ಶುಕ್ರವಾರ, ಮೇ 11, 2018

300. ಭಾವಗೀತೆ-ಮಳೆಯ ಸೇರೋಣ

ವರುಣನ ಸೇರೋಣ

ವರುಣನ ಕುಣಿತಕ್ಕೆ
ಒಳಕುಂತು ನಗಬೇಡಿ
ಭುವಿಯೊಡನೆ ನೀರಾಟ ಆಡಿ
ಎಲ್ರೂನೂ ತಿರೆಯೊಡನೆ ಸ್ನಾನವ ಮಾಡಿ..

ಮಳೆ ಗುಡುಗು ಬರುವಾಗ
ಕೋಲ್ಮಿಂಚು ನಗುವಾಗ
ಫೋಟೋ ತೆಗೆದ್ಹಾಂಗೆ ಮಿಂಚ್ವಾಗ
ಹೊರಗೋಡಿ ಮಳೆ ನೀರಲಿ ನಿಂತು ತಣ್ಣಗಾಗಿ...

ಸೆಕೆಯೇರಿ ಬೆವರಾಗಿ
ಮೈಯೆಲ್ಲಾ ತೊಯ್ದೋಗಿ
ಮನೆಯೊಳಗೆ ಬಿಸಿಯು ಆದಾಗ
ಮಳೆ ನೀರು ತಂಪಾಗಿ ಹೊರಗೆ ಸುರಿದಾಗ...

ಮರಗಿಡಗಳೆಲ್ಲ ಕುಣಿದು
ಕುಪ್ಪಳಿಸಿ ಸೋತ್ಹೋಗಿ
ಸಾಕಪ್ಪ ಎಂದು ಕುಳಿತಾಗ
ನಾವ್ಹೋಗಿ ನರ್ತನವ ಮಾಡಿ ಕುಣಿಯೋಣ..
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ