ಮಂಗಳವಾರ, ಮೇ 8, 2018

296. ಭಾವಗೀತೆ- ಬದುಕ ಗಾನ

ಸ್ಪರ್ಧೆಗಾಗಿ

ಶೀರ್ಷಿಕೆ-ಬದುಕ ಸಂಗೀತ

ಬಾಳಲೆಂದು ಬಣ್ಣಬಣ್ಣದ
ಸಂಗೀತವು ಸಾರುತಿರಲಿ
ಬದುಕ ಬವಣೆ ನೀಗಿ ನೀಗಿ
ಪದಗಳ ಸಾಲು ಉಕ್ಕಿ ಬರಲಿ..

ನಿಂತ ನೆಲವು ತಾನೆ ತಾನು
ಜನಕೆ ಉಣಿಸು ನೀಡುತಿರಲಿ
ಭುವಿಯು ರವಿಯ ಸೇರಿಕೊಂಡು
ಜೀವ ಜಗವ ಜೀಕುತಿರಲಿ...

ಮನದ ತುಂಬ ಸಹಾಯವೆಂಬ
ಹೃದಯದುಸಿರು ಚಿಮ್ಮುತಿರಲಿ
ಬಾಳ ಗಾನ ಮೀಟಿ ಮೀಟಿ
ಜೋಗುಳವೂ ಹೊಮ್ಮಿ ಬರಲಿ

ಭವ್ಯತೆಯ ಬದುಕಿನಲ್ಲಿ ನಲಿವ
ನಾಟ್ಯದ ನಾದಗಾನ ಹೊಮ್ಮಲಿ
ನಿತ್ಯ ನಿರತ ನವ್ಯ ನಲಿವು
ನೋವು ಎಲ್ಲ ನಲಿವು ತರಲಿ...

@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ