ರವಿಯ ಕರೆ
ಏಳಿರಿ ಎದ್ದೇಳಿರೆನುತ
ಕಿರಣಗಳ ಹರಿಯಬಿಟ್ಟು
ದಿನಗಳ ಸರಿಸಿಬಿಟ್ಟು
ಬೇಸರವ ಬದಿಗಿಟ್ಟು
ನಾ ಬಂದೆ, ಎದ್ದೇಳಿ!
ಮನದ ಕಸವ ಸರಿಸಿ
ಕೊಳೆಯನೆಲ್ಲ ತೊಳೆದು
ಕಸವನೆಲ್ಲ ಬಳಿದು
ಹೊಸ ದಿನವ ತಂದು
ನಾ ಬಂದೆ, ಎದ್ದೇಳಿ!
ರಾಜಕೀಯವೆಲ್ಲ ಮರೆತು
ಹೊಟ್ಟೆಪಾಡಿಗಾಗಿ ದುಡಿದು
ಹಂಚಿ ತಿಂದು ಬಾಳು ತೇದು
ಸಹನೆಯನ್ನು ನಿತ್ಯ ಪಡೆದು
ನಾ ಬಂದೆ, ಎದ್ದೇಳಿ!
ಕಷ್ಟಪಡುತ ದುಡಿದು ಬದುಕೆ
ಬಾಳಲೆಂದು ಭಯವು ಇರದು
ನಿನ್ನ ಬಾಳು ನಿನಗೆ ಎಂದು
ಗುರಿಯು ಇರಲಿ ಬದುಕಲೊಂದು
ನಾ ಬಂದೆ, ಎದ್ದೇಳಿ!
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ