ಭಾನುವಾರ, ಮೇ 29, 2022

ಮಳೆಬಿಲ್ಲು

ಮಳೆಬಿಲ್ಲು
@ಪ್ರೇಮ್@
ಸಹಶಿಕ್ಷಕಿ, 
ಸ.ಪ.ಪೂ.ಕಾಲೇಜು ಮುಲ್ಕಿ
ರಾಗ - ಕೋಡಗನ ಕೋಳಿ

ಮಳೆಬಿಲ್ಲು ಶಾಲೆಗೆ ಬಂದಿತ್ತಾ..
 ಈ ವರ್ಷದಿಂದ..
 ಮಳೆಬಿಲ್ಲು ಶಾಲೆಗೆ ಬಂದಿತ್ತಾ..//

ಪುಸ್ತಕ ಬದಿಗೆ ಇಟ್ಟು
ಬಳಪಾನ ಮರೆತೇ ಬಿಟ್ಟು//
ಆಟದಿ ಕುಣಿತದಿ ಸಂತಸ ಪಡುವ
 ಕ್ಷಣವ ತಂದಿತ್ತಾ
ಮಳೆಬಿಲ್ಲು ಶಾಲೆಗೆ ಬಂದಿತ್ತಾ ಇಲ್ಲಿ...//

ಹಳೆ ಹಳೆಯ ಗುಂಪಿನ ಆಟ
ಆಟಿಕೆಗಳ ತಯಾರಿ ಕೂಟ//
ಶಾಲೆಯ ಒಳಗೂ ಸಮ್ಮರ್ ಕ್ಯಾಂಪಿನ
ನೆನಪನು ತಂದಿತ್ತಾ..ಇಲ್ಲಿ ..
ಮಳೆಬಿಲ್ಲು ಶಾಲೆಗೆ ಬಂದಿತ್ತಾ.....//

ನಾಟಕದ ಹಬ್ಬವೇ ಚಂದ
ಕಥೆಗಳ ಕೇಳುವುದಂದ//
ಚಿತ್ರ ಚಿತ್ತಾರದ ಅಂದದಲ್ಲಿ
ಶಾಲೆಯು ಮಿಂಚಿತ್ತಾ..ಇಂದು..
ಮಳೆಬಿಲ್ಲು ಶಾಲೆಗೆ ಬಂದಿತ್ತಾ//

ಕವಿತೆಯ ಕಟ್ಟಿದೆವಣ್ಣ
ಹಾಡನ್ನು ಹಾಡಿದೆವಣ್ಣ//
ಹಸಿರಿನೆಡೆಗೆ ಭಾರೀ ಖುಷಿಯಲಿ
ಗುಂಪು ಹೊರಟಿತ್ತಾ..ಇಲ್ಲಿ .
ಮಳೆಬಿಲ್ಲು ಶಾಲೆಗೆ ಬಂದಿತ್ತಾ....//

ಚಿತ್ರಗಳ ಜಗತ್ತೇ ಮೋಡಿ
ಗಣಿತದ ಗಮ್ಮತ್ತು ಕೂಡಿ//
ಇತಿಹಾಸವನು ನೆನಪಿಗೆ ತರುವ
ಕಾರ್ಯ ನಡೆದಿತ್ತಾ ಇಲ್ಲಿ...
ಮಳೆಬಿಲ್ಲು ಶಾಲೆಗೆ ಬಂದಿತ್ತಾ....//

ಬೆಂಕಿ ಇಲ್ಲದ ಅಡುಗೆ
ಸಾಂಬಾರ್  ತಿನಿಸುಗಳ ಬಳಕೆ//
ಮಕ್ಕಳ ಗೊಂಚಲು ಒಟ್ಟು ಸೇರಿ
ಸಂಭ್ರಮ ಪಟ್ಟಿತ್ತಾ...ಇಲ್ಲಿ..
ಮಳೆಬಿಲ್ಲು ಶಾಲೆಗೆ ಬಂದಿತ್ತಾ..//

ಕಸದಿಂದ ರಸವನು ಮಾಡಿ
ಶಾಲೆಯನು ಸಿಂಗಾರ ಮಾಡಿ//
ಶಾಲೆಯ ವೇಳೆ ರಜದ ದಿನದ
ಆನಂದ ತಂದಿತ್ತಾ.....ಇಲ್ಲಿ .
ಮಳೆಬಿಲ್ಲು ಶಾಲೆಗೆ ಬಂದಿತ್ತಾ..//

ಸರಕಾರಿ ಶಾಲೆಯು ಬೆಳೆಯೇ
ಮಕ್ಕಳು ಅಂದದಿ ಕಲಿಯೇ//
ಕಲಿಕಾ ಚೇತರಿಕೆ ಎಂಬ ವಿಧಾನ
ಹೊಸದಾಗಿ ಬಂದಿತ್ತಾ....ಇಲ್ಲಿ..
ಮಳೆಬಿಲ್ಲು ಶಾಲೆಗೆ ಬಂದಿತ್ತಾ..//
@ಪ್ರೇಮ್@
28.05.2022



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ