ಗೆಲುವು
ಗೆಳೆಯನ ಕಾಣಲು
ಗರಡಿಗೆ ಹೋದೆನು
ಗುಡಿಯಲಿ ದೇವರ
ಮುಖವದ ಕಂಡೆನು ಹಿತವೆನಿಸಿ
ಗರುಡನು ವಾಹನ
ಗಮನವು ಜನರೆಡೆ
ಕೈಯದು ಎದುರಲಿ ನಿಂತಿಹಗೆ..
ಗೋಲಿಯ ಆಡುವ
ಮಕ್ಕಳ, ಮುದುಕರ
ಕಾಯುವ ಹರಿಹರ ವರನೀಡಿ..
ಬೇಡಿದ ವರಗಳ
ಮಳೆಯನು ಸುರಿಸುತ
ಕಾಡುವ ಜನರನು ಕಾಯುತಲಿ.
ವಿಷ್ಣುವು ಕಾವಲು
ಕಾಯುತ ಸಲಹುವ
ನಿತ್ಯದಿ ಬಕುತರ ಪೊರೆಯುತಲಿ
ಗೆಲುವದು ಬಾರದೆ
ಇರದದು ಎಂದಿಗು
ನಂಬಿದ ಮನುಜಗೆ ಕೊನೆವರೆಗೆ..
@ಪ್ರೇಮ್@
17.03.2020
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ