ಅಪರ್ಣಾ ಗೆ ಅರ್ಪಣೆ
ಬಂಧುಗಳು ಬಳಗದವರು
ಸ್ನೇಹಿತರು ಊರವರು
ಎಲ್ಲರೂ ನೆನೆಯುತಿಹರು
ಈಗ, ಎಲ್ಲಾ ಮುಗಿದ ಬಳಿಕ
ನೆನಪುಗಳ ಹಾಡುವರು
ಬರೆಯುವರು ಹೇಳುವರು
ಅಸೌಖ್ಯದ ಕಾರಣವ
ಇದೀಗ, ಎಲ್ಲಾ ಮುಗಿದ ಬಳಿಕ
ರೇಡಿಯೋ ಧಾರಾವಾಹಿ
ಚಂದನದ ಕಾರ್ಯಕ್ರಮ
ನಿರೂಪಣೆ ನಟನೆ
ಅಂದದ ಕನ್ನಡಾಲಾಪನೆ
ಇದೆಲ್ಲವೂ ನಿಂತಿತು
ಕರ್ನಾಟಕ ಬರಿದಾಯಿತು
ತುಂಬಲಾರದ ನಷ್ಟವಾಯ್ತು
ಹುಟ್ಟಿ ಬರಲಿ ಇನ್ನೂ
ನಿನ್ನಂಥ ಹೆಣ್ಣು ಮಗಳು
ಕನ್ನಡವ ಉಳಿಸಲು
ಕನ್ನಡಮ್ಮ ಹರಸಲು
ಬೆಳೆದು ಭಾಷೆ ಬೆಳೆಸಲು
ಕನ್ನಡ ನುಡಿ ನುಡಿಗಳಲಿ
ಇಲ್ಲಿ ನಿನ್ನ ಹೆಸರಿಹುದು
ಹೋಗಲಿಲ್ಲ ಮೆಟ್ರೋ ಧ್ವನಿ
ಎಂದೆಂದಿಗೂ ಶಾಶ್ವತ ಖನಿ
ಸತ್ಯಕ್ಕೆ ಎಂದೂ ಸಾವಿಲ್ಲ
ಎಂದು ತೋರಿಸಿದ ಮಣಿ
@ಹನಿಬಿಂದು@
12.07.2024
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ