ಸೋಮವಾರ, ಫೆಬ್ರವರಿ 16, 2026

ತುಳು ಕಬಿತೆ

ಪಾತೆರ ಕತೆ ಕಬಿತೆ
ಕಲ್ಪುಲ ಮಗ....

ಮಗೆ : ಚೆನ್ನೆಮಣೆ ಗೊಬ್ಬುನೆಂಚ ಪನ್ಲೆ ಎಂಕ್ ಅಮ್ಮ
ಅಪ್ಪೆ: ಐಕ್  ಮನೆಲ ಕಾಯಿಲ ಬೋಡು ಮಗ ನಮ್ಮ
ಮಗೆ: ಅಂಗಡಿಡ್ದ್ ಕಂತ್ ಕೊರ್ಲೆ ಅಮ್ಮ ಎಂಕ್ ಅವೆನ್
ಅಪ್ಪೆ: ಅಂಗಡಿಡ್ ತಿಕ್ಕುನತ್ತ್ ಮರಟ್ ಮಲ್ಪುನವೆನ್

ಮಗೆ: ಮರನ್ ಕನಕ, ನಮಲ ಮಲ್ತ್ ಗೊಬ್ಬುಗತ್ತೆ ಅಮ್ಮ
ಅಪ್ಪೆ: ಗಿಡ ಮರೊನು ಕಡ್ತ್‌ಂಡ ಸಾಪ ಪನ್ಪೆರತ್ತ ತಿಮ್ಮ..
ಮಗೆ: ಅಪಗ ಯಾನ್ ಅವೆನ್ ಇನಿ ಗೊಬ್ಬುನೆಂಚ ದೇವೆರೆ
ಅಪ್ಪೆ: ಅಜ್ಜಿ ಮಲ್ತ್ ಕೊರಿನ ಮನೆ ಅಟ್ಟೊಡಿಪ್ಪು ತೂಕ

ಮಗೆ: ಇತ್ತೆನೆ ಯಾನ್ ಅಟ್ಟ ಮಿತರ್ ನಾಡ್‌ದೊರ ತೂಪೆ
ಅಪ್ಪೆ: ಆವು ಮಗ ಲಲ್ತಕ್ಕನ  ಇಲ್ಲಗೊರ ಪೋಪೆ
ಮಗೆ: ಅಲ್ಪ ದಾದ ಉಂಡು ನಮಕ್ ಇತ್ತೆ ಪೋಪಿ ಲೆಕ್ಕ
ಅಪ್ಪೆ: ಗುಲಗುಂಜಿದ ಮರ ಉಂಡು ಕಾಯಿ ಬೂರ್‌ದಿಪ್ಪು 

ಮಗೆ: ಆವು ಅಪ್ಪೆ ಬೇಗ ಕನಲೆ ಗೊಬ್ಬು ಸುರು ಮಲ್ಪುಗ
ಅಪ್ಪೆ: ಯಾನ್ ಇತ್ತೆ ಪತೊಂದು ಬರ್ಪೆ ನಾಡ್ ದೀಲ ಬೇಗ
ಮಗೆ: ಗೊಬ್ಬರಿನಿ ಪೂರ ಕಲ್ತ್  ಯಾನೆ ಅವೆಟ್ ಗೆಂದೊಡು 
ಅಪ್ಪೆ: ದೇವೆರೆಡ್ಡೆ ಮಲ್ಪಡ್ ಮಗ ಇನಾಮು ನಿಕ್ಕೆ ತಿಕ್ಕಡ್ 
@ಹನಿಬಿಂದು@
17.02.2026

ಶನಿವಾರ, ಫೆಬ್ರವರಿ 14, 2026

ಮಲ್ಲ ಬಿನ್ನೆ

ಮಲ್ಲ ಬಿನ್ನೆ

ಪಾರ್ ಬತ್ತ್ ಪಂಡಲಾಲ್ ಎಲ್ಯ ಬಾಲೆಯೆ
ಅಮ್ಮ ಬೇಗ ಬಲೇ ಇತ್ತೆ ಮೂಲು ತೂಲೆಯೆ
ದಾದ ಆಂಡ್ ಪಂದ್ ಯಾನ್ ಪೋಡ್ದ್ ಪೋಯೆಯೆ
ಬೇಗ ಬತ್ತ್ ತೂನಗಲ್ಪ ಮಲ್ಲ ಬಿನ್ನೆಯೆ//

ಎನನೆ ತೂದು ಅಂಚಿ ಇಂಚಿ ಮಂಡೆ ತಿರ್ಗಯೆ
ಈರ್ ಇತ್ತೆ ತೂಯರಾಂದ್ ಮೋನೆ ತೋಜಯೆ
ಪೋಡಿ ಪೋಯಿ ಯಾನ್ ದೂರ ಉಂತು ತೂಯೆಯೆ
ಆಯೆ ಬೇಗ ಪೋವಡ್ಂದ್ ನಮಲ ಕಾತಯೇ//

ಮಲ್ಲ ಬಿನ್ನೆ ಒವ್ವ ಎಲಿನ್ ಗಿಡ್ತೊಂದು ಬೈದಿನಿ
ಕೈಕ್ ತಿಕ್ಕಂದಿನೆಕ್ ಅಲ್ಪ ಕಂಡ್ ಕುಲ್ದಿನಿ
ಸಾಕಾದ್ ಆಯೆ ಅಲ್ಪ ಉಂತುದು ನೀರ್ ನಾಡ್ದಿನಿ
ನಮ್ಮ ಬಾಲೆ ಗೊಬ್ಬು ಗೊಬ್ಬುದು ಆಯನ್ ತೂಯಿನಿ//

ತೂದು ಆಲ್ ಪೋಡಿ ಪೋದು ನಮಕ್ ಪಂಡಿನಿ
ಬೂರ್ದು ಲಕ್‌ದ್ ಪಾರ್ ಬತ್ತ್ ನಮಕ್ ಪಂತಿನಿ
ನಮ ಆಯನ್ ತೂದು ಬಾಕಿ ಶೋಕುದ ಜಿಡೆಯೇ 
ಬುಡ್‌ಪದಾಯೆ ಉಂತಿ ಪೊರ್ಲು ತೂದು ಮರ್ಲ್ಯಯೆ//

ಸೆಕೆಕ್ ಮಾತ ಜೀವಿಲೆಗ್ಲಾ ನೀರ್ ಬೋಡುಯೆ
ಕಾಡ್ ಇಜ್ಜಿ ತಲ್ಮೆನಿಜ್ಜಿ  ಮಾತ ದೂಲುಯೆ
ಅಲ್ಪ ಅಲ್ಪ ನೀರ್ ದೀಕ , ಜೀವ ಬದ್‌ಕಡ್ 
ಯಾನ್ಲ ಈರ್ಲ ಮಾತ್ರ ಅತ್ತ್ ಮಾತ ಒರಿಯಡ್//
@ಹನಿಬಿಂದು@
14.02.2026

ಸೋಮವಾರ, ಫೆಬ್ರವರಿ 9, 2026

ಮುಟ್ಟನ್ನು ಮೆಟ್ಟಿ ನಿಲ್ಲೋಣ

ಮುಟ್ಟನು ಮೆಟ್ಟಿ ನಿಲ್ಲೋಣ

ಬನ್ನಿರಿ ನಾರೀ ಶಕ್ತಿ ಮಣಿಗಳೆ
ಮುಟ್ಟಿನ ಗುಟ್ಟನು ಕೇಳೋಣ..
ಕಷ್ಟದ ದಿನಗಳ ಸುಲಭದಿ ಎದುರಿಸೋ
ನೈಸರ್ಗಿಕ ಕ್ರಿಯೆಯನು ತಿಳಿಯೋಣ..//ಬನ್ನಿರಿ//

ಹುಡುಗಿಯು ಮಹಿಳೆ ಆಗುವ ಕಾಲಕೆ
ಅಂಡಾಣು ಬಿಡುಗಡೆ ಸಹಜವದು
ರಕುತದ ರೂಪದಿ ದೇಹವ ತ್ಯಜಿಸೆ
ಮೂರ್ನಾಲ್ಕು ದಿನಗಳ ಕಾಲವದು..//ಬನ್ನಿರಿ//

ಹಿರಿಯರು ಹೊರಗಡೆ ಕೂರಿಸಿ ಬಿಟ್ಟರು
ದೇಹಕೆ ವಿಶ್ರಾಂತಿ ಸಿಗಲೆಂದು
ಕಾಯದ ಸ್ವಚ್ಛತೆ ಬೇಕದು ಎಂದಿಗೂ
ಬಳಸಿರಿ ಶುದ್ಧ ಬಟ್ಟೆಯನು//ಬನ್ನಿರಿ//

ಹೆದರುತ ಕುಳಿತು ಬೇಸರ ಪಡದಿರು
ಸರ್ವ ಹೆಣ್ಣಿಗೂ ಬರುವುದದು
ಮದುವೆಯ ಬಳಿಕ ವೀರ್ಯಾಣು ಸೇರಿ
ಸಂತಾನ ಅಭಿವೃದ್ಧಿ ಆಗುವುದು//ಬನ್ನಿರಿ//

ಮೆನ್ ಸ್ಟುರಲ್ ಕಪ್ಪೋ ನ್ಯಾಪೀ ಪ್ಯಾಡೋ
ಉಪಯೋಗ ನೀ ಕಲಿ ನಿತ್ಯಕ್ಕೆ
ಸ್ವಚ್ಚ ಅಂಗಗಳ ಇಡುತಲಿ ಕಾಪಾಡು
ಆರೋಗ್ಯ ಮುಖ್ಯವು ದೇಹಕ್ಕೆ//ಬನ್ನಿರಿ//

ಹುಡುಗರು ಕೂಡ ತಾಯಿ, ಸಹೋದರಿ
ಮನಗಳ ಅರಿತು ಸಹಕರಿಸಿ
ಮುಟ್ಟಿನ ದಿನದಲಿ ಕೆಲಸವ ಹಂಚುತ
ವಿಶ್ರಾಂತಿ ನೀಡಿರಿ ಮನೆಯಲ್ಲಿ..//ಬನ್ನಿರಿ//

ಮುಟ್ಟದೆ ಇರಲು ಕಾರಣವಿಲ್ಲ
ವಿಜ್ಞಾನದ ಪುರಾವೆ ಇದಕ್ಕಿಲ್ಲ
ಕಬ್ಬಿಣದಂಶ ಕಡಿಮೆ ಆಗಲು
ದೇಹವು ಸುಸ್ತಿಗೆ ಜಾರುವುದಲ್ಲ//ಬನ್ನಿರಿ//

ಹೊಟ್ಟೆಯ ನೋವು ನರಗಳ ಸೆಳೆತ
ನಡೆಯಲು ಕಾಲದು ಎಳೆಯುವುದು
ಪ್ರೀತಿ ಆಪ್ತತೆ ಇರಲು ಮನಸಿಗೆ
ಖುಷಿಯಲಿ ಎಲ್ಲಾ ಮರೆಯುವುದು//ಬನ್ನಿರಿ//

ಬದುಕಿನ ಒಂದು ಸಹಜ ಪ್ರಕ್ರಿಯೆ
ಹೆದರಲೇ ಬೇಡಿ ಮಹಿಳೆಯರೇ
ತಿಂಗಳಿಗೊಮ್ಮೆ ಬರುವ ಮುಟ್ಟನು
ಮೆಟ್ಟಿ ನಿಲ್ಲೋಣ ಲಲನೆಯರೇ//ಬನ್ನಿರಿ//
@ಹನಿಬಿಂದು@
14.03.2024

ನನ್ನ ಕವಿತೆ

ನನ್ನ ಕವಿತೆ

ನನ್ನ ಕವಿತೆ ಸುತ್ತ ಚಿಟ್ಟೆ
ನೃತ್ಯ ಮಾಡಿ ಬರುತಲಿ
ಕಾವ್ಯ ದೇವಿ ಮೈಯ ಮರೆತು ee

ಲೀನವಾಗಿ ನಲಿಯಲಿ 

ರಾಗ ಭಾವ ಲಯ ಸ್ವರಗಳು
ಒಟ್ಟಿನಲ್ಲಿ ಬೆರೆಯಲಿ
ನಿತ್ಯ ಸತ್ಯ ಗತ್ಯ ಮಿಳಿಸಿ
ಕತ್ತಿನಲ್ಲಿ ಕುಣಿಯಲಿ

ನಾಲಗೆಯಲ್ಲಿ ಕುಣಿಯುತಲಿ 
ನೋಟದಲ್ಲಿ ಕಾಣುತಲಿ 
ಭಾವದಲಿ ಸ್ಪುರಿಸುತಲಿ 
ನೋವಿನಲಿ ನಗುವಿರಲಿ

ನೋವನೆಲ್ಲ ಅಳಿಸುತಲಿ 
ಕಷ್ಟಗಳ ಸರಿಸುತಲಿ
ಚಿಂತೆಗಳ ಬಿಸುಟುತಲಿ 
ಕನ್ನಡವ ಹರಸುತಲಿ 
@ಹನಿಬಿಂದು@
27.04.2025

ಜನ ಗಣತಿ

ಜನಗಣತಿ

ಲೆಕ್ಕಾಚಾರವು ಬೇಕಾಗಿತ್ತು ಭಾರತೀಯರ ಅಂದು 
ಏಳ್ಗೆಗಾಗಿ ಸರ್ವರ ಉತ್ತಮ ದೇಶದ ಬಂಧು
ಅದುವೇ ಯೋಜನೆಗಳ ಹಾಕಿಕೊಳ್ಳಲು ಸಿಂಧು
ಜನಮನಗಳ ಲೆಕ್ಕವಿದು ಮಾಡುತ್ತಿರುವೆವು ನಾವೂ ಇಂದು 

ಗಂಡೆಷ್ಟು ಹೆಣ್ಣೆಷ್ಟು, ಕಲಿತವರೆಷ್ಟು ಅವಿದ್ಯಾವಂತರೆಷ್ಟು
ಬಡವರೆಷ್ಟು ಸಿರಿವಂತರೆಷ್ಟು ಮನೆ ಇಲ್ಲದವರು, ಇರುವರೆಷ್ಟು
ಕೃಷಿಕರೆಷ್ಟು ಸರಕಾರಿ ಉದ್ಯೋಗಿಗಳೆಷ್ಟು
ನಾವೆಷ್ಟು ನೀವೆಷ್ಟು ಜನಸಂಖ್ಯೆಯೆಷ್ಟು?

ಲೆಕ್ಕಾಚಾರದ ಪಟ್ಟಿ ಬರೆಯುತ್ತಿದ್ದುದು ಅಂದಲ್ಲಿ
ಇಂದಿಲ್ಲಿ ಮೊಬೈಲ್ ಫೋನುಗಳ ಹಾವಳಿ
ಸರ್ವ  ವರ್ಗಗಳ ನುಂಗಿ ಬಿಟ್ಟಿದೆ ತಾ ಮರೆಯುತ್ತಾ ಇಲ್ಲಿ
ಅಲ್ಪ ಕಾಗದದ ಕಾರ್ಯ ಉಳಿದುದೆಲ್ಲ ಅಂತರ್ಜಾಲದಲಿ

ಲೆಕ್ಕ ಬೇಕಾಗಿದೆ ನಿಜ ಬಡವ ಬಲ್ಲಿದರದ್ದು
ಬಿಟ್ಟು ಬಿಡೋಣ ಜಾತಿ ಮತಗಳ ಸದ್ದು 
ಒಂದಾಗಿ ಬಾಳೋಣ ಇಲ್ಲಿ ನಾವೆಲ್ಲಾ ಒಂದು
ಭಾರತೀಯರು ಒಗ್ಗಟ್ಟಿನಲ್ಲಿ ಬದುಕೋಣ ಎಂದು....
@ಹನಿಬಿಂದು@
09.02.2026

ಐನೆಸಲ್

ತರೆ ಬೇನೆ (ಐನೆಸಲ್)

ಬಂಡೆಗ್ ಸುತ್ಯೆಡ್ ಆಕಿ ಲೆಕ್ಕ
ಬೂಮಿ ಪೂರ ನಡುಗಿ ಲೆಕ್ಕ
ಜನ ಮಾನಿ ಪಾತೆರ್ಂಡ ಕೋಪ
ಗದ್ದಲ ಗೌಜಿ ಕೇನೆರೆ ಆವಂದ್ ಪಾಪ
ಅವು ಒರ್ಕೆನ್ಯಿ ಓ ಯಮುನಕ್ಕ
@ಹನಿಬಿಂದು@
 09.02.2026

ಭಾನುವಾರ, ಫೆಬ್ರವರಿ 8, 2026

ಗಣತಿ

ಜನಗಣತಿ

ಲೆಕ್ಕಾಚಾರವು ಬೇಕಾಗಿತ್ತು ಭಾರತೀಯರ ಅಂದು 
ಏಳ್ಗೆಗಾಗಿ ಸರ್ವರ ಉತ್ತಮ ದೇಶದ ಬಂಧು
ಅದುವೇ ಯೋಜನೆಗಳ ಹಾಕಿಕೊಳ್ಳಲು ಸಿಂಧು
ಜನಮನಗಳ ಲೆಕ್ಕವಿದು ಮಾಡುತ್ತಿರುವೆವು ನಾವೂ ಇಂದು 

ಗಂಡೆಷ್ಟು ಹೆಣ್ಣೆಷ್ಟು, ಕಲಿತವರೆಷ್ಟು ಅವಿದ್ಯಾವಂತರೆಷ್ಟು
ಬಡವರೆಷ್ಟು ಸಿರಿವಂತರೆಷ್ಟು ಮನೆ ಇಲ್ಲದವರು, ಇರುವರೆಷ್ಟು
ಕೃಷಿಕರೆಷ್ಟು ಸರಕಾರಿ ಉದ್ಯೋಗಿಗಳೆಷ್ಟು
ನಾವೆಷ್ಟು ನೀವೆಷ್ಟು ಜನಸಂಖ್ಯೆಯೆಷ್ಟು?

ಲೆಕ್ಕಾಚಾರದ ಪಟ್ಟಿ ಬರೆಯುತ್ತಿದ್ದುದು ಅಂದಲ್ಲಿ
ಇಂದಿಲ್ಲಿ ಮೊಬೈಲ್ ಫೋನುಗಳ ಹಾವಳಿ
ಸರ್ವ  ವರ್ಗಗಳ ನುಂಗಿ ಬಿಟ್ಟಿದೆ ತಾ ಮರೆಯುತ್ತಾ ಇಲ್ಲಿ
ಅಲ್ಪ ಕಾಗದದ ಕಾರ್ಯ ಉಳಿದುದೆಲ್ಲ ಅಂತರ್ಜಾಲದಲಿ

ಲೆಕ್ಕ ಬೇಕಾಗಿದೆ ನಿಜ ಬಡವ ಬಲ್ಲಿದರದ್ದು
ಬಿಟ್ಟು ಬಿಡೋಣ ಜಾತಿ ಮತಗಳ ಸದ್ದು 
ಒಂದಾಗಿ ಬಾಳೋಣ ಇಲ್ಲಿ ನಾವೆಲ್ಲಾ ಒಂದು
ಭಾರತೀಯರು ಒಗ್ಗಟ್ಟಿನಲ್ಲಿ ಬದುಕೋಣ ಎಂದು....
@ಹನಿಬಿಂದು@
09.02.2026

ಶನಿವಾರ, ಫೆಬ್ರವರಿ 7, 2026

tv program

https://youtu.be/KGOS-us2Deo

ಹೀಗೊಂದು ಅಪೀಲು

ಹೀಗೊಂದು ಅಪೀಲು....

     ನಾನು ಯಾರಿಂದಲೂ ಯಾವಾಗಲೂ ಯಾವುದೇ ಪ್ರತಿಕ್ರಿಯೆಗಳನ್ನು ನಿರೀಕ್ಷಿಸುವುದಿಲ್ಲ. ಏಕೆಂದರೆ ನಾನು ಸಾಹಿತಿ. ಹಾಗಾಗಿ ನಾನು ನನ್ನ ಕೆಲಸವನ್ನು ನನ್ನಷ್ಟಕ್ಕೆ ಮುಂದುವರಿಸುತ್ತಾ ಹೋಗುತ್ತಿರುತ್ತೇನೆ. ಅದು ನನ್ನ ಸ್ವಭಾವ. ಆದರೆ ಬೇರೆಯವರು ಇತರರ ಬಗ್ಗೆ ಅಭಿಪ್ರಾಯ ಕೇಳಿದಾಗ, ನಿಮ್ಮನ್ನು ತುಂಬಾ ಪ್ರಶಂಸಿಸಿ, ನೀವು ತುಂಬಾ ಒಳ್ಳೆಯವರು, ಸಹಾಯಕರು, ಏನಾದರೂ ಕೇಳಿದರೆ ತಕ್ಷಣ ಉತ್ತರ ಕೊಡುತ್ತೀರಿ ಎಂದು ಹೇಳುತ್ತಾ ಮಾತನಾಡಿದಾಗ  ನಾನು, “ಹಾಗೆ ಅನಿಸಲ್ಲ. ಅವರು ನನ್ನ ಯಾವತ್ತೋ ಹಾಕಿದ ಮೆಸೇಜ್‌ಗೆ ಇನ್ನೂ ಉತ್ತರಿಸಿಲ್ಲ” ಎಂದು ನೇರವಾಗಿ ಸತ್ಯವನ್ನು ಇದ್ದ ಹಾಗೆ ಹೇಳುವ ನೇರ ವ್ಯಕ್ತಿ ನಾನು. ಅಷ್ಟೇ ಮಾತು ನಡೆಯುವುದು.. ನಾನು ಯಾರನ್ನೂ ಅವರ ಬೆನ್ನ ಹಿಂದೆ ಮಾತನಾಡಲು ಕೂಡ ಇಷ್ಟಪಡುವುದಿಲ್ಲ. ಅದು ನನ್ನ ಸ್ವಭಾವ ಮತ್ತು ಮನೋಭಾವ. ಏಕೆಂದರೆ ಬದುಕಿನಲ್ಲಿ ಅವರವರ ಕಷ್ಟ ಅವರವರಿಗೆ ಮಾತ್ರ ಗೊತ್ತಿರುತ್ತದೆ. ಇತರರಿಗೆ ಅದು ಅಷ್ಟು ಚೆನ್ನಾಗಿ ಅರ್ಥ ಆಗದು. ನನಗೆ ನನ್ನ ಕಷ್ಟವೇ ದೊಡ್ಡದು, ನಿಮಗೆ ನಿಮ್ಮ ಕಷ್ಟವೇ ದೊಡ್ಡದು. ಪ್ರಪಂಚವೇ ಹಾಗೆ ಅಲ್ಲವೇ?

ಎರೆಯವರು ನಿಮ್ಮ ಬಗ್ಗೆ ಏನಾದರೂ ಹೇಳಿದರೆ, ನಾನು ನನ್ನ ಅಭಿಪ್ರಾಯ ಹೇಳಿದ ಕೂಡಲೇ ಅದನ್ನು ನಿಮಗೆ ತಿರುಗಿ ಹೇಳಿಬಿಟ್ಟರೆ ನನಗೆ ನೋವಾಗದೆ? ಇದು ಕೆಲವರ ಗುಣ. ಅದು ಒಳ್ಳೆಯದೋ ಕೆಟ್ಟದೋ ಎಂದು ನಾನು ನಿರ್ಧರಿಸಲು ಸಾಧ್ಯವಿಲ್ಲ. ಆದರೆ ಅವರ ಮನಸ್ಸಿನಲ್ಲಿ ಯಾವುದೇ ಮಾತುಗಳು ಮತ್ತು ಯೋಚನೆಗಳು ನಿಲ್ಲುವುದಿಲ್ಲ ಎನ್ನುವುದು ಸತ್ಯವಾದ ಮಾತು. ಅವರು ಓಪನ್ ಮೈಂಡೆಡ್ ಆಗಿದ್ದು, ತನ್ನ ಸ್ನೇಹಿತರ ಜೊತೆ ತನಗೆ ಗೊತ್ತಿರುವುದನ್ನು ಎಲ್ಲವನ್ನೂ  ಹಂಚಿಕೊಳ್ಳುತ್ತಾರೆ. ಆದರೆ ಅವರಲ್ಲಿ ಒಂದು ಗುಣ ಖಂಡಿತಾ ಇದೆ , ಅವರಿಗೆ ಬದುಕಿನ ಯಾವುದೇ ರಹಸ್ಯವನ್ನು ಕಾಯ್ದಿಡಲು ಸಾಧ್ಯವಾಗದು. ತಕ್ಷಣ ತನ್ನ ಅನಿಸಿಕೆಯನ್ನು ಯಾರಲ್ಲಿ ಆದರೂ ಹೇಳಿ ಬಿಡಬೇಕು.

ನಾನು ಅವರ ಓಪನ್ ಅಭಿಪ್ರಾಯಗಳು ಕೆಟ್ಟವು ಎಂದು ಹೇಳುವುದಿಲ್ಲ. ಆದರೆ ಅದು ಹಲವಾರು ಬಾರಿ ಯಾರನ್ನಾದರೂ ನೋಯಿಸಬಹುದು. ನಮ್ಮ ಸ್ವಭಾವ ನೇರವಾಗಿರಲಿ ಅಥವಾ ಪರೋಕ್ಷವಾಗಿರಲಿ, ಅದು ಇತರರನ್ನು ನೋಯಿಸಬಾರದು. ನಮ್ಮ ಸ್ನೇಹಿತರ ಸ್ವಭಾವವನ್ನು ನಿಧಾನವಾಗಿ ಅವರಿಗೆ ತಿಳಿಸಬೇಕು, ಒಮ್ಮೆಲೆ ಅಚಾನಕ್ ಹೇಳಬಾರದು. ಕೌನ್ಸೆಲರ್  ಆಗಿ ಮತ್ತು ಸೈಕಾಲಜಿ ವಿದ್ಯಾರ್ಥಿನಿಯಾಗಿ, ಇದು ನನ್ನ ಅಭಿಪ್ರಾಯ.
ಯಾರೋ ನಿಮ್ಮ ಬಗ್ಗೆ ಬೇರೆಯವರಲ್ಲಿ ಕೇಳಿ, ಕೆಲವು ವಿಷಯಗಳನ್ನು ಅವರಿಂದ  ತಿಳಿದುಕೊಂಡು, ಅದನ್ನು ತಕ್ಷಣವೇ ನಿಮಗೆ ಹೇಳಿಬಿಡಬಾರದು. ಆ ಸಮಯದಲ್ಲಿ ನೀವು ಯಾವ ಮನಸ್ಥಿತಿಯಲ್ಲಿ ಇರುತ್ತೀರೋ ಗೊತ್ತಿಲ್ಲ. ನೀವು ಅದನ್ನು ಹೇಗೆ ಸ್ವೀಕರಿಸುತ್ತೀರೋ ಗೊತ್ತಿಲ್ಲ. 

ನನ್ನ ಅನುಭವದ ಪ್ರಕಾರ, ಏಕೆಂದರೆ ನನಗೆ ಬಹಳಷ್ಟು ಸ್ನೇಹಿತರು ಇದ್ದಾರೆ, ನಮ್ಮ ಹತ್ತಿರದ ಸ್ನೇಹಿತರ ಸ್ವಭಾವವನ್ನು ಸರಿಪಡಿಸಲು ನಾವು ಮೊದಲು ಅವರ ಮನಸ್ಥಿತಿ ಮತ್ತು ಮನೋಭಾವವನ್ನು ಅರ್ಥಮಾಡಿಕೊಳ್ಳಬೇಕು. ನಂತರ ನಿಧಾನವಾಗಿ ಅವರನ್ನು ಮನವರಿಕೆ ಮಾಡಬೇಕು. ಏಕಾಏಕಿ ಹೇಳುವುದು ಒಳ್ಳೆಯದಲ್ಲ. ಅವರು ನನ್ನ ಒಳ್ಳೆಯ ಸ್ನೇಹಿತರಲ್ಲಿ ಒಬ್ಬರು. ಆದರೆ ಇದೇ ಕಾರಣಕ್ಕೆ ಕೆಲವರು “ಮಹಿಳೆಯರಿಗೆ ಯೋಚನೆ ಇರುವುದಿಲ್ಲ” ಎಂದು ಹೇಳುತ್ತಾರೆ. ಕೆಲವರು ವ್ಯಕ್ತಿಯ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳದೆ ತಕ್ಷಣ ಮಾತನಾಡುತ್ತಾರೆ.
ನಾನು ಕೆಲವರಿಗೆ ಇದನ್ನು ಆಗಾಗ ಹೇಳುತ್ತೇನೆ. ಅವರು ತಕ್ಷಣ ಪ್ರತಿಕ್ರಿಯಿಸದೆ ಮೊದಲು ಯೋಚಿಸಿ, ನಂತರ ನಿಧಾನವಾಗಿ ಮನವರಿಕೆ ಮಾಡಬೇಕು. ಏಕೆಂದರೆ ನಾವು ಎಲ್ಲರೂ ಪರಿಪಕ್ವರು ಮತ್ತು ಸಮಾಜದಲ್ಲಿ ಹೇಗೆ ವರ್ತಿಸಬೇಕು, ಯಾರೊಂದಿಗೆ ಹೇಗೆ ಎಷ್ಟು ಮಾತನಾಡಬೇಕು ಎಂಬುದನ್ನು ತಿಳಿದಿದ್ದೇವೆ. ನಾವು ನಮ್ಮ ಮನಸ್ಸು ಸೂಚಿಸುವಂತೆ ವರ್ತಿಸುತ್ತೇವೆ. ಮನಸ್ಸು ಕಂಪ್ಯೂಟರ್‌ನಂತಿದೆ. ಅದರೊಳಗೆ ಇರುವುದನ್ನೇ ಅದು ಹೊರಹಾಕುತ್ತದೆ. AI ಕೂಡ ಗೂಗಲ್‌ನಿಂದ ಮಾಹಿತಿ ಪಡೆದುಕೊಳ್ಳುವ ಹಾಗೆ. ಅದೇ ರೀತಿಯಾಗಿ ನಾವು ನಮ್ಮ ಮನಸ್ಸಿನಲ್ಲಿ ಸಕಾರಾತ್ಮಕತೆ, ಗೌರವ, ಪ್ರೀತಿ, ಕಾಳಜಿ, ಸ್ನೇಹ ಇತ್ಯಾದಿಗಳನ್ನು ತುಂಬಿಕೊಳ್ಳಬೇಕು. ಅದು ಅವರ ಸ್ನೇಹದ ಸ್ವಭಾವವಾಗಿರಬಹುದು. ಆದರೆ ಕೆಲವೆಡೆ ಅದು ಇತರರಿಗೆ ನೋವುಂಟು ಮಾಡುತ್ತದೆ. ಹಾಗೆ ನಾವು ಮಾಡಬಾರದು. 

ಇದು ಹಲವು ಬಾರಿ ನಡೆದಾಗ ನಾವು ಬುಧ್ಧಿ ಕಲಿಯದೆ ಹೋದರೆ ನಾವು ಮೂರ್ಖರು. ಯಾರೋ ನಿಮ್ಮ ಗೆಳೆಯರು ನಿಮ್ಮ ಬಗ್ಗೆ ಕೇಳಿ, ನಂತರ ನನ್ನ ಮಾತುಗಳನ್ನು ನಿಮಗೆ ಹಾಗೆಯೇ ಹೇಳಿಬಿಟ್ಟರು ಅಂದುಕೊಳ್ಳಿ. ಅವರು ನನ್ನ ಒಳ್ಳೆಯ ಸ್ನೇಹಿತೆ ಅಥವಾ ಗೆಳೆಯ ಆದ್ದರಿಂದ, ನಾನು ಅವರ ಮೇಲೆ ನಂಬಿಕೆ ಇಟ್ಟು ನನ್ನ ಅಭಿಪ್ರಾಯವನ್ನು ನೇರವಾಗಿ ಹಂಚಿಕೊಂಡಿರಬಹುದು. ಅದು ಯಾರಿಗೂ ನೋವು ಕೊಡುವ ಉದ್ದೇಶದಿಂದ ಅಲ್ಲ. ಬದಲಾಗಿ ಒಬ್ಬ ವ್ಯಕ್ತಿಯ ಬಗ್ಗೆ ನಮ್ಮ ಅಭಿಪ್ರಾಯವಷ್ಟೇ. ಆದರೆ ಅವರು ಅದನ್ನು ಮತ್ತೆ ಅವರಿಗೆ ನೇರವಾಗಿ  ಹೇಳಿ ಬಿಡುವುದು ಎಷ್ಟು ಸರಿ?. ಅದು ಇಬ್ಬರಿಗೂ ನೋವು ತರಬಹುದು. ಮುಂದೆ ಒಂದು ದಿನ  ನೀವು ಮತ್ತೊಬ್ಬರ ಬಗ್ಗೆ ಅವರಲ್ಲಿ ಮಾತನಾಡಿದರೆ, ಅವರು ಅದನ್ನೂ ಇನ್ನೊಬ್ಬರಿಗೆ  ನೇರವಾಗಿ ಹೇಳಿ ಅವರಿಗೂ ನೋವು  ತರುವಂತೆ ಮಾಡಿ ಬಿಡಬಹುದು. ಇಂಥವರ ಜೊತೆ ಏನಾದರೂ ಮಾತನಾಡುವಾಗ ನಾವು ತುಂಬಾ ಕೇರ್ಫುಲ್ ಆಗಿರಬೇಕು. ಏಕೆಂದರೆ ನಾವು ಧನಾತ್ಮಕವಾಗಿ ಮಾತನಾಡಿದರೂ ಕೂಡ ಎದುರಿಗೆ ಅದನ್ನು ಸ್ವೀಕರಿಸುವ ವ್ಯಕ್ತಿಯ ಮನೋಭಾವ ಎಂಥದ್ದು ಎಂದು ನಮಗೆ ತಿಳಿದಿರುವುದಿಲ್ಲ. ಹಾಗಾಗಿಯೇ ಬಹಳ ಒಬ್ಬೊಬ್ಬರ  ಕಡೆ ತಪ್ಪು ಅಭಿಪ್ರಾಯ ಹುಟ್ಟಿಕೊಳ್ಳುತ್ತದೆ. ಹಾಗೆ ಆಗಲು ನಾವು ಬಿಡಬಾರದು. ಅಲ್ಲವೇ?

ನನ್ನ ಅಭಿಪ್ರಾಯದಲ್ಲಿ ಇದು ನ್ಯಾಯವಾದ ಸ್ವಭಾವವಲ್ಲ. ಯಾರಾದರೂ ತಮ್ಮ ಅಭಿಪ್ರಾಯವನ್ನು ನನ್ನೊಂದಿಗೆ ಹಂಚಿಕೊಂಡರೆ, ನಾನು ಅದನ್ನು ಇನ್ನೊಬ್ಬರೊಂದಿಗೆ ಎಂದಿಗೂ ಮತ್ತೆ ಹಂಚಿಕೊಳ್ಳುವುದಿಲ್ಲ. ಅದು ಅವರವರ ವೈಯಕ್ತಿಕ ಅಭಿಪ್ರಾಯ. ಅದನ್ನು ಯಾರಿಗೂ ಪ್ರಕಟಿಸುವುದಕ್ಕೆ ಅಲ್ಲ. ಅವರು ತಮ್ಮ ಹತ್ತಿರದವರಿಗೆ ನಂಬಿಕೆ ಇಟ್ಟು ಹಂಚಿಕೊಳ್ಳುತ್ತಾರೆ. ನಾನು ಮಾಡುತ್ತಿರುವುದು ಸರಿಯೇ, ತಪ್ಪೇ ಎಂದು ನನ್ನನ್ನು ನಾನು ಮೊದಲು ಕೇಳಿಕೊಳ್ಳಬೇಕು. 

ನಿಮ್ಮ ಬಗ್ಗೆ ಅವರು ನನ್ನ ಜೊತೆ ಮಾತನಾಡಿದಾಗ, ಅವರ ಮೇಲೆ ನಂಬಿಕೆ ಇಟ್ಟು ನನ್ನ ಪ್ರಾಮಾಣಿಕ ಅಭಿಪ್ರಾಯವನ್ನು ಹಂಚಿಕೊಳ್ಳುತ್ತೇನೆ. ಏಕೆಂದರೆ ಅವರು ನನ್ನ ಆತ್ಮೀಯರು. . ಅದು ಯಾರಿಗೂ ನೋವು ಕೊಡಲು ಹೇಳಿದ ಮಾತಲ್ಲ. ಅದು ನನ್ನ ಅಭಿಪ್ರಾಯ ಮಾತ್ರ. ನೀವು ಎಲ್ಲರನ್ನೂ ಹೇಗೆ ನೋಡುತ್ತೀರೋ ಹಾಗೆ ನಾನು ನಿಮ್ಮನ್ನು ನೋಡುವುದಿಲ್ಲ. ನಾನು ನಿಮ್ಮ ಹತ್ತಿರದ ಸ್ನೇಹಿತೆಯಲ್ಲ. ನಾನು ನಿಮ್ಮ ಒಳ್ಳೆಯ ಹಿತೈಷಿ ಮಾತ್ರ. ಹಾಗಾಗಿ ನನಗೆ ಅನ್ನಿಸಿದ್ದನ್ನು ನಾನು ಹೇಳಿ ಬಿಡುತ್ತೇನೆ ಅಷ್ಟೇ..

ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ನೀವು ನನಗೆ ಅನೇಕ ವಿಷಯಗಳನ್ನು ಕಲಿಸಿದ್ದೀರಿ. ಆದ್ದರಿಂದ ನಾನು ನಿಮಗೆ ಚಿರಋಣಿ ಮತ್ತು ನಿಮ್ಮನ್ನು ಗುರುಗಳಂತೆ ಗೌರವಿಸುತ್ತೇನೆ. ಆ ಗೌರವ ಸದಾ ನನ್ನ ಹೃದಯದಲ್ಲಿ ಇರುತ್ತದೆ ಮತ್ತು ಮುಂದೆಯೂ ಹಾಗೆಯೇ ಇರುತ್ತದೆ.ಇವೆಲ್ಲ ನಿಜವಾದ ಮಾತುಗಳೇ. 

 ತುಂಬಾ ಓದಲು ನಿಮ್ಮ ಸಮಯವನ್ನು ತೆಗೆದುಕೊಂಡಿದ್ದಕ್ಕೆ ಕ್ಷಮಿಸಿ ಬಿಡಿ. ಇದು ಗುಣಗಳ ವಿಷಯ. ಕೊನೆಯಲ್ಲಿ ನಾನು ಹೇಳಬೇಕೆಂದರೆ, ನಾನು ಯಾರ ಬಗ್ಗೆ ಕೂಡ ಕೆಟ್ಟದಾಗಿ ಮಾತನಾಡಿಲ್ಲ ಮತ್ತು ಮಾತನಾಡುವುದಿಲ್ಲ. ನಾನು ನನ್ನ ಅಭಿಪ್ರಾಯವನ್ನು ಮಾತ್ರ ಹೇಳಿದ್ದೇನೆ. ನನ್ನ ಮಾತುಗಳಿಂದ ಯಾರಿಗಾದರೂ ನೋವಾದರೆ ತುಂಬಾ ಕ್ಷಮೆಯಾಚಿಸುತ್ತೇನೆ. ನಾನು ಸದಾ ನಿಮ್ಮನ್ನು , ನಿಮ್ಮ ವ್ಯಕ್ತಿತ್ವವನ್ನು ಗೌರವಿಸುತ್ತೇನೆ. ನನ್ನಿಂದ ತಪ್ಪಿದ್ದರೆ, ನೋವಾದರೆ, ಬೇಸರವಾದರೆ ಕ್ಷಮಿಸಿ ಬಿಡಿ … ಅಷ್ಟೇ.ನೀವೇನಂತೀರಿ?
@ಹನಿಬಿಂದು@
08.02.2026

ಮಂಗಳವಾರ, ಫೆಬ್ರವರಿ 3, 2026

ಗಾಲಿ ಪಟ

ಗಾಲಿ ಪಟ 

ಬಲೆ ಪಿದಾಯಿ ಉಲಯಿಡ್ದ್
ಕನಲೆ ಉದ್ದೊದ ನೂಲುನು
ಬುಡ್ಕ ನಮ ಗಾಲಿ ಪಟೊನು 
ಪತೊನ್ಲೆ ಗಟ್ಟಿ ಪಾರ್ದ್ ತುಂಡಾವು 

ಬನ್ನ ಬನ್ನೊದ ಬಾನೊಡು ರಾಪಿನ
ಬಾನೊಡೆ  ಮಿತ್ತ್ ಮಿತ್ತ್  ಪೋಪಿನ
ಪೋದೊರ ನಮನ್ ಅಲ್ಪಡ್ದ್ ನಿಲ್ಕುನ
ನೂಲುನು ತೂದು ಗಟ್ಟಿಡೆ ಉಂತುನ 

ಜಾಲಿ ಬುಡಿಯೆರೆ ಗಾಲಿ ಪಟ 
ಗಾಲಿ ಬತ್‌ಂಡ ಪೂರ ನಷ್ಟ
ಸಾಲ್ ಸಾಲ್‌ಡ್ ಉಂತ್ಯ ಮೂಲು
ನಾಲ್ ದಿನೊತ ಬಾಲ್ ತೂಲ

ಏತೆ ಮಿತ್ತ್ ಪೋಯಂಡಲ
ತಿರ್ತ್ ಬೂರುವ ಒಂಜಿ ದಿನ
ಮಲ್ಲ ಎಲ್ಯವು ದೇವೆರ್ನ
ಕೂಡ್ದ್ ಬದ್ಕ್ ಗ ಎಡ್ಡೆಡ್ ನಮ
@ಹನಿಬಿಂದು@
03.02.2026

ಭಾನುವಾರ, ಫೆಬ್ರವರಿ 1, 2026

ಗಾಳಿಪಟ

ಗಾಳಿಪಟ 

ಬಾನಿನ ಬಯಲಲಿ ಗಾಳಿಯ ಪಟವನು 
ಹಾರಿಸಿ ಬಿಡುವೆವು ನಾವು
ಕಾಣದ ತುದಿಗೂ ತಲುಪಿಸೊ 
ನೂಲಿದೆ ಕೈಯಲ್ಲಿ  ತಾವು

ಕತ್ತಲೆಯಾಯಿತು ಮನೆಕಡೆ ಹೋಗಲು
ಅಮ್ಮನ ಬೈಗುಳ ಉಂಟು
ಮಕ್ಕಳೆ ಹೋಗಿ ಎಲ್ಲಿ ಇರುವಿರಿ 
ಎನ್ನುವ ಜೋರಿನ ನಂಟು

ನೂಲದು ಕಾಣದು ಪಟವೇ ಮೇಲೆ
ಎತ್ತರಕೇರಲು ಬೇಕು
ಕೈ ಹಿಡಿಯುವ ಧೈರ್ಯವ ಕೊಡುವ
ಗೆಳೆಯನು ಬಾಳಿಗೆ ಸಾಕು

ನನ್ನೊಡನೆನಗೆ ನೀನಿರೆ ಬಾಳಲಿ
ಸಾಧಿಸಿ ಬಿಡುವೆ ನಾನು
ಎತ್ತರಕೇರುವೆ ಎಲ್ಲರಿಗಿಂತಲೂ
ಗಾಳಿಯ ಪಟವೇ ತಾನು
@ಹನಿಬಿಂದು@
02.02.2026