ಗುರುವಾರ, ಜುಲೈ 18, 2024

ಅಪ್ಪ

ಅಪ್ಪ

ಅದ್ಯಾವ ಉಡುಗೊರೆ ನಾ ಕೊಡಬಲ್ಲೆ ನಿನಗೆ
ನೀನೇ ನನ್ನುಸಿರು ಆಗಿರುವಾಗ
ಅದು ಯಾವ ರೀತಿಯ ಪೂಜೆ ಮಾಡಬಲ್ಲೆ
ನೀನೇ ಸರ್ವ ಕೊಡುಗೈ ಆದಾಗ


ಅದು ಯಾವ ಪದಗಳಿಂದ ತಾನೇ ಹಾಡಬಲ್ಲೆ 
ಎಲ್ಲ ಅಕ್ಷರ ಪದ ಪುಂಜಗಳೂ ನಿನ್ನದಾಗಿರುವಾಗ
ಅದು ಯಾವ ರೀತಿ ಭಜಿಸಿ ಸ್ತುತಿಸಬಲ್ಲೆ 
ಎಲ್ಲ ಭಜನೆ ಹಾಡು ಸ್ತುತಿಗಳೂ ನಿನ್ನದೇ ಆದಾಗ

ಅದೆಲ್ಲಿಯ ಮಂತ್ರ ತಂತ್ರ ಪೂಜೆಗಳು
ಹೃದಯದಲ್ಲಿ ನಿನ್ನ ಲಿಂಗ ಪ್ರತಿಷ್ಠಿತ ಆಗಿರುವಾಗ
ಅದೆಲ್ಲಿಯ  ವೃತ ಉಪವಾಸ ಪೂಜೆ
ನಾನು ನಿನ್ನಂಶ ಆಗಿರುವಾಗ

ಅದ್ಯಾವ ನೀತಿ ನಿಯಮ ಚೌಕಟ್ಟು
ನೀನೇ ಕೈ ಹಿಡಿದು ನಡೆಸುವಾಗ
ಅದು ಯಾವ ಪರಿಯ ಭಕ್ತಿ ಭಾವ
ಕನಸು ಮನಸಲ್ಲೂ ನೀನಿರುವಾಗ
@ಹನಿಬಿಂದು@
16.07.2024

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ