ಮಂಗಳವಾರ, ಮೇ 8, 2018

295. ಮಾತೆಯರ ದಿನಕ್ಕೆ ಕವನ

ತಾಯಂದಿರ ದಿನಕ್ಕೆ

ಅಮ್ಮನಿಗೆ

ಅಮ್ಮ ನಿನ್ನ ಕಂದ ನಾನು
ನನ್ನ ಹೆಡೆದು ಪಡೆದೆ ನೀನು
ಮುದ್ದು ಮಾಡಿ ಲಲ್ಲೆಗರೆದು
ತಿನ್ನಿಸುತ್ತ ಪ್ರೀತಿಯೆರೆದು

ನನ್ನ ಬದುಕ ರೂಪಿಸಿದ್ದು
ವಿದ್ಯೆ ಬುದ್ಧಿ ಕಲಿಸಿ ಕೊಟ್ಟು
ಬಾಳ ದಾರಿಯನ್ನು ತಂದಿಟ್ಟು
ಮಾತೆ ನೀನೆ ಸಾಕುತಿದ್ದು

ದನಿಯದಂತೆ ಬದುಕುತಿದ್ದು
ದ್ರವ್ಯವೆಲ್ಲ ನನಗೆ ಕೊಟ್ಟು
ನನ್ನ ದಾರಿಯ ತೋರಿಸಿಕೊಟ್ಟು
ನೀನೆ ನನ್ನ ದೃಷ್ಟಿಬೊಟ್ಟು...

ಅಮ್ಮ ನೀನೆ ನನ್ನ ಗುರು
ನಿನ್ನಿಂದಲೆ ಬದುಕು ಶುರು
ನೀನಲ್ಲವೆ ನನ್ನ ಸದ್ಗುರು
ನಾವು ನಿನಗೆ ಎಂದೂ ಬದ್ಧರು.

@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ