[2/25, 8:51 AM] Wr Anuradha Shivaprak: ಪ್ರೇಮ್ ಅವರ ಭಾರತೀಯರ ಬುದ್ಧಿ
ಇಂದಿನ ದಿನಗಳಲ್ಲಿ ಭಾರತೀಯರಾದ ನಾವು ಭಾರತದ ಮೂಲ ಸಂಸ್ಕೃತಿ ಮರೆತು ವಿದೇಶಿಯರ ಅನುಕರಣೆ ಮಾಡುತ್ತಿರುವುದು ನಿಜಕ್ಕೂ ಖೇದಕರ. ವಿಕೃತ ಮನಸ್ಸಿನ ಸ್ಥಿತಿಯೂ ಹೌದು. ಭಿಕ್ಷುಕರಂತೆ ಹರಿದ ಬಟ್ಟೆ ಹಾಕಿಕೊಳ್ಳುವುದು ಮಿನಿ ಮಿಡಿಗಳಲ್ಲಿ ಅಂಗ ಪ್ರದರ್ಶನ ಮಾಡುವುದು ನಿಜಕ್ಕೂ ಸಂಸ್ಕೃತಿಯ ಅಧಃಪತನಕ್ಕೆ ಹಿಡಿದ ಕೈಗನ್ನಡಿ.
ಒಳ್ಳೆಯತನವ ಅರಿತುಕೊಂಡು ಅದರಂತೆ ಬದುಕೋಣ ಹಾಯ್ ಬಾಯ್ ಬಿಟ್ಟು ಗೌರವಪೂರ್ವಕ ನಮಸ್ಕಾರ ಸಲ್ಲಿಸೋಣ ಎಂಬ ಆಶಯ ಹೊಂದಿದ ಕವನ ನಿಜಕ್ಕೂ ಉತ್ತಮವಾಗಿದೆ
[2/28, 11:43 AM] +91 70267 76576: ಪ್ರೇಮಾ ಜೀ ಅವರ💐 ಅರ್ಪಿತ ಹಾರ💐
ಹನಿ ಬಳಗವ ಹೆಣೆದು ಸಾಹಿತ್ಯ ಸೇವೆ ಮಾಡುತ್ತಿರುವ ಕವಿಮನಗಳಿಗೆ ಅರ್ಪಿಸಿದ ನಿಮ್ಮ ಕವನ ಸುಂದರ ಜಿ... ಬಿಡುವಿಲ್ಲದ ಸಮಯದಲ್ಲಿ ತಿದ್ದಿ ತಿಡಿ ಕಲಿಸುವ ಬಳಗದ ಕಾರ್ಯ ಶ್ಲಾಘನೀಯ.... ಪ್ರೀತಿ, ಸ್ನೇಹ ಮಮಕಾರದಿ ಬೆಳೆಸುವ ಬಳಗ.ಉಳಿ ಪೆಟ್ಟು ಬಿದ್ದಾಗಲೇ ಕಲ್ಲೊಂದು ಮೂರ್ತಿ ಆಗುವದು ಹಾಗೆ ಹೀರಿಯರು ನಮ್ಮ ತಪ್ಪುಗಳನ್ನ ನೇರವಾಗಿ ಹೇಳಿದಾಗ ಬೇಸರಿಸದೆ ತಿಳಿದುಕೊಂಡು ಕಲಿತರೆ ಖುಷಿ ಇಂದ ಕಲಿಯಬಹುದು. ಪ್ರತಿಯೊಂದು ಅಕ್ಷರದ ಸಾಲುಗಳು ವಜ್ರದ ಹಾರಗಳಾಗಿ ಕನ್ನಡಾಂಬೆಯ ಶೃಂಗರಿಸುವ ಭಾವ ವಾವ್ ಅದ್ಭುತ ಜಿ.. ನಿಮ್ಮ ಬಳಗದ ಪ್ರೀತಿಗೆ ಶರಣು ಹೇಳುತ್ತ ಅನಿಸಿಕೆಗಳು ತಪ್ಪಾದಲ್ಲಿ ಕ್ಷಮೆ ಇರಲಿ ಜೀ
ಧನ್ಯವಾದಗಳು ...
ಜಯಶ್ರೀ..
[2/28, 1:18 PM] Wr Manjula B K: ಪ್ರೇಮ್ ಅವರ ಪದಗಳ ಹಾರ
ಒಂದು ವಿಭಿನ್ನ ವಿಷಯವನ್ನು ಕವಿತೆಯಲ್ಲಿ ಕವಿತೆಯ ಬಗ್ಗೆಯೇ ಕವನ ರಚಿಸಿದ ಬಗೆ ಸೊಗಸು.
ಒಂದು ಕವಿತೆಯನ್ನು ರೂಪಿಸುವಾಗ ಯಾವ ಹಂತಗಳನ್ನು ಅನಿಸರಿಸಿದರೆ ಉತ್ತಮ ಕವಿತೆ ರೂಪಿತವಾಗುತ್ತದೆ ಎನ್ನುವ ಸಾಲುಗಳು ಉತ್ತಮ.
ಮಂಜುಳಾ. ಬಿ. ಕೆ
[2/28, 3:08 PM] Wr Vara Lakshmi Amma: ಪ್ರೇಮ ಅವರ **ಅರ್ಪಿತ ಹಾರ*
ಸುಂದರವಾದ ಹೂಮಾಲೆಯೊಂದನ್ನು ಅಂದವಾದ ಪದ ಸಮೂಹದಿಂದ ಪೋಣಿಸಿ ಅರ್ಪಿಸಿದ್ದಾರೆ. ಹಿಂದಿನಿಂದ ನಾರು ಸ್ವರ್ಗಕ್ಕೆ ಸೇರುವಂತೆ ಈ ಹನಿ ಹನಿಬಳಗಕ್ಕೆ ಬಂದ ಕವಿಗಳು ಬರೆಯುತ್ತಾ ತಿದ್ದುತ್ತಾ ಉತ್ತಮ ಗುಣಮಟ್ಟದ ಸಾಹಿತ್ಯ ನೀಡುತ್ತಾರೆ. ಇಂಥ ಬಳಗಕ್ಕೆ ಇವರ ಹಾರದ ಅರ್ಪಣೆ ನಿಜಕ್ಕೂ ವಂದನೀಯ. ಉತ್ತಮ ಬರಹಗಾರರ ಪ್ರೇಮ ಅವರ ಸಾಹಿತ್ಯ ಸೇವೆಯಲ್ಲಿ ಹೀಗೆ ಮುಂದುವರಿಯಲಿ ಎಂದು ಹಾರೈಸುವ🙏
[3/2, 7:18 AM] Wr Shivaprasad Aradhya: ಪ್ರೇಮ ಕವಿಗಳು ಚೆನ್ನಾಗಿ ಬರೆದಿದ್ದಾರೆ ಆದರೆ ಚಿಕ್ಕ ಚಿಕ್ಕ ಸಾಲುಗಳ ಮಾಡಲು ಕವನವಾಗಿ ಕಾಣಿಸುತ್ತದೆ. ಅದರೆ ಉದ್ದುದ್ದವಾಗಿ ನವ್ಯದಲೂ ಬರದೆ ಗಪದ್ಯವಾಗಿ ಬರೆದರೂ ಉತ್ತಮ ಸಂದೆಶಗಳು ಅತ್ಯುತ್ತಮ ಭಾವಗಳ ಕವನ ಇದು. ಶುಭವಾಗಲಿ ಕವಿಗಳೇ ಶುಭವಾಗಲಿ
ಶಿವಪ್ರಸಾದ್ ಆರಾಧ್ಯ
[3/2, 9:43 AM] Wr Kumar Chalawadi: 🌿🌿🌿
@ಪ್ರೇಮ್@ ರವರ" ನನ್ನ ನೋಡಿ ಕಲಿ" ಶೀರ್ಷಿಕೆ ಓದಿಯೇ ಕವನ ಓದಬೇಕೆನಿಸುತ್ತದೆ! ಚಂದಿರನ ಸ್ವಗತ ಗೀತೆಯಾಗಿ ಮನಸೆಳೆಯುತ್ತದೆ! ಬೆಳಕನ್ನು ಪ್ರತಿಫಲಿಸುವ ಚಂದಿರನ ತ್ಯಾಗ ಮನೋಭಾವವನ್ನು ತಮ್ಮ ಕವನದ ಸಾಲಿನಲ್ಲಿ ಮೇಳೈಸಿದ ರೀತಿ ಚೆಂದ! ' ಪರರಿಗೆ ಸಹಾಯ ಮಾಡುವ ಮನಸಿರಬೇಕು'!
ಪಾಕ್ಷಿಕಕೊಮ್ಮೆ ಗೋಚರಿಸುವ ಚಂದಿರ
ಕರಗಿ ಹೋಗುವಂತೆ ' ಮೆರೆದರೂ ಕರಗಿ ಹೋಗುವ' ಸಾಲಿಗೆ ಹೋಲಿಸಿದ್ದು ಆಕರ್ಷಕ!
ಚಂದದ ಕವನ!
🌿🌿🌿
[3/4, 7:26 AM] Wr Varalaxmi K N: ನಮಸ್ತೆ ಪ್ರೇಮ ಮೇಡಮ್.
ಮಹಿಳಾ ದಿನಾಚರಣೆ ಸಮೀಪವಿರುವಾಗ ಹೆಣ್ಣಿನ ಪ್ರಾಧ್ಯಾನತೆ ಬಗ್ಗೆಯೂ ನಿಮ್ಮ ಕವನ ಬೆಳಕು ಚೆಲ್ಲಿದೆ.
ತನ್ನ ಕಂದಮ್ಮಗಳಿಗೆ ಹೊಟ್ಟೆತುಂಬಾ ಆಹಾರ ಕೊಡಲು ತನ್ನ ಜೀವನವ ಮುಡಿಪಿಡುವ ಬಗೆಯ ಕವನದಲ್ಲಿ ಸೊಗಸಾಗಿ ವಿವರಿಸಿದ್ದೀರಿ.
ತಪ್ಪಿದ್ದರೆ ತಿದ್ದಿ
ಧನ್ಯವಾದಗಳು ಮೇಡಮ್ 🙏
ಕೆ ಎನ್ ವರಲಕ್ಷ್ಮಿ
[3/4, 2:12 PM] Wr Nagamma: ಪ್ರೇಮ್ ಜೀ
ನಿಮ್ಮ
ಉಣಿಸುವ ಕೈಗಳು...
ಬಹಳ ಸುಂದರವಾಗಿ ಮೂಡಿದೆ..
ಅಮ್ಮನ..ಹಿರಿಮೆ ಗರಿಮೆ..ಹಾಡಿದ ಪದ ಗಳು..ಅವಳ ದುಡಿಮೆಯ ಕರಗಳಿಗೆ..ವಂದಿಸಿದೆ..
ಧನ್ಯವಾದಗಳು...
ಎಸ್.ನಾಗಮ್ಮ🌹
[3/5, 7:39 AM] +91 99641 78536: 🌹 ಪ್ರೇಮ ಮೇಡಂ ಜೀ💐🙏
🌹ಅರ್ಪಣೆ🌹
ಹೃದಯದ ಅಂತರಂಗದಿ ಭಕ್ತಿ ಭಾವದಿಂದ ಹಾಡಿದ ಕವನ, ಭರತಮಾತೆಯ ಮಡಿಲಲ್ಲಿ ಜನಿಸಿದ ಜನ್ಮ ಧನ್ಯ ಎಂದು ಹೇಳುತ ಜೀವನ ಬಾಂಧವ್ಯ ಸಾರುತ ಸೃಷ್ಟಿ ಸಂಕುಲವ ಸಾರಿದ ಬರಹ ಅಭಿನಂದನೆಗಳು 👌👌👌
ಸುಂದರ ಕವನ 👌👌👌
ಬಾಬಣ್ಣ.
(ಪ್ರಶಾಂತ ಆರ ದೈವಜ್ಞ)
ಕರೇಕ್ಯಾತನಹಳ್ಳಿ.
[3/12, 11:30 AM] Wr Nagamma: ಪ್ರೇಮ್ ಜೀ🙏🏼
ದಾರಿ ಯಾವುದಯ್ಯಾ
ಸ್ವಲ್ಪ ಗಳಿಗೆಯಾದ ಇಂಟರ್ನೆಟ್ ಇಲ್ಲದೆ....ನೈಜ ವಾಗಿ..ಎಲ್ಲರೊಡನೆ ಮುಕ್ತ ವಾಗಿಬೆರೆಯಲಿ..
..ಎಲ್ಲರೂ ಇಂಟರ್ನೆಟ್..ಲೋಕದಲ್ಲಿ...ಲೀನವಾಗಿ..ನಮ್ಮನ್ನೇ ನಾವು ಕಳೆದು ಕೊಂಡಿದ್ದೇವೆ ಎಂಬ..
ಸಮಾಜಿಕಕಳಕಳಿಯ ಕವನ..
ಕ್ಕಾಗಿ ಧನ್ಯವಾದಗಳು.
ಎಸ್.ನಾಗಮ್ಮ🌹
[3/12, 7:55 PM] Wr Venktesh Chagi: *ಪ್ರೇಮ್ ರವರು ಇಂಟರ್ನೆಟ್ ಬೇಡ ಎನ್ನುತ್ತಿದ್ದರೆ. ಆದರೆ ಇಂಟರ್ನೆಟ್ ಇಲ್ಲದೇ ಇಂದಿನ ಜಗತ್ತು ಜಗತ್ತು ಇಲ್ಲ. ವಾಸ್ತವವಾಗಿ ಇಂಟರ್ನೆಟ್ ಬೇಕು ಆದರೆ ಬಳಕೆಯ ಮಿತಿ ಮೀರಿದೆ. ಕವನದಲ್ಲಿ ಇಂಟರ್ನೆಟ್ ನ ಅಗತ್ಯತೆಯ ಬಗ್ಗೆ ಒಂದೆರಡು ಸಾಲುಗಳಿಗೆ ಅವಕಾಶ ಕೊಡಬಹುದಿತ್ತು. ಪ್ರಾಸಕ್ಕೆ ಕೊಟ್ಟ ಪ್ರಾಶಸ್ತ್ಯ ಕಡಿಮೆಯಾಗಬಹುದಿತ್ತು. ಕವನ ಚೆನ್ನಾಗಿದೆ.*
✍ *ವೆಂಕಟೇಶ ಚಾಗಿ*
[3/13, 9:11 AM] Wr Mallesh G Raj: ಪ್ರೇಮ್ ಗುರುಗಳ ಕವನ ಜಲಸಾಗರದಲ್ಲಿ ಏರೀಳಿಯುವ ಅಲೆಗಳ ತೆರನಲಿ ಪ್ರಶ್ನಾಮಾಲಿಕೆಯಂತೆ ಮೂಡಿದೆ.ಯಾರಿದು ಅವರನ್ನೇ ಪ್ರಾಮುಖ್ಯೀಕರಿಸಿದ್ದರೆ ಕವನದ ಸ್ತರ ಇನ್ನೂ ಚೆಂದಿರುತ್ತಿತ್ತೇ ಯೋಚಿಸಿ,ಬುವಿ ಪದ ಗಮನ ಸೆಳೆದದ್ದು ಒಟ್ಟಾರೆ ಉತ್ತಮ ಪ್ರಯತ್ನ ಶುಭೋದಯದ ಮೊದಲ ಕವನ 👍🏻 ಕವಿ ಭಾವ ಚ್ಯುತಿಯಾಗಿರಲು ಕ್ಷಮೆ ಇರಲಿ.
[3/14, 1:50 PM] Wr Varalaxmi K N: ನಮಸ್ತೆ ಪ್ರೇಮಾ ಮೇಡಮ್.
ಮಳೆರಾಯ ಪ್ರೇಮಾ ಮೇಡಮ್ ಎಷ್ಟು ಚೆಂದದಿ ಕರೆಯುತ್ತಾ ಇರುವರು .ದಯಮಾಡಿ ಬಂದುಬಿಡಿ ಮಳೆರಾಯ.
ಮಳೆರಾಯನಿಗಾಗಿ ಮನುಜ ಮತ್ತು ಪಶುಪಕ್ಷಿಗಳು ಪರಿತಪಿಸುವ ಕವನಕೆ ನಮನಗಳು ಮೇಡಮ್.
ತಪ್ಪಿದ್ದರೆ ತಿದ್ದಿ
ಧನ್ಯವಾದಗಳು ಮೇಡಮ್
ಕೆ ಎನ್ ವರಲಕ್ಷ್ಮಿ
[3/14, 3:22 PM] Wr Mallesh G Raj: ಪ್ರೇಮ್ ಮೇಡಂ ನಿಮ್ಮಲ್ಲಿ ಇನ್ನೂ ಮಳೆಯಾಗಿಲ್ಲವೇ? ನೀವು ಕವನ ಬರೆದ ಮೇಲೂ ಆಗಿಲ್ಲ ಅಂದರೆ, ಆಗಿರಲೇಬೇಕು.ಪ್ರಾರ್ಥನೆಯ ಮೊರೆ ವರುಣನಿಗಾಗಲೇ ಮುಟ್ಟಿರಬಹುದು 🙏
[3/16, 2:09 PM] +91 84313 19753: ಪ್ರೇಮ ಮೇಡಂ
ನಿಮ್ಮ ಕವನ ತುಂಬಾ ಚನ್ನಾಗಿ ಮೂಡಿ ಬಂದಿದೆ
ಉತ್ತಮ ಸಂದೇಶ ಹೊತ್ತು ತಂದಿದೆ
ಕವನದೊಳಗಿನ
ಕೊನೆಯ ಪ್ಯಾರಾ ತುಂಬಾ ಇಷ್ಟವಾಯ್ತು.
ಧನ್ಯವಾದಗಳು
[3/17, 1:30 PM] Wr Manjula B K: ಪ್ರೇಮ್ ಅವರ ಹಂಚಿ ತಿನ್ನೋಣ
ಮನುಷ್ಯನ ಬದುಕು ಮೂರು ದಿನದ ಸಂತೆ. ಅದರಲ್ಲಿ ಹಂಚಿ ತಿನ್ನುವುದುರಲ್ಲಿ ಇರುವುದು ಸುಖ ಎನ್ನುವ ಸಂದೇಶ ಉತ್ತಮ.
ಪಾಲಿಗೆ ಬಂದಿರುವುದು ಪಂಚಾಮೃತ ಎನ್ನುವ ಹಾಗೆ ನಮಗೆ ಸಿಕ್ಕ ಅನ್ನದ ಪಾಲಿನಲ್ಲಿ ನಾವು ಸುಖ ಕಾಣಬೇಕು.
ಮಂಜುಳ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ