ಜುಲ್ ಕಾಫಿಯಾ ಗಝಲ್
ತಾಯಿ ಭಾರತಿ ಸಲಹುವ ಕರುಣೆಯನು ನೀತಿಯನು ಮರೆಯಲಾರೆ
ಮನದಣಿಯೆ ಮಣಿದು ಬಾಗುತ ನೆರವನು ಗೆಲುವನು ಮರೆಯಲಾರೆ.
ಮೌನವಾಗಿ ಮಕ್ಕಳ ಪೊರೆವ ಮಾತೆಯ ಸಹನೆಯು ಅತ್ಯದ್ಭುತ.
ಪೌರುಷವಿರುವ ಪರಾಕ್ರಮಿಯಂತೆ ಕಾಯುವ ಬಲವನು ಉಲ್ಲಾಸವನು ಮರೆಯಲಾರೆ.
ಹಿಂದು,ಬೌದ್ಧ ,ಜೈನ, ಮುಸ್ಲಿಮ್, ಕ್ರೈಸ್ತರೆಲ್ಲರ ಸಮನ್ವಯ.
ಹಿಂದಿ,ದ್ರಾವಿಡ ಭಾಷೆಗಳ ಹರಿವನು ಛಲವನು ಮರೆಯಲಾರೆ.
ಭರತನಾಟ್ಯ, ಕೂಚುಪುಡಿ, ಬಾಂಗ್ರಾ,ಒಡಿಸ್ಸಿ,ಯಕ್ಷಗಾನಗಳ ಮಿಲನ!
ಕೇಸರಿ ಬಿಳಿ ಹಸಿರಿನ ಸವಿಯನು ಹೊಳಪನು ಮರೆಯಲಾರೆ.
ಹಣತೆಯಂದದಿ ಬಾಳ ಬೆಳಗುವ ಮನದ ಸಂಭ್ರಮ ಸಡಗರ.
ಹರಿತವಾದ ಕತ್ತಿಯಂದದಿ ಸೆಳೆವ ಪ್ರೇಮವನು ತಾಳ್ಮೆಯನು ಮರೆಯಲಾರೆ.
9901327499
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ