ವರ
ವರ ಕೇಳಿದಳು ಆಕೆ
ದೀರ್ಘ ತಪಸ್ಸು ಮಾಡಿ
ಮುಂದಿನ ಜನ್ಮದಲಿ
ಬಂಜೆಯಾಗದಿರಲೆಂದು..
"ತಥಾಸ್ತು" ಎಂದ ದೇವ
ಕಣ್ಮುಚ್ಚಿ ಕುಳಿತೇ !
ಮತ್ತೆ ತಿಳಿಯಿತು ಆಕೆಯ
ಪೂರ್ವ ಜನ್ಮದ ಪರಿ !!
"ವರವ ಕೊಟ್ಟಾಗಿದೆ
ಮಾತು ಉಳಿಸಬೇಕಿದೆ
ಮಾಡಲಿ ಇನ್ನೇನು?"
ಯೋಚಿಸಿದ ದೇವರು.
ಹುಟ್ಟಿಸಿದ ಮರವಾಗಿ!
ಹೂವಿಲ್ಲದ ಬೋಳು ಸಸಿಯಂತೆ!!
ಇದ್ದೂ ಇಲ್ಲದ ವೃಕ್ಷದಂತೆ!!
ಆಶೀರ್ವಾದಕ್ಕೆ ತಕ್ಕುದಾಗಿ!
ಬಂಜೆಯಲ್ಲದ ಬಂಜೆಯಾಗಿ!!
ಒಂದೇ ಕಾಯಾಗಿ ಹಣ್ಣಾಗಿ
ಬದುಕಿನಲಿ ಮುಕ್ತಿಗಾಗಿ!
ಮಾತು ಪರಿ ಪಾಲನೆಯಾಗಿ
ಕೊಟ್ಟ ವಾಕ್ಯದ ಸಲುವಾಗಿ!!
@ಹನಿಬಿಂದು@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ