ಮಂಗಳವಾರ, ಮಾರ್ಚ್ 17, 2020

ವಿಮರ್ಷೆಗಳು-4

[8/5/2019, 9:57 AM] Nybr Pramila: *ಏರುತಿರು*
ಪ್ರೇಮ ಮೇಡಂ ಕವನ ಸುಂದರವಾಗಿ ಮೂಡಿಬಂದಿದೆ. 
ಅರ್ಥಬದ್ಧ ಸಾಹಿತ್ಯ. 
ಸರಳ, ಪ್ರಾಸಬಧ್ಧವಾಗಿದ್ದು ಉತ್ತಮ ಸಂದೇಶ ಸಾರುವ ಕವನ. 👌👌👌
[8/6/2019, 1:00 PM] Wr Vinuta Kicchikeri: ಪ್ರೇಮ್ ಜೀ🙏
ನಿಮ್ಮ ಕವನಗಳನ್ನು ಓದುವದೇ ಖುಷಿ. ಏನಾದರೂ ಹೊಸ ಬಗೆ ಇದ್ದೇ ಇರುತ್ತ.ಇವತ್ತಿನ ಕವನವೂ ಕೂಡಾ ಅದೇ ಮಾದರಿಯಲ್ಲಿದೆ ಗೀಗೀ ಪದ ಹೇಳುತ್ತೇವೆ. ದಾಟಿ ಹಾಕಿದರೆ ಹಾಡಲೂ ಬರುತ್ತೆ.ಬೆಳದಿಂಗಳೂ ನಮಗಾಗೆ ಹರಿಬಿಟ್ಹಾನ ಇದು ತುಂಬಾ ಇಷ್ಟ ವಾಯ್ತು. ಪರಿಸರ,ಜಾತಿ ಭೇಧ,ಹೀಗೆ ಪ್ರೀತಿಯ ಜೊತೆಗೆ ಸಮಾಜದ ಕಳಕಳಿಯೂ ನಿಮ್ಮ ಕವನಗಳಲ್ಲಿ ಅಡಗಿರುತ್ತೆ.ಇಷ್ಟ ವಾಯ್ತು ನಿಮ್ಮ  ಕವನ ಶುಭವಾಗಲಿ🙏💐

ವಿನುತಾ ಕಿಚ್ಚಿಕೇರಿ
[8/8/2019, 10:18 AM] Wr Sham Prasad Bhat: *ಪ್ರೇಮ್*

*ಕೇಸರಿ ಕಪ್ಪಿನ ನಡುವೆ*

ಬಣ್ಣ ಬಣ್ಣದ ಬದುಕ ಬಣ್ಣಿಸಿದ ರೀತಿ ಆಕರ್ಷಕ... ಬಣ್ಣದ ಬದುಕಿಗೆ ಬಣ್ಣವನ್ನು ಒದಗಿಸಿದವನು ಆ ಸೂರ್ಯ.. ಸೂರ್ಯನನ್ನು ಒಡವೆ ಎಂದಿರುದೇಕೆಂದರೆ  ಅಲಂಕಾರದಲ್ಲಿ ಬಹುಪಾಲು ಪಡೆದವನು ಅವನು...ಅಲಂಕಾರವೆಂದರೆ ಬದುಕು..ಬದುಕಿನ ಬೆಳವಣಿಗೆಗಳಿಲ್ಲಾ ಅವನಿಂದಲೇ...ಅವನಿಲ್ಲದಿರೆ ಜಗವಿಲ್ಲ...

ಜೀವನದಲ್ಲಿ ಏಳು ಬೀಳು ಸಹಜ...ಕೆಲವು ದೈವದತ್ತ ರೂಪದಲ್ಲಿ.. ಇನ್ನು ಕೆಲವು ಸ್ವಯಂಕೃತ..ಹಮ್ಮುಬಿಮ್ಮು,ದ್ವೇಷ, ಅಸೂಯೆ, ಸದಾ ಬೆಂಕಿಯುಗುಳುವ ಜಿಹ್ವೆ...ಕಷ್ಟಗಳನ್ನು ಕಟ್ಟಿಕ್ಕೊಂಡ ಸೆರಗು...ಬದುಕಲ್ಲಿನ ವೈವಿಧ್ಯತೆಗಳೆನ್ನೋಣವೇ?

ಪ್ರಕೃತಿ ಎರಡು ರೀತಿಯಲ್ಲಿ ವರ್ತಿಸುತ್ತದೆ..ಕೆರಳಲೂ ಗೊತ್ತು..ಶಾಂತ ರೀತಿಯಲ್ಲಿ ವರ್ತಿಸಲೂ ಗೊತ್ತು..
ದೇವರು ಆಡುವ ಆಟದಲ್ಲಿ ನಮಗೆ ನಿಲುಕುವ ಮತ್ತು ನಿಲುಕದ ವಿಚಾರಗಳು ಇರುತ್ತವೆ..

ನಮ್ಮ ಬೀಡು ಸ್ವರ್ಗಕ್ಕೆ ಸಮಾನ..ನಾವು ಅಸ್ತಮಿಸುವ ಸೂರ್ಯನನ್ನು ತಡೆದು ನಿಲ್ಲಿಸಿ ಯೋಗಕ್ಷೇಮ ವಿಚಾರಿಸಿ ಶುಭಹಾರೈಸಿ ಬೀಳ್ಳೊಡುವವರು..ಉನ್ನತ ಭಾವನೆಗಳ ಬೀಡಿದು...ಕೊಟ್ಟ ಚಿತ್ರದ ಸಂಪೂರ್ಣ ಅರ್ಥ ಕೊನೆಯ ನಾಲ್ಕು ಸಾಲುಗಳಲ್ಲಿ ಹರಡಿಕ್ಕೊಂಡಂತೆ ಭಾಸವಾಯ್ತು...ಚಿತ್ರಕ್ಕೆ ನ್ಯಾಯ ಸಲ್ಲಿಸಿ ಬರೆದ ಬರಹ ಸೊಗಸಾಗಿ ಮೂಡಿಬಂದಿದೆ.

ಧನ್ಯವಾದಗಳು

*ಶ್ಯಾಮ್ ಪ್ರಸಾದ್*
[8/8/2019, 12:52 PM] Wr Kshama Raghuram: *ಕೇಸರಿ ಕಪ್ಪಿನ ನಡುವೆ....*

*ಪ್ರೇಮ್  ಮೇಡಂ  ನಮಸ್ತೆ...*

ಬಾಳದು ನಮ್ಮದು ಬಣ್ಣದ ನಡುವೆ
ಹೇಳಲಿ ಏನು ಸೂರ್ಯನೆ ಒಡವೆ..
ಜಗವದು ಸುತ್ತಿ ದಿನ ರಾತ್ರಿ ಬರಲು
ಸಮುದ್ರಕೆ ಬಿದ್ದು ನಿದ್ದೆಯ ಮಾಡಲು!

👆🏼  *ಅರ್ಥ ಪೂರ್ಣ  ಸಾಲುಗಳು...ತುಂಬಾ  ಇಷ್ಟ  ಆಯ್ತು..,.*

ಕೇಸರಿ ಕಪ್ಪಿನ ಬಣ್ಣದ ಜೊತೆಗೆ
ಜೀವನ ಯಾತ್ರೆಯು ಸಾಗುತಿದೆ!
ಕೈಯಲಿ ಬಂಕಿಯ ಉಗುಳುವ ಬಾಳಿದೆ!
ಕೆಂಡವು ಮಡಿಲಿನ ಸೆರಗಲಿ ಕಟ್ಟಿದೆ!

*👆🏼ಕವಿತೆಗೆ  ಮೆರಗು*   *ಕೊಟ್ಟಂತಹ   ಸಾಲುಗಳು..*.

*ಜೀವನದ  ಮಹತ್ತರ  ಅಂಶಗಳನ್ನು  ಕವಿತೆಯಲ್ಲಿ*
*ಪೋಣಿಸಿ   ಚಿತ್ರಕ್ಕೆ  ಪೂರಕವಾಗಿ  ರಚಿಸಿದ*  *ಉತ್ತಮ  ಭಾವಭಿವ್ಯಕ್ತಿ ಯುಳ್ಳ*
*ಅತ್ತುತ್ತಮ  ಅರ್ಥ ಪೂರ್ಣ  ಕವಿತೆ,..,*

ಧನ್ಯವಾದಗಳು ಮೇಡಂ...
ಕ್ಷಮಾ ರಘುರಾಮ್ ..
[8/10/2019, 8:59 AM] Wr Shivaprasad Aradhya: ಪ್ರೇಮ ಮತ್ತು ಜೀವರಾಜರ ಕವನಗಳು ಬಹಳ ಚೆನ್ನಾಗಿ ವೆ.ಆರರಲ್ಲೂ ಜೀವರಾಜರ ದ್ವಿರುಕ್ತಿ ತರಹದ ಪದ ಪ್ರಾಸ ಚಮತ್ಕಾರ ದಿ ಬರೆದ ಉಪಮೆಗಳ ಪ್ರೌಢ ಕುಶಲತೆ ಬಹಳ ಚಂದ.ನುರಿತ ಕವಿ ಭಾವ.ದ ಜೀವರು ಸರಳ ಶೈಲಿಯ ಪ್ರೇಮ ಗಮನ ಸೆಳೆದರು.

ಶಿವಪ್ರಸಾದ್ ಆರಾಧ್ಯ
[8/10/2019, 2:43 PM] Wr Jeevaraja Chatrad-2: ಒಬ್ಬ ಉತ್ತಮ ಕವಿಯಿಂದ ಉತ್ತಮ ಕವಿಯೆಂದು ಹೇಳಿಸಿಕೊಳ್ಳುವುದರಲ್ಲಿಯ ಸುಖ ಅದ್ಯಾವ ಸುಖ ಸಂಪತ್ತಿನಿಂದಲೂ ದೊರೆಯುವುದಿಲ್ಲ ಧನ್ಯವಾದಗಳು ಪ್ರೇಮಾ ಮೇಡಂ
[8/13/2019, 5:33 PM] Wr Vara Lakshmi Amma: ಪ್ರೇಮ್ ಅವರ ಗಝಲ್ 
 ಸ್ವಾತಂತ್ರ್ಯದ ದುರುಪಯೋಗವನ್ನು ಬಹಳ ಪರಿಣಾಮಕಾರಿಯಾಗಿ  ನಿರೂಪಿಸಿದ್ದಾರೆ. 
 ಕೊನೆಯಲ್ಲಿ  ಪ್ರೇಮದ ಸಂದೇಶ ಕೊಟ್ಟಿರುವುದು ತುಂಬಾ ಸೊಗಸಾಗಿದೆ. 
 ಗಝಲ್  ನಿಯಮ ನನಗೆ ತಿಳಿಯದು,  ಆದರೆ ಅದರ ಚೌಕಟ್ಟಿನಲ್ಲಿ  ವಿಭಿನ್ನ ವಿಷಯ ‌ದ ಬಗ್ಗೆ  ಕವನ ರಚನೆ ನಿಜಕ್ಕೂ  ಮೆಚ್ಚಬೇಕು 🙏
[8/13/2019, 5:54 PM] Wr Dinesh Sir: 🍁🌼☘

🙏 *ನಮಸ್ಕಾರಗಳು*

*ಪ್ರೇಮ್ ರವರ*

*ಪ್ರಕಾರ*:- ಗಜ಼ಲ್


ಬಲು ಚೆಂದವಾಗಿ ಮೂಡಿಬಂದಿದೆ.ಸಾಲುಗಳೆಲ್ಲ ಅರ್ಥಪೂರ್ಣವಾಗಿದ್ದು,ಅಂದದುಂಬಿದೆ.ಗಜ಼ಲ್ ನಿಯಮ ಪ್ರಕಾರವಿದ್ದು ಮನುಜ ತನಗೆ ಸಿಕ್ಕ ಸ್ವಾತಂತ್ರ್ಯವನ್ನು ಯಾವ ಯಾವ ಥರದಲ್ಲಿ ಹೇಗೆ ಬಳಸಿಕೊಂಡಿದ್ದಾನೆ ಎಂಬುದರ ಸಮಗ್ರ ಚಿತ್ರಣ ನಿಮ್ಮ ಗಜ಼ಲ್ ನಲ್ಲಿ ಕಣ್ಣಿಗೆ ಕಟ್ಟುವಂತೆ ಮೂಡಿಬಂದಿದೆ. ಕೊನೆಯಲ್ಲಿ ಕಂಪು ಬೀರುತಲಿ ಸತ್ಕಾರ್ಯದ ಕಾಂತಿ ಚೆಲ್ಲುತಲಿ ಬದುಕೋಣ ಎಂಬ ಸದಾಶಯ ಗಮನಸೆಳೆಯಿತು.ಸೂಪರ್.


🍁• ಅರ್ಥಪೂರ್ಣವಾದ ಗಜ಼ಲ್

🌼• ನಿಯಮಬದ್ಧವಾಗಿದೆ

☘• ಪದಕ್ಕೆ ಪೂರಕವಾಗಿದೆ.


*ಧನ್ಯವಾದಗಳು ಮಿತ್ರರೆ*.🙏🙏
ನಿಮ್ಮ ಸಾಹಿತ್ಯಯಾನ ಸುಖಕರವಾಗಿರಲಿ
*ಸಾಹಿತ್ಯ ಕ್ಷೇತ್ರದಲ್ಲಿ ಯಶಸ್ಸು ಸದಾ ನಿಮಗೊಲಿಯಲಿ*..

👍👍💐💐
[8/15/2019, 4:36 PM] Wr Sirsi Ratnakar: 🌹🌹🌹🌹 *73ನೇ ಸ್ವಾತಂತ್ರ್ಯೋತ್ಸವ ಹಾಗೂ ರಕ್ಷಾಬಂಧನದ ಶುಭಾಷಯಗಳೊಂದಿಗೆ.......*🌹🌹🌹🌹

✒*ಪ್ರೇಮ* ಮೇಡಂ ರವರ
*ದೇಶಭಕ್ತಿಗೀತೆ* 

*ನಾನು ಪುಣ್ಯ ಪಡೆದವ*
ಜನನೀ ಜನ್ಮಭೂಮಿ ಸ್ವರ್ಗಕ್ಕಿಂತ ಮಿಗಿಲು ಎಂಬಂತೆ ಈ ಭಾರತ ಭೂಮಿಯಲ್ಲಿ ಹುಟ್ಟಿಬಂದಿರುವುದೆ ನಮ ಭಾಗ್ಯ ಅಂತೆಯೆ ತಾಯಿ ಭಾರತಿಯನು ಪ್ರೀತಿಸುವ ಆರಾಧಿಸುವ ಅವಕಾಶವೆ  ಸೌಭಾಗ್ಯವೆನುತ ಈ ಮಣ್ಣು ಈ ನಾಡು ಈ ನುಡಿ ಕೊಟ್ಟಂತಹ ಪ್ರೀತಿ ಪ್ರೇಮ ಜಗತ್ತಿನ ಯಾವ ಮೂಲೆಯಲ್ಲೂ ಸಿಗಲು ಸಾಧ್ಯವಿಲ್ಲ.,ಎಂಬುದನ್ನ ಭಾವನಾತ್ಮಕವಾಗಿ ಬರೆದಿರುವಿರಿ 
ಹಲವು ವೇಷ ಹಲವು ಭಾಷೆ ಜಾತಿ ಧರ್ಮಗಳ ಸಮ್ಮಿಲನದ ಗೂಡಲ್ಲಿ ಸ್ವತಂತ್ರ ವಾಗಿ ಬದುಕುವ ಅವಕಾಶವೆ ಪೂರ್ವ ಜನ್ಮದ ಪುಣ್ಯದ ಫಲ ಇದನ್ನ ಅರಿತು ಬೆರೆತು ಸಾಗಬೇಕಾದುದು ನಮ್ಮ ಧರ್ಮ ಎನ್ನುವ ಆಶಯದೊಂದಿಗೆ ಗೀತೆ ಚೆನ್ನಾಗಿ ಮೂಡಿದೆ

*ಸ್ವಾತಂತ್ರ್ಯ ಪದಕೆ ನ್ಯಾಯ  ಒದಗಿಸಿದ್ದೀರಿ .*

🌹🌹 *ಧನ್ಯವಾದಗಳು... ಅಭಿನಂದನೆಗಳು ನಿಮ್ಮ ಸಾಹಿತ್ಯದ ಎಲ್ಲಪ್ರಕಾರಗಳಿಗೂ  ಶುಭಕೋರುವೆ* 🌹🌹
       
🙏🏻🙏🏻ಇಂತಿ ನಿಮ್ಮವ *ಶಿರ*🙏🏻🙏🏻
[8/16/2019, 6:53 AM] Nybr Pramila: *ಪ್ರೇಮ್ ಮೇಡಂ* ರವರ ಲಘುಬರಹ ಬಹಳ ಅರ್ಥವತ್ತಾಗಿ, ಸಮಯೋಚಿತವಾಗಿ ಮೂಡಿಬಂದಿದೆ. ಸಾಮಾನ್ಯ ಗ್ರಾಮೀಣ ಪ್ರದೇಶದ ಮಹಿಳೆಯ ಮೂಲಕ ಸ್ವಾತಂತ್ರ್ಯದ ಮಹತ್ವವನ್ನು ಹೇಳಿದ್ದೀರಿ. 
ಹೌದು,ಈಗೀಗ ಪಠ್ಯಪುಸ್ತಕಗಳಿಂದನೂ ಈ ಸ್ವಾತಂತ್ರ್ಯ ಹೋರಾಟಗಾರರನ್ನು ತೆಗೆದು ಮತ್ಯಾವುದೋ ಅಸಂಬದ್ಧ ವಿಚಾರವನ್ನು ಪಠ್ಯದೊಳಗೆ ತುರುಕಿಬಿಟ್ಟಿದ್ದಾರೆ. ಇದರಿಂದ ಆ ಮಹಾನ್ ವೀರರ ತ್ಯಾಗವನ್ನು, ಬಲಿದಾನವನ್ನು ಮಕ್ಕಳಿಗೆ ಹೇಳಲು ಸಿಗುವ ಸಮಯಾವಕಾಶ ತೀರಾ ಕಡಿಮೆ. ಸ್ವಾತಂತ್ರ್ಯದ ಕತೆ ಕೇಳಿದರೆ ನಮಗೆಲ್ಲ ಮೈಯ ಪ್ರತೀ ಕಣಕಣವೂ ರೋಮಾಂಚನವಾದರೆ, ಈಗಿನ ಮಕ್ಕಳಿಗೆ ಬಾವುಟ ಹಾರಿಸುವುದು ಮಾತ್ರ ಗೊತ್ತು. ಅದೇ ಸ್ವಾತಂತ್ರ್ಯ ಅಂತ ತಿಳಿದುಕೊಂಡಿರುವರು. 

 ನಿಮ್ಮ ಉತ್ತಮ ಬರವಣಿಗೆಗಾಗಿ ಅಭಿನಂದಿಸುತ್ತೇನೆ💐💐💐
ಶುಭವಾಗಲಿ.
[8/16/2019, 9:39 AM] Wr Uday Bhaskar Sullia: *ಪೇಮಾ ಮೇಡಂ*

ಲಘು ಬರಹ ತುಂಬಾ ಚೆನ್ನಾಗಿದೆ. ಒಂದೊಳ್ಳೆಯ ಸಂದೇಶ, ಜಾಗೃತಿ ತುಂಬಿದ ಬರಹ. ಸಹಸ್ರ ಸಹಸ್ರ ಸ್ವಾತಂತ್ರ್ಯ ಸೇನಾನಿಗಳ ಬಿಸಿರಕ್ತದೋಕುಳಿಯ ಸಮಾಧಿಯ ಮೇಲೆ‌ ಎದ್ದು ನಿಂತ ಸ್ವಾತಂತ್ರ್ಯ ಸೌಧದ ಪರಿಕಲ್ಪನೆಯೇ ಇಲ್ಲದೆ, ಬರೀ ಬಾವುಟ ಹಾರಿಸಿ ಸಿಹಿತಿಂಡಿ ಹಂಚಿ ಸಂಭ್ರಮಿಸುವುದಕ್ಕೆ ಸೀಮಿತವಾದ ಹಬ್ಬದ ಕುರಿತು ಬೇಸರ ವ್ಯಕ್ತಪಡಿಸಿದ್ದೀರಿ‌‌.  ಬಲಿದಾನಗೈದ ದಿವ್ಯಾತ್ಮಗಳ ಸ್ಮರಣೆಯೇ ಇಲ್ಲದ ಮೌಲ್ಯ ರಹಿತ ಆಚರಣೆ ನಡೆಸುವ ನಾವು ನಿಜಕ್ಕೂ ಕೃತಘ್ನರು‌. ಯುವಜನತೆಯಲ್ಲಿ ರಾಷ್ಟ್ರಪ್ರೇಮವನ್ನು ಬಡಿದೆಬ್ಬಿಸುವ ಕೆಲಸ ಆಗಲೇಬೇಕಿದೆ ಅದು ಅನಿವಾರ್ಯ. ನಮ್ಮೆಲ್ಲ ಹಬ್ಬಗಳು ಪಾಶ್ಚಾತ್ಯರ ಅಂಧಾನುಕರಣೆಯ ಜಾಡು ಹಿಡಿದು ಮೌಲ್ಯ ಕಳೆದುಕೊಳ್ಳುತ್ತಿರುವುದು ಭಾರತೀಯ ಸಂಸ್ಕೃತಿಗೆ ಎಸಗುವ ಅಪಚಾರ. ಒಳಿತು ಎಲ್ಲೇ ಇದ್ದರೂ ಅದನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸೋಣ. ಆದರೆ‌ ಮೈಕಾಣಿಸುವ ತುಂಡು ಬಟ್ಟೆ, ಹಾದಿಬೀದಿಯಲ್ಲೇ ಮುತ್ತಿಟ್ಟು ಮೈಮರೆಯುವ ಹೀನ ಸಂಪ್ರದಾಯ ನಮಗೆ ಬೇಡ. 

ನಿಜಕ್ಕೂ ಈ ದಿನದ ನಿಮ್ಮ ಬರಹ ತುಂಬಾ ತುಂಬಾ ಇಷ್ಟ ಆಯ್ತು‌.

ಶುಭವಾಗಲಿ...

*- ಉದಯಭಾಸ್ಕರ್ ಸುಳ್ಯ*
[8/19/2019, 6:18 PM] Wr Nagamani Mysore: ಪ್ರೇಮ್ ಅವರ ಧರೆಯ ಸಂಕಟ ಸುಂದರವಾಗಿ ಚಿತ್ರಿಸಲ್ಪಟ್ಟಿದೆ. 

ಎಲ್ಲವನ್ನೂ ಸಹಿಸಿ ಕ್ಷಮಿಸುವಳೆಂದೇ ಅವಳನ್ನು ಕ್ಷಮಯಾಧರಿತ್ರಿ ಎನ್ನುವುದು... 

ಒಳ್ಳೆಯ ಗೀತೆ ಓದಿಸಿದ್ದೀರಿ ಮೇಡಂ
[8/27/2019, 6:58 AM] Wr Vinuta Kicchikeri: ಪ್ರೇಮ್ ಮೇಡಮ್🙏
ನಾವು ಎಷ್ಟೇ ದೂರವಿದ್ದರೂ
ಮನಸ್ಸಿನ ಪ್ರೀತಿಯಿಂದ ಹತ್ತಿರವಿರಬೇಕು ಎನ್ನುವುದನ್ನೂ
ಚಂದದ ಹನಿಯಲ್ಲಿ ತೋರಿಸಿದ್ದೀರಿ

ವಿನುತಾ ಕಿಚ್ಚಿಕೇರಿ
[8/27/2019, 10:52 AM] Wr Nagamma: ಪ್ರೇಮ್ ಜೀ🙏🏼

ಮನದಲ್ಲಿ..ರಬೇಕು..ಭಾವಗಳು..ಪ್ರೀತಿ..ಅದೇ ಸದಾ ಸಮೀಪ.


ದೇಹ..ಕಾಯಕ..ನಿಮಿತ್ತ..ಏಲ್ಲೋ..ಹೋದರೂ...ಮನಸ್ಸು ಸದಾ ಸಮೀಪ ವೇ...

ಚೆನ್ನಾಗಿದೆ..
ಧನ್ಯವಾದಗಳು..
ಎಸ್.
[8/29/2019, 5:29 PM] Wr Sham Prasad Bhat: *ಪ್ರೇಮ್*
*ಬೇಕೆನಗೆ*

ಕಲ್ಮಶರಹಿತ ನಿರ್ಮಲ ನಗುವಿನ  ನಿರೀಕ್ಷೆ.. ಸಿಗಬಹುದೇ....ಎಲ್ಲೆಡೆ  ಮುಖವಾಡ ತೊಟ್ಟವರೇ ತಿರುಗುತ್ತಿರುವಾಗ ಸ್ವಚ್ಛ ನಗು ಗಗನಕುಸುಮವೇ ಸರಿ.ಒಬ್ಬನ ಏಳ್ಗೆಯನ್ನು ಇನ್ನೊಬ್ಬ ಸಹಿಸನು..ಮತ್ತೆಲ್ಲಿ ನಿರ್ಮಲ ನಗುವಿನ ವಿನಿಮಯ ಸಾದ್ಯ...

ನಿರ್ಮಲ ನಗು ಸಿಗಲಾರದೆನ್ನಲಾರೆ...ತೊಟ್ಟಿಲ ಕಂದನ ನಗು ...ಸ್ವಾರ್ಥವಿಲ್ಲದ ಪರಿಶುದ್ಧ ನಗು...ಮೆದುಳು ಬಲಿತಂತೆ ಅಲ್ಲಿ ಕಲ್ಮಶಗಳು ತುಂಬಿಕ್ಕೊಳ್ಳುತ್ತವೆ.ಅವೇ ನಗುವಿನೊಂದಿಗೆ ಹೊರಹೊಮ್ಮುತ್ತವೆ.
ನಿಮ್ಮ ನಿರೀಕ್ಷೆ ಚೆನ್ನಾಗಿದೆ. ಆದರೆ ಪ್ರಸ್ತುತ ಜಗದಲ್ಲಿ ಎಳೆ ಮಕ್ಕಳ ಮೊಗದಲ್ಲಿ ಮಾತ್ರ ನಾಟಕರಹಿತ  ನಿರಾಭರಣ ನಗುವನ್ನು ಕಾಣಲು ಸಾಧ್ಯ..ಚೆನ್ನಾಗಿದೆ ಹನಿಗವನ.

ಧನ್ಯವಾದಗಳು

*ಶ್ಯಾಮ್ ಪ್ರಸಾದ್ ಭಟ್*
[9/2/2019, 4:12 PM] Wr 100 Ahmd: *ನಮಸ್ತೆ*🙏

*ಪ್ರೇಮ್ ಜಿ*

*ಗಜವದನನ ಬೇಸರ*

*ಮನುಜನ ಬಯಲಾಟವನ್ನು ಬಯಲಿಗೆಳೆಯುವ ಬೇಸರದ ಕವನ ವಾಸ್ತವತೆಯನ್ನು ಮುಚ್ಚು ಮರೆಯಿಲ್ಲದೆ ಹೇಳಿರುವ ಕವಿಗೆ ಕಪಟನ ಕಾಣದು*

*ಇಲ್ಲಿ ಕವಿಯ ಮನಸು ಪ್ರಕೃತಿಯ ಜೊತೆಗೆ ನಿಕಟವಾದ ಸಂಬಂಧವನ್ನು ಹೊಂದುವಂತೆ ಕಾಣುತ್ತದೆ ಅದಕ್ಕೆ ಮನುಜನ ನಡತೆ ಸರಿ ಕಾಣಿಸುತ್ತಿಲ್ಲ ನಿಯಮಕ್ಕೆ ಮಾತ್ರ ಪೂಜೆ ಪುನಸ್ಕಾರಗಳು ಉಳಿದಂತೆ ಸ್ವಾರ್ಥವನ್ನು ಬೆಳೆಸಿದ್ದಾನೆ ಅದಕ್ಕೆ ಇಂದಿನ ಸರಕುಗಳನ್ನು ಪೂಣಿಸುವ ರೀತಿ ಆ ಗಣೇಶನಿಗೂ ಬೇಸರ ತಂದಿದೆ ಎನ್ನಿಸಿತ್ತಿದೆ*

*ಹಾಸ್ಯವಾಗಿ ಹೇಳುತ್ತಿದ್ದಾರೆಯೇ ಅಥವಾ ಸಂಕಟದಿಂದ ಮಾತನಾಡುತ್ತಿದ್ದಾರೆಯೇ ಗೊತ್ತಾಗುತ್ತಿಲ್ಲ ಒಟ್ಟಿನಲ್ಲಿ ಸಿಟ್ಟು ಮಾತ್ರ ಇದ್ದೆ ಇದೆ ಕಾರಣ ಆಕಾರವನ್ನು ಗೇಲಿ ಮಾಡುವ ಮನುಜರೆ ಇವತ್ತು ಪೂಜಿಸುತ್ತಿದ್ದಾರೆ ಅದಕ್ಕೆ ತಕ್ಕ ಶಿಕ್ಷೆಯಾಗಬೇಕು ಎನ್ನುವುದು ಕವಿಯ ವಾದ*

*ತನು ಮನದ ಪ್ರೀತಿ ಆದೇವನಲ್ಲಿ ಮೊರೆ ಇಟ್ಟರೆ ಭಕ್ತಿ ಭಾವವನ್ನು ಆತ್ಮಕ್ಕೆ ಸಂದಿಸಲಿ ಅದು ತೀರಿಕೆಯಾಗದಿರಲಿ ವಿಜೃಂಭಣೆಯಿಂದ ನಡೆಯದಿರಲಿ ಎನ್ನುವ ಕವಿ ಭಾವನೆಯನ್ನು ವ್ಯೆಕ್ತಪಡಿಸಿದ್ದಾರೆ*

*ಧನ್ಯವಾದಗಳು*

*ನೂರಅಹ್ಮದ ನಾಗನೂರ*
[9/3/2019, 10:48 AM] Wr Siraj Ahmed Soraba: ✒✒✒✒✒✒✒✒
 "ಪ್ರೇಮ್ ಅವರ ಗಝಲ್"
✒✒✒✒✒✒✒✒

ಮತ್ಲಾ
ಜೀವನವೆಂಬುದು ನೋವಿನ
ಗೆರೆಗಳ ಚೌಕಳಿಯು
ಚಿಂತಿಸದಿರು ಮನವೇ//
ಬದುಕದು ನೂಲಿನ ಮೇಲಿನ
ನಡಿಗೆಯ ಚಿಂತಿಸದಿರು ಮನವೇ//

ಸಹೋದರಿ ಪ್ರೇಂ ಅವರು ತಮ್ಮ
ಮೊದಲ ಶೇರ್ ನಲ್ಲಿ ಬದುಕಿನ
ಅಥ೯ವನ್ನು ಅಥ೯ವಾಗುವ
ರೀತಿಯಲ್ಲಿ ತೆರೆದಿಟ್ಟಿದ್ದಾರೆ.
ಜೀವನವನ್ನು ನೋವಿನ ಗೆರೆಗಳ
ಚೌಕಳಿಗೆ ಹೋಲಿಸಿದ್ದು ಗಜಲ್
ಉತ್ತಮವಾಗಿ ಮೂಡಲು
ಸಹಾಯವಾಗಿದೆ
ನೋವು ಸಂಕಷ್ಟಗಳ ಚೌಕಳಿಯನ್ನು ಯುಕ್ತಿಯಿಂದ
ಪಾರು ಮಾಡಿದಾಗಲೆ ಬದುಕು
ಮತ್ತು ಬದುಕಿನ ಉದ್ದೇಶ
ಸಾಥ೯ಕವಾಗುವುದೆಂಬ ಸಂದೇಶವಿದೆ
ಹಾಗೆಯೇ ಮುಂದುವರೆದು
ಬದುಕೆಂಬುದು ನೂಲಿನ ಮೇಲಿನ ನಡಿಗೆಯಿಂದ ತಿಳಿಸಿದ್ದಾರೆ ಬಹಳ ವಿಚಾರಪೂರ್ಣ ಸಂದೇಶ
ಹೌದು ಬದುಕು ಬಹಳ
ನಾಜೂಕಾದ ಪಯಣ
ಒಬ್ಬ ಸೃಜನಶೀಲ ವ್ಯಕ್ತಿಯು
ಬದುಕಿನ ಮಜಲುಗಳನ್ನು
ಬದುಕಿನ ಪ್ರತಿ ಹೆಜ್ಜೆಯನ್ನು
ಎಚ್ಚರಿಕೆಯಿಂದ ಇಡುತ್ತಾನೆ.
ಯೋಚನೆ ವಿವೇಚನೆ ಯುಕ್ತಿಯಿಂದ ಬದುಕಿನಲ್ಲಿ
ಶ್ರೇಯಸ್ಸು ಕಾಣುತ್ತಾನೆ.

ಹೀಗೆ ಇವರ ಶೇರ್ ಗಳನ್ನು
ಓದುತ್ತಿದ್ದರೆ ಸಾಥ೯ಕ ಬದುಕಿಗೆ
ಬೇಕಾದ ಹಲವು ಆಯಾಮಗಳನ್ನು ಗೋಚರವಾಗುತ್ತವೆ.
ಬದುಕದು ಬದಲಾಗಿ ಬದುಕಿದು
ಎಂದು ಬರೆದುಕೊಳ್ಳಿ ಇನ್ನೂ
ಸಮಂಜಸವಾಗುತ್ತದೆ.

ಹಾಗೆಯೇ ಐದನೆ ಶೇರ್ ‌ನ ಮೊದಲ ಚರಣ
ಬೇಸರವ ನೀಗಿಸುತ ಶಾಂತಿಯಿಂದಿರಿಸು ಮನವನೆಂದೂ

ಇದು ಪೂಣ೯ತೆ ಪಡೆದಂತೆ
ಕಾಣುವುದಿಲ್ಲ ಏಕೆಂದರೆ ಒಂದು
ಉತ್ತಮ ಗಝಲ್ ನೀಡಿದ್ದೀರಿ
ಆಗ ಒಂದೊಂದು ಅಂಶವನ್ನು
ಗಮನಿಸಬೇಕಾಗುತ್ತದೆ.

ಅದು ಹೀಗೆ ಬರೆಯಬಹುದು
ಬೇಸರವ ನೀಗಿಸುತ ಮನದಲಿ
ಎಂದಿಗೂ ಶಾಂತಿಯನ್ನಿರಿಸು.

ಉಳಿದ ವಿಷಯಗಳು ಮನೋಜ್ಞವಾಗಿ ಬರೆದಿದ್ದೀರಿ
ಹಾಗೆಯೇ ಮಕ್ತಾ ಅಥವಾ
ಮುಕ್ತಾಯ ಅಥ೯ಪೂಣ೯ವಾಗಿ ಬಂದಿದೆ

ಬರುವುದೆಲ್ಲವೂ ಬರಲಿ ಸದಾ
ದೇವನಿರುವನು ಜಗದಲಿ/
ಹೃದಯ ಪ್ರೇಮದಿಂದಲಿ ಹಿತ
ನೀಡಲಿ ದೈವಶಕ್ತಿಯು ಚಿಂತಿಸದಿರು ಮನವೇ//

ಹೀಗೆ ಒಂದು ಉತ್ತಮವಾದ
ಗಝಲ್ ಓದುಗರಿಗೆ ಕೊಟ್ಟ
ತಮಗೆ ಅನಂತಾನಂತ ವಂದನೆಗಳು ಅಭಿನಂದನೆಗಳು
ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು ಶುಭವಾಗಲಿ

"ಯು ಸಿರಾಜ್ ಅಹಮದ್ ಸೊರಬ"
✒✒✒✒✒✒✒✒✒✒✒✒✒✒✒✒
[9/5/2019, 2:37 PM] Wr Latha Acharya Banari: *ಕರುಣೆ*

ಕರುಣೆಯೆಂದರೆ ಏನೆಂದು ತಿಳಿದುಕೊಂಡ ಹುಡುಗನಿಗೆ ನಾಯಿಯನ್ನು ಹೊಡೆದಾಗ ತಂದೆಯ ಮೇಲೆ ಕೋಪ ಬಂದದ್ದು ಸಹಜ.  ಉತ್ತಮ ನ್ಯಾನೋ
[9/7/2019, 9:00 AM] Wr Siddesh: *ಪ್ರೇಮ್ ಮೆಡಮ್ ಅವರ ಲೇಖನ*

ಮಾನವ ಹುಟ್ಟಿನಿಂದಲೇ ಆಸೆಬುರುಕ ಹೊಟ್ಟೆಯೊಳಗೆ ಇರುವಾಗಲೆ ಹುಳಿ ತಿನ್ನುವ ಆಸೆ ....ಅದು ಭೂಮಿಗೆ ಬಂದು ಅವನು ಬೆಳಿತಾ ಬೆಳಿತಾ ಅವನ ಆಸೆಗಳ ಲಿಸ್ಟ ಕೂಡಾ ಬೆಳಿತಾ ಹೋಗುತ್ತೆ .‌ ‌.. ಅದು ಹೇಗೆ ಆಗಿದೆ ಆಸೆ ಪಡಲಿಲ್ಲ ಅಂದರೆ ಬದುಕು ಯಾಂತ್ರಿಕವಾಗಿ ಬಿಡುತ್ತದೆ ....ಆಸೆಪಟ್ಟಾಗ ಅದನ್ನ ಪಡೆಯುವ ಪ್ರಯತ್ನ ದಲ್ಲಿ ಒಂದಷ್ಟು ಕೆಲಸ ಮಾಡಿ ಬದುಕು ಚಲನಶೀಲವಾಗಿರುತ್ತದೆ ...

ಆಸೆಗಳು ಕನಸುಗಳು ....ಬದುಕಿನ ಭಾಗಗಳೇ ಅಗಿಬಿಟ್ಟಿದೆ ...

ಕೆಲವರು ಹೇಳುತ್ತಾರೆ ಆಸೆಯೆ ದುಃಖದ ಮೂಲ ಹೌದು ಅದರು ...ಕೂಡಾ ಮಿತವಾದ ಆಸೆಗಳು ಬದುಕಿನಲ್ಲಿ ಇರಲು ಬದುಕು ಸಂತಸವಾಗುವುದರಲ್ಲಿ ಅಚ್ಚರಿ ಇಲ್ಲ

ಚೆಂದ 
ಬೋದನೆಗಳು ಇರೊದು ... ಅನುಸರಿಸಲು ಅವೇ ಬದುಕು ಅಗಬಾರದು ಅಲ್ವಾ ಆಸೆಯೇ ದುಃಖದ ಮೂಲ ಅಂತಾ ಆಸೆ ಪಡೊದೆ ಬಿಡೊಕೆ ಅಗುತ್ತಾ ...

ಪ್ರೀತಿ ನೋವಿನ ಮೂಲ ಹೌದು ಅದರು ಪ್ರೀತಿ ನಿತ್ಯ ನೂತನ ಪ್ರತಿ ನಿತ್ಯ ಕಾಯಿಸಿ ನೋಯಿಸಿ ಗೆಲ್ಲುವುದು ಇದೇ *ಪ್ರೀತಿ*

ಚೆಂದ ದ ಕನ್ಸೆಪ್ಟ ಒರಿಯೆಂಟಡ್ 
*ಮನಸೇ ರಿಲ್ಯಾಕ್ಸ ಪ್ಲೀಸ್*

ಪ್ರೇಮ ಮೆಡಮ್ 

ಧನ್ಯವಾದಗಳು 

*ಸಿದ್ದು*
[9/7/2019, 5:59 PM] Wr Tr Parameshwari Prasad: *ಪ್ರೆಮ್ ಅವರ ಒಂದಿಷ್ಟು ರಿಲಾಕ್ಸ ತಗೊಳಿ ಎಂಬ ಲೇಖನ ಆಸೆಯನ್ನ ವಿಭಿನ್ನ ಸನ್ನಿವೇಶಗಳಲ್ಲಿ ಜನ ಬಳಸಿಕೊಂಡಿರುವುದನ್ನು ತಿಳಿಸಿದ್ದೀರಿ. ಆಸೆ ಎಲ್ಲಾ ಮಾನವನಲ್ಲಿ ಒಂದಲ್ಲಾ ಹಲವು ಇರುತ್ತದೆ.ಆದರೆ ಅದು ದುರಾಸೆಯಾಗದ ಹಾಗೆ ಬುದ್ಧಿಜೀವಿ ಮಾನವ ನಿಯಂತ್ರಣದಲ್ಲಿಡಬೇಕಾದುದು ಆತನ ಕರ್ತವ್ಯ ಕೂಡ ಹೌದು* *ಈ ವಿಚಾರದಲ್ಲಿ ತಮ್ಮ ಲೇಖನ ವಿಭಿನ್ನ ಜನರ ವಿಧ ವಿಧ ಆಸೆಗಳನ್ನು ಉದಾಹರಣೆ ಸಹಿತ ಉಲ್ಲೇಖಿಸಿದ್ದೀರಿ. ಕೊನೆಗೆ ಆಸೆ ಏನಿದ್ದರೂ ಮಿತವಾಗಿ ನೀನು ಬೆಳೆ ಇತರರ ಬೆಳೆಸು ಎಂಬ ಮಾತಿನ ಅರ್ಥದೊಂದಿಗೆ ಕೊನೆಯಾಗಿದೆ*👌🏻👌🏻.🙏🏻🙏🏻
[9/15/2019, 7:04 AM] Wr Uday Bhaskar Sullia: *ಪ್ರೇಮಾ ಮೇಡಂ*

ಯಾವುದೋ ಸಂದರ್ಭದಲ್ಲಿ ಯಾವುದೋ ಘಟನೆಯಲ್ಲಿ ತಮ್ಮ ಹೆಣ್ಣು ಮನಸ್ಸಿಗೆ ಆದ ನೋವು, ಹೆಣ್ತನಕ್ಕೆ ಆದ ಅವಮಾನ, ಪವಿತ್ರವಾದ ಸೋದರ ಪ್ರೀತಿಗೆ ಯಾರೋ ಕೆಟ್ಟ ಹಣೆಪಟ್ಟಿ ಕಟ್ಟಿ ನಿಂದಿಸಿದ್ದು, ಇವೆಲ್ಲವುಗಳ ಪರಿಣಾಮ ನಿಮ್ಮ ಹೆಣ್ಣು ಹೃದಯಕ್ಕೆ ಆದಂತಹ ಅತೀವ ಆಘಾತದ ಕಾರಣದಿಂದ ಉಂಟಾದ ಆಕ್ರೋಶ ನಿಮ್ಮ ಬರಹಗಳಲ್ಲಿ ವ್ಯಕ್ತ ಆಗುತ್ತಿರುವುದನ್ನು ಗಮನಿಸಿದೆ ಮೇಡಂ. ನಿಜಕ್ಕೂ ಈ ಸಮಾಜದಲ್ಲಿ ಸಭ್ಯ ಸಂಬಂಧಕ್ಕೂ ಕೆಟ್ಟ ಹಣೆಪಟ್ಟಿ ಕಟ್ಟಿ ಕಳಂಕಿತರ ದೃಷ್ಟಿಯಿಂದ ನೋಡುವ ಜಾಯಾಮಾನ ಇಂದು ನಿನ್ನೆಯದಲ್ಲ ಬಿಡಿ. ಆದರೆ ನಿಮ್ಮ ಸಂಬಂಧ ಪವಿತ್ರವಾದದ್ದೇ ಆಗಿರುವಾಗ ಇಂತಹ ಟೀಕೆಗಳಿಗೆಲ್ಲಾ  ತಲೆಕೆಡಿಸಿಕೊಳ್ಳದೆ ಧೈರ್ಯದಿಂದ ಮುನ್ನುಗ್ಗಬೇಕು ಮೇಡಂ. ಯಾಕೆಂದರೆ ಕಾಲ ಒಂದಲ್ಲ ಒಂದು ದಿನ ಅವರ ವಿಕೃತ ಮನಸ್ಥಿತಿಗೆ ತಕ್ಕ ಉತ್ತರ ಕೊಟ್ಟೇ ಕೊಡುತ್ತದೆ. ಕಾಲಚಕ್ರದ ಸುಳಿಯಿಂದ ತಪ್ಪಿಸಿಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ. 'ಮಾಡಿದ್ದುಣ್ಣೋ ಮಹರಾಯ' ಅನ್ನುವ ಸೂತ್ರದ ಆಧಾರದಲ್ಲೇ ಈ ಪ್ರಪಂಚ ಮುಂದುವರಿಯುತ್ತಿದೆ. ಆದ ಕಾರಣ ನಾವು ಏನನ್ನು ಸಮಾಜಕ್ಕೆ ಕೊಡುತ್ತೇವೋ ಅದೇ ನಮಗೆ ಹತ್ತುಪಟ್ಟಾಗಿ ಹಿಂದಿರುಗಿ‌ ನಮ್ಮನ್ನೇ ಸೇರುತ್ತದೆ ಅನ್ನೋದು ನಮ್ಮ ದಾರ್ಶನಿಕರ ಮಾತು. *ಬೀದಿನಾಯಿಯೊಂದಕ್ಕೆ ರೊಟ್ಟಿಯನ್ನು ಎಸೆದವನು ಮತ್ತು ಕಲ್ಲನ್ನು ಎಸೆದವನು ಒಂದೇ ತರಹದ ಪ್ರತಿಕ್ರಿಯೆಯನ್ನು ನಿರೀಕ್ಷಿಸಲು ಸಾಧ್ಯವಿಲ್ಲವಲ್ಲಾ..?!*  ಅದೇ ರೀತಿ ನಾವು ಸಮಾಜಕ್ಕೆ ಯಾವುದನ್ನು ಕೊಡುತ್ತೇವೋ ಅದೇ ರೀತಿಯ ಪ್ರತಿಕ್ರಿಯೆಯನ್ನೇ ನಾವು ನಿರೀಕ್ಷೆ ಮಾಡಬೇಕಾಗುತ್ತದೆ. ಇದು ಸೃಷ್ಟಿಯ ಸೂತ್ರ. ಧಾರ್ಮಿಕ ನಂಬಿಕೆಯಂತೆ ಪರಿಗಣಿಸಲ್ಪಡುವ ಪಾಪಪುಣ್ಯಗಳ ಲೆಕ್ಕಾಚಾರವೂ ಇದೇ ಆಧಾರದಲ್ಲಿ ನಡೆಯುಂತದ್ದು. ಹಾಗಾಗಿ ನಿಮ್ಮ ಮನಸ್ಸಿಗೆ ನೋವು ಕೊಟ್ಟಾತ ಅದರ ಹತ್ತು‌ ಪಟ್ಟನ್ನು ಆತನೇ ಅನುಭವಿಸುವ ಕಾಲ ಕೂಡಿ ಬರುತ್ತದೆ. ‌

ಇನ್ನು ನಿಮ್ಮ ಬರಹದ ಇನ್ನೊಂದು ಮಗ್ಗುಲಿಗೆ ಹೊರಳಿ ವಿಮರ್ಶೆ ಮಾಡುವುದಿದ್ದರೆ, ನಿಮ್ಮ ಬರಹವನ್ನು ಓದುತ್ತಾ ಓದುತ್ತಾ ಒಂದು ಕ್ಷಣ 'ಛೇ.. ಪ್ರೇಮಾ ಮೇಡಂ ಅವರಿಂದಲೂ ಇಂತಹ ಬರಹವೇ..?' ಅನ್ನುತ್ತಾ ಹುಬ್ಬೇರಿಸುವಂತಾಯಿತು. ಯಾಕೆಂದರೆ ನೀವು ಟೀಕಿಸಲು ಬಳಸಿದ ಪದಗಳು ತುಂಬಾ ಕೀಳುಮಟ್ಟದ ಭಾಷಾಪ್ರಯೋಗ ಅನಿಸಿತು. ಅದು ತಮ್ಮಿಂದ ಬರಬಾರದಿತ್ತು ಅನಿಸಿತು. ಯಾಕೆಂದರೆ ತಾವು ಗೌರವಾನ್ವಿತ ವೃತ್ತಿಯಲ್ಲಿ ಇರುವವರು, ಸಾವಿರಾರು ವಿದ್ಯಾರ್ಥಿಗಳಿಗೆ ಸಂಸ್ಕಾರವನ್ನು ಬೋಧಿಸಬೇಕಾದವರು. ಹಾಗಾಗಿ ತಮ್ಮ ಆಕ್ರೋಶವನ್ನು ಹೊರಹಾಕಲು ಇಷ್ಟು ಕಳಪೆ ಪದಗಳನ್ನು ಸಾಮಾಜಿಕವಾಗಿ ಬಳಸಬಾರದಿತ್ತು. ಯಾಕೆಂದರೆ ನಾವು ಬಳಸುವ ಪದಪುಂಜಗಳು ನಮ್ಮ ಸಂಸ್ಕಾರವನ್ನು, ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತದೆ‌. ಟೀಕಿಸಬೇಕಾದ ಸಂದರ್ಭದಲ್ಲಿ,, ಆಕ್ರೋಶ ಹೊರಹಾಕಬೇಕಾದ ಸಂದರ್ಭದಲ್ಲಿ  ಅತ್ಯಂತ ಗೌವವಯುತವಾದ ಪದಗಳನ್ನು ಬಳಸಿಯೇ ಎದುರಾಳಿಗೆ ತಕ್ಕ ಉತ್ತರ ಕೊಡಬಹುದು. ವೈಚಾರಿಕವಾಗಿಯೇ ಆತನನ್ನು ಮಣಿಸಬೇಕು‌. *ಬೈಗುಳವೂ ಒಂದು ಕಲೆ, ಆರೋಗ್ಯಕರ ರೀತಿಯಲ್ಲಿ ಬೈಯುವುದೂ ಒಂದು ರೀತಿಯ ಸಂಸ್ಕಾರ..!!* ನಿಮ್ಮ ನೋವು ಅವಮಾನದ ಆಳ ಬಹಳಷ್ಟಿರಬಹುದು ಕೇವಲ ನಿಮ್ಮ ಬರಹದ ವಿಮರ್ಶೆಯನ್ನಷ್ಟೇ ಮಾಡುವ ನನಗೆ ಆ ನೋವಿನ ಆಳದ ಅರಿವಿರಲಾರದು. ಆದರೆ ಆ ನಿಮ್ಮ ನೋವಿಗೆ, ಅವಮಾನಕ್ಕೆ ಪ್ರತಿಕ್ರಿಯೆ ಕೊಡುವ ಸಂದರ್ಭದಲ್ಲೂ ನೀವು ನಿಮ್ಮ ವ್ಯಕ್ತಿ ಘನತೆ ಮತ್ತು ವೃತ್ತಿ ಘನತೆಯನ್ನು ಕಾಪಾಡಬೇಕಾದದ್ದು ಅಷ್ಟೇ ಮುಖ್ಯ. ಯಾಕೆಂದರೆ ನಮ್ಮ ಎದುರಾಳಿಯಷ್ಟೇ ಕೀಳುಮಟ್ಟಕ್ಕೆ ನಾವು ಕೂಡ ಇಳಿಯುವುದಾದರೆ ನಮಗೂ ಅವರಿಗೂ ವ್ಯತ್ಯಾಸ ಏನಿದೆ ಅಲ್ಲವೇ..? 

ಹಿಂದೊಮ್ಮೆ ವೃತ್ತಿಯ ಕುರಿತಾಗಿ ಮಂಡಿಸಿದ ವೈಚಾರಿಕ ಚಿಂತನೆಯೂ ನಿಮ್ಮ ವೃತ್ತಿಯ ಘನತೆಗೆ ಧಕ್ಕೆ ತಂದಿರುವಾಗ, ಇಂತಹ ಬರಹಗಳು ನಿಮ್ಮ ವೃತ್ತಿಯ ಘನತೆಗೆ ಧಕ್ಕೆ ತರಲಾರದೇ ಮೇಡಂ.?!

ಇರಲಿ ಮೇಡಂ, ನಿಮಗೆ ನೋವು ಕೊಟ್ಟಾತನಿಗೆ ಕಾಲವೇ ತಕ್ಕದಾದ ಉತ್ತರ ಕೊಡಲಿ ಅನ್ನುವ ಸದಾಶಯ ನನ್ನದು. ಹೆಣ್ಣಿನ ನಡತೆಗೆ, ಶೀಲಕ್ಕೆ ಮತ್ತು ಸಭ್ಯ ಸಂಸ್ಕಾರಕ್ಕೆ ಯಾರೇ ಅವಮಾನ ಮಾಡಿದರೂ ಅದನ್ನು ನಾವು ಸಮರ್ಥಿಸಿಕೊಳ್ಳಲು ಖಂಡಿತಾ ಸಾಧ್ಯವಿಲ್ಲ. ಖಂಡಿತಾ ನಿಮ್ಮ ಬಗ್ಗೆ ಕೀಳುಧೋರಣೆ ತಳೆದು ನಿಂದಿಸಿದ ಆತನದ್ದು ನಿಜಕ್ಕೂ ವಿಕೃತ ಮನಸ್ಸು. ಚಿಂತಿಸದಿರಿ, ಕಾಲದ ಉತ್ತರದ ನಿರೀಕ್ಷೆಯಲ್ಲಿ ಕಹಿ ಘಟನೆ ಮರೆತುಬಿಡಿ‌. 

*ಕವಿಭಾವಕ್ಕೆ ಧಕ್ಕೆ ಆಗಿದ್ದಲ್ಲಿ ಕ್ಷಮಿಸಿಬಿಡಿ..*

*- ಉದಯಭಾಸ್ಕರ್ ಸುಳ್ಯ*
[9/16/2019, 4:22 PM] Wr Vara Lakshmi Amma: ಪ್ರೇಮ ಅವರ ಬಿದ್ದೆ
 ಬಿಂದಿ.. ಬಿಂದಿಗೆ
 ಇರುವುದು  ಒಂದಕ್ಷರ ವ್ಯತ್ಯಾಸ ಆದರೆ ಪರಿಣಾಮ ಅಗಾಧ
 ಅಂದು ಬಿಂದಿಯ ಬಣ್ಣಕ್ಕೆ ಬೆರಗಾಗಿ,  ಇಂದು ಬಣ್ಣವಿಲ್ಲದ ನೀರಿನ ಬಿಂದಿಗೆ ಹೊರಬೇಕಾಯಿತು😄
[9/16/2019, 5:52 PM] Wr Uday Bhaskar Sullia: *ಪ್ರೇಮಾ ಮೇಡಂ*

'ಬಿಂದಿ' ಗೆ.. 'ಬಿಂದಿಗೆ' ದ್ವಂದ್ವಾರ್ಥ ಬಳಸಿಕೊಂಡ ಸೃಜನಶೀಲ ಹಾಸ್ಯ ಹನಿ ಚೆನ್ನಾಗಿದೆ😁👌🙏
[9/17/2019, 4:11 PM] Wr Madhu Karagi: ಜೀವನ

ಪ್ರೇಮ್ ಮೇಡಂ ಸೂಪರ್ ಹನಿ  
ಸುಗಮ ಬಾಳಿನ ಸೂತ್ರವನ್ನು ಚೆಂದ ಬರೆದಿದ್ದೀರಿ  ಹೌದು ಮತ್ತೆ ಬೇಲಿಯೇ ಎದ್ದು ಹೊಲ ಮೆಯ್ದರೆ ಹೇಗೆ ಯಾರಿಂದ ರಕ್ಷಣೆ ಯಾರಿಂದ ಪೋಷಣೆ ಆ ಬಾಳನ್ನು ದುರ್ಗಮಕ್ಕೆ ಹೋಲಿಸಿದ್ದು ಒಪ್ಪುವಂತಹುದೇ ಮೇಡಂ ಚೆಂದದ ಬರಹ 
ಶುಭವಾಗಲಿ 
ಮಧು ಕಾರಗಿ
[9/19/2019, 1:24 PM] Tr Ramesh: ಪ್ರೇಮ ಮೇಡಮ್ ಅವರ *ಬದಲಾವಣೆ* 👌

ಒಂಟಿಯಾಗಿದ್ದಾಗ ಕಾರುತ್ತಿದ್ದ ಬೆಂಕಿ, ಜಂಟಿಯಾದ ಮೇಲೆ ತಣ್ಣಗಾದ ಪರಿ ಸೊಗಸಾಗಿದೆ. ಉದಯವೆಂಬ ಉದಕದಿ ಪ್ರೇಮವರಳಿದ ಬಗೆ ಸೂಪರ್

🙏🙏🙏🙏
[9/19/2019, 2:32 PM] Wr Kshama Raghuram: *ಬದಲಾವಣೆ...*

ಪ್ರೇಮ್  ಮೇಡಂ  ನಮಸ್ಕಾರ ....
ಶಿರ್ಷಿಕೆ ಗೆ  ತಕ್ಕಂತೆ 
ಅರ್ಥಪೂರ್ಣ  ಹನಿ...

ಏನ್  ಮಾಡೋದು..  ಹೇಳಿ  ಮೇಡ಼ಂ....
ಮದುವೆ  ಆದ ಮೇಲೆ
ಬದಲಾವಣೆ  ಬದುಕಿನಲ್ಲಿ 
ಅನಿವಾರ್ಯ....
ಚೆಂದದ ಹನಿ...

ಧನ್ಯವಾದಗಳು   ಮೇಡಂ

ಕ್ಷಮಾ  ರಘುರಾಮ್
[9/27/2019, 11:31 AM] Wr Vara Lakshmi Amma: ಪ್ರೇಮ್  ಅವರ ಭಾವಗೀತೆ  *ಬಾಳನಾಕ*
   ನಿಜ ನಾಕ ನರಕ  ನಮ್ಮ ಭಾವಗಳಲ್ಲಿದೆ,  
 ನಮ್ಮ ನಡೆ ನುಡಿ ಪರರ ಮನವ ನೋಯದಂತೆ ನಡೆದುಕೊಂಡರೆ  ಅಲ್ಲಿ  ಸಿಗುವ ಸಮಾಧಾನ, ಸಂತೋಷದಲ್ಲಿದೆ ನಾಕ. 
ಪರಸ್ಪರ ಸೌಹಾರ್ದತೆಯಲ್ಲಿದೆ ನಾಕ
 ದೀಪದ ಬುಡದಲ್ಲಿದೆ ಕತ್ತಲು
 ಆದರೆ ತುದಿಯ ಬತ್ತಿ ಕೊಡುವುದು ಬೆಳಕು,  ಎರಡೂ ಒಂದರಲ್ಲಿ ಅಡಗಿದೆ. 
 ನಮಗಿರುವುದು ಒಂದೇ ಮನಸ್ಸು,  ಕೆಟ್ಟದ್ದು,  ಒಳ್ಳೆಯದು ಅಲ್ಲಿಯೇ ಉಧ್ಬವ, 
  ಅಂದಮೇಲೆ ನಮ್ಮಲ್ಲಿಯೆ ಇರುವ ನಿಯಂತ್ರಣ ಶಕ್ತಿ,  ಒಳ್ಳೆಯದಕ್ಕೆ ಉಪಯೋಗಿಸೋಣ. 
   ಪ್ರತಿ ಚರಣದಲ್ಲು ವಾಸ್ತವಿಕತೆ ಇದೆ. ಬಹಳ ದಿನಗಳ  ನಂತರ ನಿಮ್ಮ  ನೈಜ ಕವಿತ್ವ ಹೊರ ಬಂದಿದೆ  .🙏
[10/1/2019, 8:21 AM] Nybr Pramila: ಪ್ರೇಮ್ ಜೀ
ಒಳ್ಳೆತನ, ದಾನ ಧರ್ಮಗಳು ಈ ಕಾಲಕ್ಕೆ ಹೊಂದಿಕೆಯಾಗಲ್ಲ ಅಂತೀರಾ? 
ನಿಮ್ಮ ಕತೆ ಓದಿದಾಗ ನನಗನಿಸಿದ್ದು, ಸ್ವಲ್ಪ ಮಟ್ಟಿಗೆ ಹೌದು ಅಂತಾನೂ ಅನಿಸ್ತು. 
ವಾಸ್ತವ ಬೇಸರವೆನಿಸಿತು. ಉತ್ತಮ ನ್ಯಾನೋ, ಶುಭವಾಗಲಿ💐💐
[10/1/2019, 4:01 PM] Wr Nagamani Mysore: ಪ್ರೇಮ್ ಅವರ ಪಾವನ ಹೃದಯಸ್ಪರ್ಶಿ ಕಥೆಯಾಗಿದೆ. 
ಪರೋಪಕಾರಿ ಯಾಗಿ ಬದುಕಿದವನ ಅಂತ್ಯ ದುರ್ಭರ !
[10/2/2019, 11:57 AM] Wr Shiv Karnandi: ಪ್ರತಿಮೆ, ರೂಪಕಗಳನ್ನು ಬಳಸಿ ಕವಿತೆ ಕಟ್ಟುತ್ತಿದ್ದ ಚಂಪೂ ಅವರ ಬಹಳಷ್ಟು ಕವಿತೆಗಳನ್ನು ಅರ್ಥೈಸಿಕೊಳ್ಳಲು ಕಷ್ಟವಾಗಿ ಕನ್ನಡ ಡಿಕ್ಷನರಿ ನೋಡಿ ಅಥವಾ ಅವರನ್ನೇ ಆ ಪದಗಳ ಅರ್ಥ ತಿಳಿದುಕೊಂಡು ಅವರ ಕವಿತೆಗಳನ್ನು ಓದುತ್ತಿದ್ದೆ, ಅಷ್ಟೊಂದು ಕಠಿಣ ಪದಗಳ ಮೂಲಕ ಕವಿತೆ ರಚಿಸುತ್ತಾರೆ ಚಂಪೂ ರವರು. *ಶ್ರೀ ಚಂದ್ರಶೇಖರ ಯಲ್ಲಪ್ಪ ಪೂಜಾರ* ಅವರು *ಚಂಪೂ* ಎಂಬ ಕಾವ್ಯನಾಮ ದಿಂದ ಸ್ನೇಹಿತರ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ ಶ್ರೀಯುತರು.

ಕಳೆದ ವರ್ಷವಷ್ಟೆ ಇವರು *"ನಿಮ್ಮ ಪ್ರೀತಿಯ ಕೋತಿಮರಿ"* ವಿಮರ್ಶಾ  ಪುಸ್ತಕ ನಾಡಿಗೆ ನೀಡಿ ವಿಮರ್ಶಕರಾಗಿ ಬಡ್ತಿ ಪಡೆದುಕೊಂಡಿದ್ದರು. ಈಗ ನೋಡಿದರೆ ಗಜಲ್ ಸಂಕಲನದತ್ತ ತಮ್ಮ ನೋಟ ಹರಿಸಿದ್ದಾರೆ. ಕನ್ನಡದಲ್ಲಿ ಹಲವಾರು ಕವಿಗಳು ಗಜಲ್ ಕೃಷಿ ಮಾಡುತ್ತಿದ್ದಾರೆ ಅಂತವರ ಸಾಲಿನಲ್ಲಿ ಹೊಸ ಸೇರ್ಪಡೆ ಚಂಪೂ ಅವರದು. ಈ ಮೊದಲೇ ೪ ಪುಸ್ತಕಗಳನ್ನು ಹೊರತಂದಿರುವ ಇವರು ತಮ್ಮ ೫ ನೇ ಪುಸ್ತಕ *ಚೆಂಬೆಳಕ ದಾರಿಯಲ್ಲಿ*....ಎಂಬ ಗಜಲ್ ಸಂಕಲನ ದಿಂದ ಕನ್ನಡ ಸಾರಸ್ವತ ಲೋಕಕ್ಕೆ ಅತ್ಯದ್ಭುತ ಕೊಡುಗೆ ನೀಡಲು ಕಾತರರಾಗಿದ್ದಾರೆ.

ಚಂಪೂ ರವರ ಗಜಲ್ ಗಳು ಹೇಗಿವೆಯೆಂದರೆ ಎಂತವರಾದರೂ ಓದಿದರೆ ವಾವ್ ಎಂಬ ಉದ್ಘಾರ ಮಾಡುತ್ತಾರೆ , ಅಷ್ಟು ಅದ್ಬುತವಾಗಿ ಗಜಲ್ ಬರೆಯುತ್ತಾರೆ ಶ್ರೀಯುತರು. ಇವರ ರಚಿಸಿರುವ ಗಜಲ್ ಗಳು ನಿಯಮಗಳನ್ನು ಅಳವಡಿಸಿಕೊಂಡು ಓದುಗರ ಮನದೊಳಗೆ ನೇರವಾಗಿ ನಾಟುತ್ತವೆ ಇವರ ಗಜಲ್ ಗಳು...ಇವರ ಗಜಲ್ ಗಳನ್ನು ಓದುತ್ತಾ ಬಂದಿದ್ದರಿಂದ ಈ ಮಾತು ಹೇಳಬೇಕಾಯಿತು.

*ಚೆಂಬೆಳಕ ದಾರಿಯಲ್ಲಿ* ನೀವೊಮ್ಮೆ ನಡೆದು ನೋಡಿ ಅದರ ಸವಿ ಸವಿಯಬೇಕು..ಶ್ರೀಯುತ ಚಂಪೂ ಅವರ ಗಜಲ್ ಸಂಕಲನ ನಾಡಿನಾದ್ಯಂತ ಮನೆಮಾತಾಗಲಿ, ಹೆಸರು ಕೀರ್ತಿ ತರಲೆಂದು ಹಾರೈಸುವೆ. 

ನಾಳೆ ಅಂದರೆ ೦೩-೧೦-೨೦೧೯ ರಂದು ಬೈಲಹೊಂಗಲ ದಲ್ಲಿ ಚಂಪೂ ರವರ #ಚೆಂಬೆಳಕ_ದಾರಿಯಲ್ಲಿ ಎಂಬ ಗಜಲ್ ಸಂಕಲನ ಬಿಡುಗಡೆಗೊಳ್ಳಲಿದೆ.....ನಾನು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೇನೆ.....

ನೀವು ಬನ್ನಿ....

ಧನ್ಯವಾದಗಳು

*ಶಿವಕುಮಾರ ಕರನಂದಿ*
[10/10/2019, 2:33 PM] Wr Sham Prasad Bhat: *ನವರಾತ್ರಿ*

*ಪ್ರೇಮ್*

*ನವರಾತ್ರಿ ಎಂದಾಗ ನಮ್ಮ ದಿನಚರಿಯಲ್ಲಿ ಬದಲಾವಣೆಗಳಾಗುತ್ತವೆ.ಕೆಲವರು ಮುಂಜಾನೆ ಮಿಂದು ದೇವಾಲಯಕ್ಕೆ ತೆರಳಿ ದೇವಿ ದರ್ಶನ ಮಾಡುತ್ತಾರೆ.ಭಜನೆ,ಪೂಜೆಗಳಲ್ಲಿ ತಮ್ಮನ್ನು ತೊಡಗಿಸಿಕ್ಕೊಳ್ಳುತ್ತಾರೆ*

*ಇನ್ನು ಸಂಭ್ರಮ, ಸಡಗರದ ವಿಚಾರಕ್ಕೆ ಬಂದಾಗ ಪುರವನ್ನು ತಳಿರು ತೋರಣಾದಿಗಳಿಂದ ಶೃಂಗಾರ ಮಾಡಲಾಗುತ್ತದೆ.ವಿದ್ಯುತ್ ದೀಪಾಲಂಕಾರದಿಂದ ಕ್ಷೇತ್ರದ ಸೌಂದರ್ಯ ಇಮ್ಮಡಿಯಾಗುತ್ತದೆ*

*ಕಲೆಯ ವಿಚಾರಕ್ಕೆ ಬಂದಾಗ ನವರಾತ್ರಿಯಲ್ಲಿ ಭಕ್ತಿ ಸಂಗೀತ,ಪೌರಾಣಿಕ ನಾಟಕಗಳು,ಯಕ್ಷಗಾನ ಇತ್ಯಾದಿಗಳು ಹೆಚ್ಚಿನ ಮನೋರಂಜನೆ ನೀಡುತ್ತವೆ.ದೇವಿಯ ಗುಣಗಾನಕ್ಕೆ ಆದ್ಯತೆ ನೀಡಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ.*

*ದಸರಾ ನಾಡಹಬ್ಬವಾದ್ದರಿಂದ ಶಾಲಾ ಕಾಲೇಜುಗಳಿಗೆ ರಜೆ ಇರುತ್ತದೆ.ಕುಟುಂಬದವರೆಲ್ಲಾ ಒಟ್ಟಾಗಿ ಧಾರ್ಮಿಕ ಕ್ಷೇತ್ರಗಳಿಗೆ ತೆರಳುತ್ತಾರೆ.ಸಡಗರ ಸಂಭ್ರಮದಲ್ಲಿ ರಜೆ ಮುಗಿದದ್ದೇ ತಿಳಿಯುವುದಿಲ್ಲ*

*ಲೋಕಕಲ್ಯಾಣಕ್ಕೆ ಪ್ರಾರ್ಥನೆ ಮಾಡುತ್ತಾ ಕವನಕ್ಕೆ ಮಂಗಳ ಹಾಡಲಾಗಿದೆ*

*ಸಾದ್ಯ ಆದಷ್ಟು ವಿಚಾರಗಳನ್ನು ಕವನದಲ್ಲಿ ತುಂಬಿರುವಿರಿ.ನವರಾತ್ರಿಯ ಸಮಗ್ರ ಮಾಹಿತಿಯನ್ನು ಒಳಗೊಂಡ ಕವನ ಭಕ್ತಿ, ಭಾವಸಹಿತ ಚೆನ್ನಾಗಿ ಮೂಡಿಬಂದಿದೆ.*

*ವಿಮರ್ಶೆಯಲ್ಲ.ಕವನ ಓದಿದಾಗ ಉಂಟಾದ ಅನಿಸಿಕೆಗಳನ್ನು ಇಲ್ಲಿ ಹೇಳುವ ಪ್ರಯತ್ನ ಅಷ್ಟೇ*

*ಧನ್ಯವಾದಗಳು*

*ಶ್ಯಾಮ್ ಪ್ರಸಾದ್ ಭಟ್*
[10/10/2019, 2:49 PM] Wr Suma Ulihalli: *ನವರಾತ್ರಿ*
 
ಪ್ರೇಮ್ ರವರ ಕವನದಲ್ಲೂ ನಾಡಿನ ಹಬ್ಬ ದಸರಾದ ಸಂಭ್ರಮವು  ಕಂಡು ಬರುತ್ತದೆ. ಜನಸಾಮಾನ್ಯರೆಲ್ಲರು  ಆಚರಿಸುವ ಹಬ್ಬ ಇದಾಗಿದ್ದು ,ಜಂಜಾಟದ ಬದುಕಿನ ಕೆಲವೊಂದಿಷ್ಟು ಇತಿ ಶ್ರೀ ಹಾಡಿ ರಜೆಯಲ್ಲಿ ಮೊಜಿನಿಂದ ಸಂಭ್ರಮಿಸುವುದು. 
       ಹಳ್ಳಿಗಳಲ್ಲಿ ದೇವಿಯ ಆರಾಧನೆ ಮತ್ತು ಪುರಾಣ ಪುಣ್ಯ ಕಥೆಗಳ ಮೂಲಕ ಜನರಿಗೆ ಒಂಬತ್ತು ದಿನಗಳಲ್ಲೂ ಕೀರ್ತನೆ ಮಾಡುತ್ತಾರೆ ,ಆ ಸಂದರ್ಭದಲ್ಲಿ ಜನರೆಲ್ಲ ದೇವಸ್ಥಾನಗಳಿಗೆ ತೆರಳುವುದು ಸಂಗೀತ ನೃತ್ಯ ಎಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಸಂತಸ ಪಡುವ ರೀತಿಯನ್ನು ಬಿತ್ತರಿಸುವ ನಿಮ್ಮ ಕವನ👌🏻👌🏻👌🏻
ಧನ್ಯವಾದಗಳು ಸರ್🙏🙏

*ಸುಮಾ.ಹುಲಿಹಳ್ಳಿ*

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ