ಗಝಲ್
ಮೌನ ಮಾತಾಡಿತು ಮಾತಿಗೆ ಉತ್ತರ ಇರಲಿಲ್ಲ
ಕಣ್ಣು ಗುಯ್‌ಗುಟ್ಟಿತು ಶಬ್ದಕ್ಕೆ ದನಿ ಇರಲಿಲ್ಲ
ಹೂವು ಹಾವಾಯಿತು ಬೇಲಿ ಹೊಲ ಮೇಯಿತು
ಮನದಲಿ ಕಾಮನೆಗಳ ನಿಶಬ್ದಕ್ಕೆ ಎಣೆ ಇರಲಿಲ್ಲ
ಮಾತು ಮೌನಗಳ ನಡುವೆ ಜೇಡ ಗೂಡು ಕಟ್ಟುತ್ತಿತ್ತು
ನೊಣ ಬಿದ್ದು ಅಂಟಿಕೊoಡರೂ ತಿನ್ನಲು ಜೇಡವೇ ಇರಲಿಲ್ಲ!
ಮೋಹ ಮದ ಮಾತ್ಸರ್ಯಗಳ ಬದುಕಿದು
ಇತರರ ಕಂಡು ಹೊಟ್ಟೆ ಉರಿಯದೆ ಇರಲಿಲ್ಲ
ತೋಟ ಕೆರೆ ಬಾವಿ ಕುಂಟೆ ಎಲ್ಲೆಲ್ಲೂ ನೀರಿದೆ
ಬಿಸಿಯಾಗಿ ಹರಿವ ಪ್ರೇಮದ ಕಣ್ಣೀರಿಗೆ ಬೆಲೆ ಇರಲಿಲ್ಲ..
@ಹನಿಬಿಂದು@
27.09.2024
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ