ಬಾಳ ಹಣತೆ
ದೀಪವೊಂದು ತಾನೆ ಉರಿದು
ಜಗಕೆ ಬೆಳಕ ನೀಡುತಲಿದ್ದು
ನಮ್ಮ ಬದುಕು ಹಾಗೆಯಿರಲಿ
ಪರರಿಗೆ ಹಿತವಾಗುತಲಿರಲಿ..
ಹಣತೆ ತಾನು ಬೆಳಗುತಲಿರಲು
ತನ್ನ ಮೈಗೇ ಶಾಖ ಬರಲು
ಯಾರ ಮನೆಯು ಬೆಳಗುವುದೋ
ಯಾರ ಮನವು ಅರಳುವುದೋ..
ನಮ್ಮ ಬದುಕು ನಮಗೇ ಅಲ್ಲ
ಇತರರಿಗೂ ಸಹಾಯ ಬೇಕು ಅಲ್ವಾ
ನಮ್ಮ ಬದುಕು ನಾಲ್ಕೆ ದಿನಕೆ
ನಾಲ್ಕರಲ್ಲಿ ಸಹಾಯ ಬರಲಿ ಜನಮನಕೆ..
ಬಾಳ ದೀವಿಗೆ ಆರೋ ಮೊದಲು
ಬದುಕ ಬಾವುಟ ಏರಿ ಬರಲು
ಬಿಸಿಲ ದಗೆಯು ಬಂದರೂ
ಜೀವ ಉಳಿಸಿ ಪೊರೆಯಬೇಕು ಸೂರ್ಯನಂತೆ...
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ