ಬದುಕ ಗೀತೆ
ಬಾಳ ಬಂಡಿಯ ಎಳೆಯೆ
ಅದೊಂದು ನವ್ಯ ಕವನ
ಬಂಡಾಯ,ವಿರಹ,ಪ್ರೇಮ ರಾಗ
ಮುಂದೆ ಸಿಗಬಹುದು ಯೋಗ!
ಬದುಕ ರಥವದು ಖಾಲಿ
ಎಳೆಯಬೇಕು ದೂರ ದೂರ
ಸಿಗುವರನೇಕರು ಜೊತೆಯಲಿ
ಆದರೂ ಇಲ್ಲಿ 'ನಾ ಒಂಟಿ'!!
ಜೀವನದುಯ್ಯಾಲೆ ಜೀಕಲೇ ಬೇಕು
ಮೇಲೆ ಕೆಳಗೆ ಮತ್ತೆ ಮೇಲೆ
ನಿಲ್ಲಬಾರದು ಎಂದೂ ಸುಮ್ಮನೆ
ನಿಂತರೆ ಹೃದಯದಾಟ ಮುಗಿಯಿತು.
ಬದುಕ ಸಾಗರ ದಾಟಬೇಕು
ಅದ ಕಷ್ಟದಿ ಈಜಬೇಕು
ದಡ ಸೇರಲು ಹಂಬಲಿಸಬೇಕು
ಶಿವ ಪಾದವ ಮುಟ್ಟ ಬೇಕು!!!
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ