ಸೋಮವಾರ, ಏಪ್ರಿಲ್ 27, 2026

Beg...

Beg...

Hunter you don’t ask,  
For unwanted gifts and offerings
 Hunter Ask for what you  need
  A life that never fades

Sitting still, in your  home 
Life’s flower begins to wither
People  “never forget to count
As they are tangled in endless* counts

Paying interest, taking loans
Losing sense, and dying within
Falling, rising, never smiling
Why live like a fool this life?

Rise and fall, laugh and smile
Spend these few fleeting days
Find victory even in defeat
And man,  leave like  Buddha, in peace! 

Burning in the fires here
Bathing in the cold waters
Through all chaos and pain
Live on with gratitude

Ask for courage and bravery
A fearless mind and heart
Hunter,  beg for grand mansions
Ask for a castle without suffering
@HoneyBindu@
27.04.2026

ನವಪುರಂ ಯಾನ

ನವಪುರಂ ಯಾನ 

ಬಂತದೋ ಮಹಾಲಕ್ಷ್ಮಿ ಬಿಳಿಯ ಬಸ್ಸು
ಬೆಟ್ಟ ಹತ್ತುವಾಗಲೇ ಎಲ್ಲರೂ ಅಲ್ಲೇ ಸುಸ್ತು
ಆಗಲೇ ಬಂತು ಇಡಿಯಪ್ಪ , ಶ್ಯಾವಿಗೆ ಕಡ್ಲೆ ಗಸಿ 
ತಂದಿತು ಕವಿ ಹೃದಯಕೆ ಭಾರಿ ಹುಮ್ಮಸ್ಸು

ಸೆಕೆಯನು ತಡೆವುದೇ ಪ್ರಯಾಸದ ಮಾತು
ಹತ್ತಲು ಸರಿಯಿತು ಬೇಸರದ ಮಾತು  
ಹಸಿರಿನ ಪರಿಸರ  ಸ್ವಾಗತ ಮಾಡಿತು 
ಚಂಡೆಯ ನಾದ ಮನ ಸಂತೋಷ ತಂದಿತು

ಪುಸ್ತಕ ಸಮರ್ಪಣೆ ಮಾಡಲು ಖುಷಿಯೂ
ಮುತ್ತು ಕೊಡೆಯ ಬಣ್ಣದ ಹಿತವೂ
ಕನ್ನಡ ಮಲಯಾಳಂ ಭಾಷೆಗಳೈಕ್ಯವೂ
ಹಿರಿ ಕಿರಿಯರ ಬಳಗದ ಸಖ್ಯವೂ

ಅಂದದ ಪ್ರಶಸ್ತಿ ಪ್ರಧಾನ ಕಾರ್ಯ
ಚಂದದ ಮಕ್ಕಳ ನೃತ್ಯದ ಶೌರ್ಯ 
ಬೆಂದ ಸಾಗರದ ಮಾತಿನ ಮೌಲ್ಯ
ವಂದ್ಯ ನಾರಾಯಣ ಗುರುಗಳ ಕಾರ್ಯ

ಅಲ್ಲಲ್ಲಿ ಹಾಸ್ಯ ಚಟಾಕಿಯ ಲೇಪ
ಭಾಷಣ ಹಾಡು ಕಲಿಯಲು ಇದು ನೆಪ  
ಹಂಚಿ ತಿನ್ನುವ ಗುಣದ ಪಾಲನೆ ಇಲ್ಲಿ
ಬೇಧವೇ ಇಲ್ಲದ  ಭಾವನೆ ಎಲ್ಲರಲಿ

ಚುರುಕಿನ ಪಟಾಕಿ ಹಾರಲು ನಗುವು
ಮೂಕಾಭಿನಯಕೆ ಭಟ್ಟರ ಒಲವು
ಪುಸ್ತಕ ದೇವಿಗೆ ಸಾಹಿತ್ಯದ ಹರಿವು
ಹಲವು ಭಾಷೆಗಳ ನುಡಿ ಸಂಗಮವು

ಮಾವಿನ ಹಣ್ಣು ಚಕ್ಕುಲಿ ಹಾಗಲ
ತಿನ್ನುತ ಸಾಗಿತು ಪಯಣದ ಜಾಲ
ಹಳೆಯ ಹಾಡಲಿ ನೆನಪಿನ ಕಲರವ
ಹೊಸ ತಲೆಮಾರಿಗೆ ಸಿಂಚನ ಸೌರವ

ಸವಿ ಹೃದಯದ ಕವಿ ಮಿತ್ರರ ಸಂಗಮ
ಕವಿ ಮನಗಳ ಜೊತೆ ಬೆರೆಯುವ ಸಂಭ್ರಮ
ಹೋಳಿಗೆ ಪಾಯಸ ಪರಿಮಳ ಘಮಘಮ
ಸಹಾಯ ಹಸ್ತವ ನೆನೆಯುವ ಹೃನ್ಮನ

ತಂಪಿನ ಮಳೆಯು ಸುರಿಯಲು ಗಗನದಿ 
ಕಂಪಿನ ಕವಿ ಸಂಕುಲ ಮೆರೆಯಿತು ಹರುಷದಿ
ಬಿಸಿ ಬಿಸಿ ನೀರು ತಂಪಿನ ಮಜ್ಜಿಗೆ
ನಗುಮೊಗದಿಂದಲೇ ಬಡಿಸಿದ ಆ ಬಗೆ

ಸರ್ವರು ಖುಷಿಯನು ಪಡಲದು ಪಾವನ
ಕವಿಗಳ ಬಳಗಕೆ ನನ್ನಯ ನಮನ🙏
@ಹನಿಬಿಂದು@ 
28.04.2026

ಗಝಲ್

ಗಝಲ್

ನಮ್ಮ ಬದ್‌ಕ್‌ದ ಬಿಲೆ ನಮಕ್ ಗೊತ್ತಾವೊಡು 
ಬೇತೆಕ್ಲೆನಲಾ ಬಂಜಿದ ಬಡವು ಜನಕ್ ಗೊತ್ತಾವೊಡು

ಬಾರಿ ಮಲ್ಲ ಮಲ್ಲ ಪಾತೆರುನಕ್ಲು ಉಲ್ಲೆರ್
ಒರಿನಕ್ಲೆನ ಬೇನೆ, ಅಕ್ಲೆನ ಪಿರಾಕ್ ಗೊತ್ತಾವೊಡು

ನಡತಿನಾಯನ ಬಂಙ ಕುಲು ತಿನ್ಪಿನಾಯಗ್ ಗೊತ್ತಿಜ್ಜಿ 
ಅಪ್ಪೆ ಮಟ್ಟೆಲ್ದ ಬೇಜಾರ್ ಉಡಲ್ದ ಕಲೊಕ್ ಗೊತ್ತಾವೊಡು

ಬಿತ್ತ್ ಪಾಡ್ದ್ ಮಲ್ಲ ಮಲ್ತ್ ಬೇತೆಕ್ಲೆಗ್ ತಿನ್ಪಾವೆ ಬೆನ್ಪಿನಾಯೆ
ನಡುತ ಬೇಲೆದ ಸಗ್‌ತಿ ಪರ ಕೈಕ್ ಗೊತ್ತಾವೊಡು

ಪನಿ ಬರ್ಸೊದ ಕಾಪು ಕಂಡೊದ ಮನ್ನ್‌ಗ್ ಮಾತ್ರನಾ 
ಬರ್ಸ ಬೂರುನ ಕಜ್ಜ ಮಾನಿಲೆ ತರೆಕ್ ಗೊತ್ತಾವೊಡು..
@ಹನಿಬಿಂದು@
27.04.2026

ಬುಧವಾರ, ಏಪ್ರಿಲ್ 22, 2026

ಪುಸ್ತಕ

ಪುಸ್ತಕವೇ ದೇವರು

ಪುಸ್ತಕವೇ ದೇವರು ಜ್ಞಾನ ಕೊಡುತ್ತದೆ
ಮಸ್ತಕದಿಂದ ಸಾಗರ ಹರಿದು ಬಂದಿದೆ 
ಭಕ್ತಿಯಿಡುವ ಜ್ಞಾನದಲ್ಲಿ ಬುದ್ಧಿ ಬೆಳೆಯುವಂತಿದೆ
ಶಕ್ತಿ ಇದುವೆ ಬಾಳಿನಲ್ಲಿ ಸಹಾಯವಾಗುವಂತಿದೆ

ಅಕ್ಷರಗಳು ಸೇರಿ ಇಲ್ಲಿ ಪದಗಳಾಗಿ ಹೊಮ್ಮಿವೆ
ಪದ ಪದಗಳ ಮಾಲೆಯಲ್ಲಿ ವಾಕ್ಯವಾಗಿ ಮೆರೆದಿವೆ
ಹೊಸದಾದ ಅರ್ಥವಿಲ್ಲಿ ಬೆಳೆದು ನಮ್ಮ ಬೆಳೆಸಿದೆ
ತಲೆ ತಗ್ಗಿಸಿ ಓದುವಾಟ ತಲೆಎತ್ತಿ ಕುಳ್ಳಿರಿಸಿದೆ

ನಮ್ಮ ನಿಮ್ಮ ಎಲ್ಲ ಇಲ್ಲಿ ಪುಸ್ತಕ ಪ್ರೀತಿ ಒಗ್ಗೂಡಿಸಿದೆ
ತಮ್ಮ ತಮ್ಮ ಬರಹದಲ್ಲಿ ಜ್ಞಾನ ಹರಿದು ಬರಲಿದೆ
ಕವನ ಕಾವ್ಯ ಸಾಹಿತ್ಯದ ಹೊಳೆಯಲಿ ಮನ ಮಿಂದಿದೆ 
ಸಹಜವಾದ ಬಾಳು ಗುರಿಯ ತಲುಪಲಿಲ್ಲಿ ನಿಂತಿದೆ
@ಹನಿಬಿಂದು@
22.04.2026

पुस्तक

पुस्तक ही है ईश्वर
पुस्तक ही है ईश्वर, ज्ञान की रोशनी लाए,
अंधेरे मन के भीतर, उजियारा भर जाए।
पढ़ते-पढ़ते धीरे-धीरे, बुद्धि खिलती जाए,
जीवन की हर राह में, सही दिशा दिखाए।
अक्षर मिलकर शब्द बने, शब्दों से बात बने,
सीख की छोटी-छोटी बातें, जीवन की सौगात बने।
नए-नए अर्थों से ये, आगे बढ़ना सिखाए,
झुककर जो पढ़ता है, वो सिर ऊँचा उठाए।
पुस्तकों में छिपा हुआ, हम सबका ये प्यार,
हर पन्ने से मिलता है, ज्ञान का उपहार।
कविता, कहानी, शब्दों में, मन खो सा जाता है,
सच्चे जीवन का रास्ता, यहीं समझ में आता है।
— @हनीबिंदु
22.04.2026

ಸೋಮವಾರ, ಏಪ್ರಿಲ್ 20, 2026

ಮನದನ್ನೆ

ಮನದನ್ನೆ ... 

ಮನದನ್ನೆ ಕೈಹಿಡಿದು ಮನದೊಳಗೆ ಬರುವಾಗ
ಮನಸಿನ ಒಳಗೆ ತಕದಿಮಿತ
ಮನಸಿನ ಒಳಗೆ ತಕದಿಮಿತ ಕಣ್ಣಲ್ಲಿ
ಮದನನ ಬಾಣ ನೆಟ್ಟಂತೆ..

ಜೊತೆಯಾಗಿ ಕೈ ಹಿಡಿದು ನಡೆಯುತ್ತಾ ಸಾಗಲು 
ಸ್ವರ್ಗವೇ ಧರೆಗೆ ಇಳಿದಂತೆ 
ಸ್ವರ್ಗವೇ ಧರಿಗೆ ಇಳಿದಂತೆ ಎದೆಯೊಳಗೆ 
ಸಾವಿರ ಕುದುರೆಗಳು ಕುಣಿದಂತೆ 

ಒಟ್ಟಾಗಿ ಕುಳಿತು ಊಟವ ಮಾಡಲು
ಒಂದೆರಡು ತುತ್ತು ಹೆಚ್ಚಾಗಿ 
ಒಂದೆರಡು ತುತ್ತು ಹೆಚ್ಚಾಗಿ ತಿನ್ನುತ್ತ 
ಸಮಯ ಕಳೆದದ್ದೆ ಅರಿವಿಲ್ಲ
@ಹನಿಬಿಂದು@
20.04.2026

ಸೋಮವಾರ, ಏಪ್ರಿಲ್ 13, 2026

ಬಿಸು

ಬಿಸು 

ಬಂದಿದೆ ಬಿಸು ಹೆಸರ ಹೊಸವರ್ಷ
ತಂದಿದೆ ಸರ್ವ ಮನಕೆ ನವಹರ್ಷ
ಬೆಳೆದ ತರಕಾರಿಗಳ ಹೊಸಕ್ಕಿಯೂಟ
ಸುಂದರ ಹಸಿರು ಪ್ರಕೃತಿ ನೋಟ
@ಹನಿಬಿಂದು@
 13.04.2026

ಶನಿವಾರ, ಏಪ್ರಿಲ್ 4, 2026

ಎಲ್ಯ ಕತೆ

ಪಾಸ್ 

ಆಯೆ ಈ ವೊರ್ಸೊಡು ಪತ್ತನೆ ಕ್ಲಾಸ್. ಪಾಸ್ ಆಪಿನ ವಾ ಲಕ್ಷನಲಾ ಇತ್ತಿಜಿ. ಅವು ಆಯಗ್ಲಾ ಗೊತ್ತಿತ್ತ್‌ಂಡ್. ಆಯೆ ಇಡೀ ವೊರ್ಸೊಡು ಆ ಒರೆಸುನ ಮೊಬೈಲ್ ಪೋನುನು ಒರೆಸ್ ಒರೆಸ್ ದ್ ಕಾಲ ಕಲೆಯೆ. ಇತ್ತೆ ಬೊಬ್ಬೆ ಪಾಡ್ಂಡ ದಾದ ಪ್ರಯೋಜನ? ಐಕ್ ಆಯೆ ದೇವೆರೆಡ ನಟ್ಟಿಯೆ. ಪರಕೆ ದೀಯೆ. ದಾದನೊ ಪುಣ್ಯೊಗು ಬರಿಟ್ ಶೋಕು ಬರೆಪಿನ ಪೊನ್ನು ಕುಲ್ದಿತ್ತಲ್. ಪೂರ ಪಾಸ್ ಆಪಿನಾತ್ ಪಂದ್, ತೋಜಾದ್ ಕೊರಿಯಲ್. ಅನ್ನೆ ಪಾಸ್. ‌ಟೀಚರ್ನಕ್ಲೆನ ವಾ ಪುಗರಾಟ! 
@ಹನಿಬಿಂದು@
04.04.2026

ಗುರುವಾರ, ಏಪ್ರಿಲ್ 2, 2026

ಟಂಕಾ

ಟಂಕಾ

ಇಲ್ಲದುಲಾಯಿ 
ಕುಲ್ಲುದೇ ಬೆಲೆಯಿತ್ತೆ
ಪಿದಾಯಿ ಇಜ್ಜಿ
ವಿಟಮಿನ್ ಡಿ  ಬೋಡು
ಬೇಲೆ ಇಡೀ ದಿನಗೆ...
@ಹನಿಬಿಂದು@
02.04.2026