ಇರುವೆ ನಾ ಎಲೆಕ್ಷನ್ ಟ್ರೈನಿಂಗಲಿ
ಬರುವರು ಜನರು
ಕೋಣೆಯ ಹುಡುಕುತ
ಬರುವರು ತಮ್ಮಯ
ಸಂಖ್ಯೆಯ ಅರಸುತ..
ಅಂಚೆಯ ಮತದ
ಗಲಿಬಿಲಿ ಒಂದೆಡೆ
ಬರದವರ ಹುಡುಕುವ
ಕಲಕಲ ಹಲವೆಡೆ...
ವಾಶ್ ರೂಂ ನೀರಿನ
ಕಷ್ಟವು ಹಲವೆಡೆ
ಊಟಕು ನೀರಿಗೂ
ಕ್ಯೂ ಇಹುದೆಲ್ಲೆಡೆ...
ಸೆಕೆಯಲಿ ಬೆವತು
ವಿಧಾನವ ಕಲಿತು
ನೋಡಿ ಕಲಿತು
ಮಾಡಿ ತಿಳಿದು...
ಕೇಳಿದ್ದೆ ಕೇಳಿ
ಕಲಿತದ್ದೆ ಕಲಿತು
ಎಲೆಕ್ಷನ್ ಕಾರ್ಯವ
ಜೈಸಿ ಕೊಡುವರು...
@ಪ್ರೇಮ್@
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ