ ಬಂಧನ.
ಎಷ್ಟೇ ದುಡಿದರೂ ಸಂಸಾರದ ನೊಗಕೆ
ಕತ್ತು ಕೊಟ್ಟು ಎಳೆಯುವ ಕಾನನ ಬಂಧನ
ಸರಿಯಾಗಿ ಸಿಗದು ಕಾತರ- ಆತುರಗಳಿಂದ ಜೀವನದಿ ಕಾಯುವ
ಗಂಡನ ಪ್ರೀತಿ-ಪ್ರೇಮಭರಿತ ಬಾಹುವಿನ ಖುಷಿಯಂಚಿನ ಬಂಧನ!
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ