ಬುಧವಾರ, ಅಕ್ಟೋಬರ್ 12, 2022

ಜೀವಾಮೃತ

ಜೀವಾಮೃತ

ನಿನ್ನನೆಲ್ಲಿ  ಅದೆಲ್ಲಿ ಬದುಕ ಬಿಟ್ಟಿಹರು
ಜೀವಾಮೃತವೇ ಈ ಕೆಟ್ಟ ಜನರು?
ತಮ್ಮಾರೋಗ್ಯ ಕೆಟ್ಟರೂ ಬಿಡಲಿಲ್ಲ
ಜಲ ಮಾಲಿನ್ಯವ ನಿಲ್ಲಿಸಲೇ ಇಲ್ಲ!

ಕಾರ್ಖಾನೆ ಕಸಗಳ ಸುರಿಯುವುದು
ಮನೆಯ ಚರಂಡಿಗಳ ಜೋಡಿಸುವುದು
ನದಿಯ ಕೈಗಳ ಬತ್ತಿಸುವುದು
ಜೆಸಿಬಿಯಲಿ ಗುಂಡಿಯನು ಅಗೆಯುವುದು

ಉಸಿರು ಕಟ್ಟಿಸಿ ಬಿಟ್ಟರು ತಿಳಿನೀರೆ
ಕೊಳಕು ಚೆಲ್ಲಿ ಮಲಿನಗೊಳಿಸಿದರು ಸಿಹಿನೀರೆ
ಮಿತವಾಗಿ ಬಳಸೆಂದರೆ ಕಿವಿ ಮುಚ್ಚಿಕೊಂಡರು
ಜನ ಸಂಖ್ಯೆ ಹೆಚ್ಚಿಸಿ ಬೋರು ಕೊರೆದರು

ಶುದ್ಧಗೊಳಿಸುವವರು ಇನ್ಯಾರು ಜಗದಲಿ
ನೆಟ್ಟರೆ ತಾನೇ ಹಸಿರನು ಪರಿಸರದಲಿ
ಹಸಿರ ಹಾಸಿಗೆ ಹಾಡಿದರೆ ಹೆಸರು
ಬಸಿರ ಕೂಸಿಗೆ ಬೇಕಲ್ಲ ಉಸಿರು?
@ಹನಿಬಿಂದು@
13.10.2022

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ