ನನ್ನ ಲಕ್ಷ್ಮಿಗೆ
ನನ್ನ ಗೃಹಲಕ್ಷ್ಮಿ
ನನ್ನ ವರಲಕ್ಷ್ಮಿ
ನನ್ನ ಭಾಗ್ಯಲಕ್ಷ್ಮಿ
ನನ್ನ ಸಂತಾನಲಕ್ಷ್ಮಿ...
ನಿನ್ನ ನೋಡಿಕೊಳ್ಳುವೆ
ಕಣ್ಣಲಿ ಕಣ್ಣಿಟ್ಟು
ನಿನ್ನ ರಕ್ಷೆಗೈವೆ
ಅನುಕ್ಷಣ ಪಣತೊಟ್ಟು...
ನನ್ನರಗಿಣಿ ನೀ
ನನ್ನ ಕಂದನ
ತಾಯಿಯಾಗುವೆ ನೀ
ನನ್ನ ಮುದ್ದು ನೀ..
ಭಯಬೇಡ ಪ್ರಿಯಸತಿಯೆ
ನನ್ನೆಲವಿನ ಮಹಾರಾಣಿಯೆ
ನಿನ್ನ ಪೊರೆವೆನು ನನ್ನಯ
ನನ್ನ ಕನಸಿನರಸಿಯೆ...
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ