1. ಸೈನಿಕರಿಗೆ
ಚಂಚಲರಾಗದಿರಿ ಎಂದೂ
ದೇಶ, ದೇಶದ ಜನತೆ
ಉಸಿರಾಡುತಿಹರು ಆರಾಮದಿ
ನಿಮ್ಮ ದಯೆಯಿಂದ
ನೀವು ಗಡಿ ಕಾಯದಿರೆ
ನೆಟ್ಟ ದಿಟ್ಟ ನೋಟದಲಿ
ಪ್ರತಿ ಪ್ರಜೆಗೂ ಸಂಕಟ
ಎಂದು ತಪ್ಪಲಿಕಿಲ್ಲ....!!!
2. ಇಳೆಗೆ
ಅಮ್ಮಾ, ಮಾನವನ ಕರಾಳ
ಕೃತ್ಯವ ಸಹಿಸದೆ ನೀನು
ಮಾನವರ ಗುಣದಂತೆ
ಚಂಚಲೆಯಾಗಿ ಮನ ಬಂದಂತೆ
ವರ್ತಿಸಲು ಆರಂಭಿಸಿದರೆ
ಮಾನವರೇನು?
ಏಕಕೋಶ ಜೀವಿಗಳಿಗೂ
ಬದುಕು ಸಾಧ್ಯವೇ ನಿನ್ನಲಿ?
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ