ಗಝಲ್
ಮನುಜಾ ನೀ ನನ್ನ ಗಿಡ ಮರಗಳ ಕಡಿದಾಗ ನಾ ಮೌನ
ನೀ ನನ್ನೆದೆಯ ತೋಡಿದಾಗ ನಾ ಮೌನ
ನಿನ್ನ ಮಕ್ಕಳು ನನ್ನ ಮೇಲೆ ಕುಣಿದು ಕುಪ್ಪಳಿಸಿ
ಪ್ಲಾಸ್ಟಿಕನು ನನ್ನ ಮೇಲೆ ಬಿಸುಟಾಗ ನಾ ಮೌನ.
ನಿನ್ನ ಕತ್ತಿಯು ಪರಿಸರವ ಕತ್ತರಿಸಿ
ಕಾಂಕ್ರೀಟ ಕಾಡ ಕಟ್ಟುವಾಗ ನಾ ಮೌನ.
ನಿನ್ನ ನೆತ್ತರು ನನ್ನ ಮೇಲೆ ಬಿದ್ದು,
ನೀ ಹೋರಾಡಿ ಸತ್ತಾಗ ನಾ ಮೌನ.
ನಿನ್ನ ಕರಗಳ ಬಳಕೆಯ ವಸ್ತುಗಳು
ನನ್ನ ಮೇಲೆ ಕೊಳೆತು ನಾರುವಾಗ ನಾ ಮೌನ.
ನೀ ಮಳೆ ಬೆಳೆ ನೀರಿಲ್ಲದೆ ಪರದಾಡಿ
ವಲಸೆ ತಿರುಗಿ ನನಗೂ ವಿಷವುಣಿಸಿ ಅದ ನೀನುಣುವಾಗ ನಾ ಮೌನ.
ಪ್ರೇಮದಿ ನನ್ನ ನೋಡದೆ ತಿರುವು ಮುರುವಾಗಿಸುವ
ನಿನ್ನ ಮಂಕು ಬುದ್ಧಿ ನೋಡಿದಾಗ ನಾ ಮೌನ.
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ