ಶನಿವಾರ, ಏಪ್ರಿಲ್ 15, 2023

ಮೂಗು ದಾರ

ಮೂಗುದಾರ


ಒಂದು ಕಾಲದಲ್ಲಿ ಕೋಣನ ಮೂಗುದಾರ ನನ್ನ ಕೈಲಿತ್ತು
ಇಂದಿನ ಕಾಲದಲ್ಲಿ ನನ್ನ ಮೂಗುದಾರ ಮೊಬೈಲಿನ ಕೈಲಿದೆ
ಅಪ್ಪ ಅಮ್ಮ ಅಕ್ಕ ಅತ್ತೆ ಅಜ್ಜಿ ಸಂಬಂಧಗಳು ದೂರಾಗಿವೆ
ಆಪ್ತ ನೆಂಟ ಕಸಿನ್ ಗೆಳೆಯ ಪ್ರೇಮಿ ಹತ್ತಿರವಾಗಿ ಮಾತುಕತೆ ಆಗಿದೆ

ದೇಶ ರಾಜ್ಯ ಜಿಲ್ಲೆ ರಾಷ್ಟ್ರ ಪರದೇಶಿಗರು ಹತ್ತಿರದವರು
ನೆರೆಮನೆಯ ನೆರೆ ಬೀದಿಯ ಜನರೆಲ್ಲಾ ಅಪರಿಚಿತರು
ಅಮೆರಿಕ ಬ್ರಿಟನ್ ರಷ್ಯಾ ಜಪಾನ್ ಸುದ್ದಿಯೆಲ್ಲ ನನಗೆ ಗೊತ್ತು
ಪಕ್ಕದ ಮನೆಯಲ್ಲಿ ನಿನ್ನೆ ಸಾವಾಗಿತ್ತಂತೆ ಇವತ್ತು ಲೋಕಲ್ ವಾರ್ತೆ ಓದಿದಾಗಲೆ ಸುಸ್ತು!

ಅಜ್ಜಿ ಅಜ್ಜನ ರಜೆಯಲ್ಲಿ ನೋಡಲು ಬಂದರು ಮೊಮ್ಮಕ್ಕಳು
ತಮ್ಮ ಸೆಲ್ಫೀ ತೋಟ ಗದ್ದೆಯಲ್ಲಿ ಮೊಬೈಲ್ ನೋಡಿಯೇ ಹೊರಟವು ಹೈಕಳು
ಮಾತಿಲ್ಲ ಕತೆಯಿಲ್ಲ ಯಾರೂ ಬೇಡ ಏನೂ ಬೇಡ
ಊಟ ತಿಂಡಿ ಕುಡಿಯಲು ತಿನ್ನಲು ಆರ್ಡರ್ ಕೊಟ್ಟರೆ ಬರುವುದಲ್ಲ

ಕುಳಿತಲ್ಲೇ ಕೆಲಸ, ಕುಳಿತಲ್ಲೇ ಹಣದ ಗಳಿಕೆ
ಹೊರ ಹೋಗಲು ಬೇಡ ಕೂದಲು ಕತ್ತರಿಸಲಿಕ್ಕೂ  ಆ್ಯಪ್ ನಲಿ ಹೇಳಿ
ದಣಿದಿರಲಿ ಮುನಿಸಿರಲಿ ಮನಸಿರಲಿ ಇಲ್ಲದಿರಲಿ
ಸಮಯ ನುಂಗುವ ನಮ್ಮನಾಡಿಸುವ ಹೊಸ ಸಾಧನ ವಯೋವೃದ್ಧರಾದಿಯಾಗಿ !
@ಹನಿಬಿಂದು@
10.04.2023

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ