ಮಂಗಳವಾರ, ಸೆಪ್ಟೆಂಬರ್ 17, 2024

ಗಝಲ್

ಗಝಲ್ 

ಪರರ ಮಕ್ಕಳನ್ನು ತಮ್ಮ ಮಕ್ಕಳೆಂಬ ಹಾಗೆ ಬೆಳೆಸುವ ನಾವು ಶಿಕ್ಷಕರು
ತಿದ್ದಿ ತೀಡಿ ಓದು ಬರಹ ಕಲಿಸಿ ಬೆಳೆಸುವ ನಾವು ಶಿಕ್ಷಕರು 

ತಾನು ತಿಂದೆನೋ ಬಿಟ್ಟೆನೋ ತನಗೇ ತಿಳಿಯದ ಮನದ ತೊದಲಾಟ 
ಬಿಸಿಯೂಟ ಮೊಟ್ಟೆ ಚಿಕ್ಕಿ ಹಾಲು ಹಣ್ಣು ರಾಗಿ ಮಾಲ್ಟ್ ತರಕಾರಿಯೂ ತರುವ ನಾವು ಶಿಕ್ಷಕರು 

ಊರು, ಬಸ್ಸು, ಕಟ್ಟೆ ಸಂಭಾಷಣೆಯ ಜನರ ಬಾಯಿಗೆ ಸುಲಭದಿ ಸಿಗುವವರು
ಸಮಾಜದಲಿ ಯಾರು ತಪ್ಪು ಮಾಡಿದರೂ ತಪ್ಪು ಮಾಡಲು ಅವಕಾಶ ಇಲ್ಲದೆ ಇರುವ ನಾವು ಶಿಕ್ಷಕರು 

ಮನದಲೇನಿದೆ,  ತಲೆಯಲೆಷ್ಟು ಕಾರ್ಯದ ಒತ್ತಡವಿದೆ ಯಾರೂ ಕೇಳರು!
ಒಂದಾದರೂ ತಪ್ಪೆಸಗಿದರೆ ರಸ್ತೆ ಮಧ್ಯೆ ಕತ್ತಿ ಹಿಡಿದು ನಿಲ್ಲುವವರ ಭಯದಿಂದ ಬದುಕುತ್ತಿರುವ ನಾವು ಶಿಕ್ಷಕರು 

ಯಾರು ಬಂದರೂ ಹೋದರೂ ಸಮಾಧಾನಿಸಿ ಕಳುಹಿಸುವವರು
ಬಂದ ಹೋದವರ, ಪೋಷಕರ, ಮಕ್ಕಳ ಬಾಯಿಗೆ ಆಹಾರವಾಗುವ ನಾವು ಶಿಕ್ಷಕರು 


ಮಣ್ಣಿನ ಮುದ್ದೆಗಳ ಸರ್ವಜ್ಞರಾಗಿ ಬೆಳೆಸುವ ಹೊಣೆಯ ಹೊತ್ತವರು
ಮಕ್ಕಳ ರಕ್ಷಣೆಯ ಪೋಷಕರ ತೆರದಿ
ಎಳೆ ಎಳೆಯಾಗಿ ಬಿಡಿಸಿ ನಡೆಸಿರುವ ನಾವು ಶಿಕ್ಷಕರು...

ಪ್ರೇಮದ ಕಾಣಿಕೆಯನು ಸರ್ವರಿಗೆ ಉಣ ಬಡಿಸುವವರು
ಊಟಕ್ಕಿಲ್ಲದ ಉಪ್ಪಿನ ಕಾಯಿಯ ಹಾಗೆ ಬದುಕಿನ ದೋಣಿಯಲಿ ಇದ್ದೂ ಇಲ್ಲದವ,  ನಾವು ಶಿಕ್ಷಕರು!
@ಹನಿಬಿಂದು@
17.09.2024

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ