ಭಾವಗೀತೆ
ಸ್ಪರ್ಧೆಗಾಗಿ
ಬಾರೋ
ನನ್ನ ನೋಡೋ ಚಂದಿರ
ಬಾರೋ ಬೇಗ ಸುಂದರ
ನನ್ನ ಮನಕೆ ಮುದವ ನೀಡೋ
ನನ್ನ ಹೃದಯ ತಂಪು ಮಾಡೋ..
ಚಂದಮಾಮ ನೀನು ಬರದೆ
ನಾನು ಸರಿಸೆ ಮನೆಯ ಪರದೆ
ನಿನ್ನ ಬರವಿಗಾಗಿ ಕಾಯುವೆ
ನಿನ್ನ ಮಡಿಲ ಸೇರೆ ಬೇಡುವೆ...
ಮನಕೆ ಮುದವ ನೀಡು ನೀನು
ಬೆಳಗ್ಗೆ ಎಬ್ಬಿಸಲು ಬರುವ ಭಾನು
ನೀನು ಭುವಿಯ ತಾಪ ತಣಿಸು
ಬಾನ ತಾರೆಯೆಲ್ಲ ಎಣಿಸು..
ಮನಕೆ ಮುದಕೆ ನೀಡು ಬಾರೊ
ಕನಸ ನನಸು ಮಾಡು ಬಾರೋ
ಎದೆಯಾಳದಿ ಇಣುಕು ಬಾರೋ
ನನ್ನ ಮೇಲೆ ಕರುಣೆ ತೋರೋ..
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ