ಮಂಗಳವಾರ, ಅಕ್ಟೋಬರ್ 14, 2025

ಪಾಠ

ಗಣತಿಯಿಂದ ಪಾಠ ಕಲಿತದ್ದು..ಟ್ರೈನಿಂಗ್ ಸಿಗದ ಕಾರಣ ಗಣತಿ ಮುಗಿದ ಬಳಿಕ ಇದೆಲ್ಲಾ ಗೊತ್ತಾದದ್ದು...
1. ಮುಚ್ಚಿದ ಬಾಗಿಲುಗಳ ಮನೆ ಇರಬಹುದು. ಹಾಗಾಗಿ ಸೂಪರ್ವೈಸರನ್ನು ಒಟ್ಟಿಗೆ ಕರೆದುಕೊಂಡು ಹೋಗಿ ಅವರ ಮೊಬೈಲ್ ಮೂಲಕ ಅದನ್ನು ಡಿಲೀಟ್ ಮಾಡಿಸಬೇಕು.
2. ಬಾಗಿಲು ಮುಚ್ಚಿದ ಮನೆಗಳ photo gprs map ಸಹಿತ ತೆಗೆದಿಡಬೇಕು.
3. ಆಧಾರ್ ಕಾರ್ಡ್ ಬಳಸಿ ಎಷ್ಟು ಮನೆ ಮಾಹಿತಿ, ರೇಷನ್ ಕಾರ್ಡ್ ಬಳಸಿ ಮಾಹಿತಿ ನೀಡಿದ ಮನೆಗಳು ಎಷ್ಟು ಎಂಬ ಲೆಕ್ಕ ಬರೆದಿಡಬೇಕು.
4. DM ನಂಬರ್ ಅನ್ನು ಪ್ರತಿ ಮನೆಯ UHID no ಬರೆದ ಕೆಳಗೆ ಬರೆದಿಡಬೇಕು.
5. ಹೊಸ UHID ಕ್ರಿಯೇಟ್ ಮಾಡಿದ ಮನೆಗಳ RR no note ಮಾಡಿ ಇಟ್ಟುಕೊಳ್ಳಬೇಕು.
6. ಎಲ್ಲಾ ಮನೆಯ ಜನರ UHID, ADAAR, RATION CARD, NAME, PHONE NO, RR no ಇದೆಲ್ಲ ನಮ್ಮ ಬಳಿ ಇದ್ದರೆ ಒಳ್ಳೆಯದು.
7. ನಿರಾಕರಣೆ, closed, ಬೇರೆ UHID create ಮಾಡಿದ ಮನೆಗಳ ಪಟ್ಟಿ ಬೇರೆಯೇ ಇದ್ದು ಅವುಗಳ RRNo ಯಜಮಾನನ ಹೆಸರಿನ ಸಮೇತ ತಪ್ಪದೆ note ಮಾಡಿ ಇಟ್ಟಿರಬೇಕು.
8. ಮನೆಯವರ, ಮನೆಯ ಮಾಹಿತಿ ಸಿಗಬೇಕಾದರೆ ಲೈನ್ಮನ್ ಅಥವಾ ಮೆಸ್ಕಾಂ ಸಂಪರ್ಕಿಸಬಹುದು. ಆದರೆ ಅವರ RR no ಕಡ್ಡಾಯವಾಗಿ ತಿಳಿದಿರಬೇಕು.
9. ಎರಡೆರಡು ಬಾರಿ ಒಂದು ಮನೆಯ ಗಣತಿ ಮಾಡಲು ಆಗದು. ಹೊಸ UHID ಕ್ರಿಯೇಟ್ ಮಾಡಿದರೂ ಕೂಡಾ.
10. ನಮ್ಮ ಊರು ಬೇರೆ ಜಿಲ್ಲೆಯಲ್ಲಿ ಇದ್ದರೂ ಕೂಡಾ ನಮ್ಮ ಮನೆಯ ಗಣತಿಯನ್ನು ನಾವೇ ಮಾಡಿಕೊಳ್ಳಬಹುದು.
11. ಗುರಿ ಸಾಧಿಸುವುದು ಮುಖ್ಯ. ಯಾರ ಮನೆಯನ್ನು ಬೇಕಾದರೂ ಗಣತಿ ಮಾಡಬಹುದು. ಬೇಕಾ ಬಿಟ್ಟಿಯಾಗಿ ರಸ್ತೆ ಬದಿಯಲ್ಲಿ ಕಾಣುವ ಎಲ್ಲಾ ಮನೆಗಳನ್ನು ಕೂಡಾ.
12. ಆದರೆ ನಮ್ಮ ಪಟ್ಟಿಯಲ್ಲಿ ಇರುವ ಮನೆಗಳನ್ನು ಇತರರು ಮಾಡದೆ ಹೋದರೆ ನೀವು ಬೇರೆಯವರ 200 ಮನೆ ಮುಗಿಸಿದರೂ ಸಹ ನಿಮ್ಮ ಮನೆಗಳನ್ನು ನೀವೇ ಗಣತಿ ಮಾಡಬೇಕು.
13. ಗಣತಿಯ ಜೊತೆ ಜೊತೆಗೆ ಸೂಪರ್ವೈಸರ್ ಜನ ಇಲ್ಲದ, ಅಂಗಡಿ ಮೊದಲಾದ ಮನೆಗಳನ್ನು delete ಮಾಡುತ್ತಾ ಹೋಗಬೇಕು.
14. ಆಧಾರ್ ಕಾರ್ಡ್ ವೆರಿಫಿಕೇಶನ್ ಗೆ ಮೊದಲು ಅದಕ್ಕೆ ಕೊಟ್ಟ ಮೊಬೈಲ್ phone ಜೊತೆಗೆ ಇರಬೇಕಾದ್ದು ಕಡ್ಡಾಯ.
15. Ration card ಡಿಲೀಟ್ ಆಗಿದ್ದರೆ, ಆಧಾರ್ ಕಾರ್ಡ್ ಗೆ ಕೊಟ್ಟ ಮೊಬೈಲ್ ಫೋನ್ ನಂಬರ್ ಇಲ್ಲದೆ ಹೋದರೆ ಗಣತಿ ಸಾಧ್ಯ ಇಲ್ಲ.
16. ವರ್ಷಕ್ಕೆ ಒಮ್ಮೆ ಅಥವಾ ಎರಡು ಬಾರಿ ಪರವೂರಿನಿಂದ ಬಂದು ಇರುವವರು ರಜೆಯಲ್ಲಿ ಬಂದಿದ್ದರೆ ಪುಣ್ಯ.
17. ಗಣತಿ ನಿರಾಕರಿಸಿದರೆ ನಮ್ಮ ಟಾರ್ಗೆಟ್ಗೆ ಕೊಕ್. ಲೆಕ್ಕಕ್ಕೆ ಜಾಸ್ತಿ ಕೆಲಸ.
18. ಎರಡು ಮೂರು ಜನ ಒಟ್ಟಿಗೆ ಹೋಗಿ ಎರಡು ಮೂರು ಮೊಬೈಲ್ ಫೋನುಗಳಲ್ಲಿ ಬೇಕಾದರೂ(ಗಣತಿಗೆ ಹೆಸರು ಇಲ್ಲದ ವಿದ್ಯಾರ್ಥಿಗಳೂ) ಕೂಡಾ ಅವರ ಗೆಳೆಯ, ಗೆಳತಿಯರ, ಪೋಷಕರ ಹೆಸರಿನಲ್ಲಿ ಒಂದೇ ಸಲಕ್ಕೆ ಬೇಗ ಬೇಗ ಗಣತಿ ಮಾಡಿ ಮುಗಿಸಿ ಟಾರ್ಗೆಟ್ ರೀಚ್ ಆಗಬಹುದು. ಇದಕ್ಕೆ ಯಾವುದೇ ರೆಸ್ಟ್ರಿಕ್ಷನ್s ಇಲ್ಲ.
19. ಒಟ್ಟಾರೆ ನಮ್ಮ ಯಾವುದೇ ಮನೆ pending ಲಿಸ್ಟಿನಲ್ಲಿ ಇರಬಾರದು.
20. ಯಾವುದೇ ಮನೆಗೆ ಹೊಸ UHID ಬಳಸಿದ್ದರೆ ಅದರ RR no ಕೊಟ್ಟು ಅದನ್ನು ವ್ಯಾಲಿಡೇಟ್ ಮಾಡುವ ಎಕ್ಸ್ಟ್ರಾ ಕೆಲಸ ನಮ್ಮ ಮೇಲಿದೆ.
21. ಬೀಗ ಹಾಕಿರುವ ಮತ್ತು ಖಾಲಿ ಇರುವ ಎಲ್ಲಾ ಮನೆಗಳ ಲೊಕೇಶನ್ ಮತ್ತು ಪೋಟೋ ಕಡ್ಡಾಯವಾಗಿ ಅವುಗಳ ಡಿಲಿಷನ್ ಗೆ ಬೇಕು.
22. ಮನೆ ಗಣತಿ ಆಗದೆ ಹೋದರೆ ಸೂಪರ್ವೈಸರ್ ಗೆ ಸೂಕ್ತ ಕಾರಣ ನೀಡಬೇಕು.
23. ಬೇರೆ ಜಿಲ್ಲೆಗಳ ಗಣತಿಯನ್ನು ಕೂಡಾ ಮಾಹಿತಿ ಕೊಡುವವರು ಇದ್ದರೆ ಇಲ್ಲಿಂದಲೇ ಮಾಡಿ ಮುಗಿಸಬಹುದು.
24. ಮೊಬೈಲ್ ಗೆ ತೊಂದರೆ ಆದರೆ, ನೆಟ್ ಪ್ಯಾಕ್ ಇಲ್ಲದೆ ಹೋದರೆ ಯಾವುದೇ ಕಾರಣಕ್ಕೂ ಈ ಲೆಕ್ಕಾಚಾರ ಸಾಧ್ಯ ಇಲ್ಲ.
25. ಒಂದು ಮನೆಯಲ್ಲಿ ಒಬ್ಬರೇ ಇದ್ದರೂ ಕೂಡಾ ಕನಿಷ್ಠ ಪಕ್ಷ ಅರ್ಧ ಗಂಟೆ ಸರಿಯಾಗಿ ಮಾಹಿತಿ ನೀಡುವವರಿಗೆ ಬೇಕೇ ಬೇಕು. (ಕೆಲವರಿಗೆ ರೇಷನ್ ಕಾರ್ಡ್/ಆಧಾರ್ ಕಾರ್ಡ್ ವೋಟರ್ ಐಡಿ ಹುಡುಕಿ ತರಲು ಇನ್ನೂ ಅರ್ಧ ಗಂಟೆ ಬೇಕು.)
26. ಎಲ್ಲರೂ ಕೆಲಸಕ್ಕೆ, ಶಾಲೆಗೆ ಹೋದ ಬಳಿಕ ಮನೆಯಲ್ಲಿ ಇರುವುದು ತುಂಬಾ ವಯಸ್ಸಾದ ಹಿರಿಯರು ಮಾತ್ರ. ಅವರಲ್ಲಿ ಈ ಎಲ್ಲಾ ಮಾಹಿತಿ ಪಡೆಯಲು ಗಣತಿದಾರರು ಹರಸಾಹಸ ಮಾಡಬೇಕು. ಹೆಚ್ಚಿನ ಜನರಿಗೆ ಅವರ ಫೋನ್ ನಂಬರ್ ಗೊತ್ತಿಲ್ಲ, ಒಟಿಪಿ ನೋಡಲು ಕೂಡ ಬರುವುದಿಲ್ಲ. ದೇವಸ್ಥಾನ, ಕಾರ್ಯಕ್ರಮಗಳಿಗೆ ಹೊರಟವರಿಗೆ ಮಾಹಿತಿ ಕೊಡಲು ಸಮಯ ಇರುವುದಿಲ್ಲ. ಅವರಿಗೆ ಉತ್ತರ "ನಾಳೆ ಬನ್ನಿ."
27. ನಾನು ಮಾಹಿತಿ ಕೊಡುವುದಿಲ್ಲ, ಇದು ನನಗೆ ಇಷ್ಟ ಇಲ್ಲ ಏನು ಬೇಕಾದರೂ ಮಾಡಿಕೊಳ್ಳಿ " ಎಂದವರಿಗೆ ಉತ್ತರ ಒಂದು ಸಣ್ಣ ನಗು, ಅಷ್ಟೇ.
28. ಇಷ್ಟೆಲ್ಲಾ ಲೆಕ್ಕ ತೆಗೆದುಕೊಂಡು ನಮಗೆ ಏನು ಕೊಡುತ್ತೀಯಮ್ಮಾ ಎಂದವರಿಗೆ ನಾವೇನು ಕೊಡಲು ಸಾಧ್ಯ?
29. ನೀವೇನು ಎಲ್ಲಾ ಲೆಕ್ಕ ಕೇಳಿ ಕೊಟ್ಟು ನಮ್ಮ ರೇಷನ್ ಕಾರ್ಡ್ ಕ್ಯಾನ್ಸಲ್ ಮಾಡಿಸುತ್ತೀರಾ? ನಮ್ಮ ಜಾತಿ ಬದಲಾಯಿಸುತ್ತೀರಾ? ಸರಕಾರದಿಂದ ಒಳ್ಳೆಯ ರಸ್ತೆ ಸ್ಯಾಂಕ್ಷನ್ ಮಾಡಿಸುತ್ತೀರಾ ಎಂದವರಿಗೆ ಕೊಡಲು ನಮ್ಮ ಬಳಿ ಇರುವ ಉತ್ತರ ಮೌನ.
30. ನನ್ನ photo, ಒಟಿಪಿ ನಿಮಗೇಕೆ ಬೇಕು, ನಾವು ಗ್ಯಾಸ್ ಇದ್ದರೂ ಕಟ್ಟಿಗೆಯಲ್ಲೇ ಅಡುಗೆ ಮಾಡೋದು ಹಾಗೆಯೇ ಬರ್ಕೊಳ್ಳಿ, ಅದೇನು ಕೊಡುತ್ತೀರೋ ಮನೆಗೆ ಒಬ್ಬರಿಗೆ ಸರಕಾರಿ ಕೆಲಸ ಕೊಡಿಸಿ ಎಂದವರಿಗೆ ಹೇಳಲು ನಮ್ಮ ಬಳಿ ಸೈಲೆನ್ಸ್ ಬಿಟ್ಟರೆ ಏನಿಲ್ಲ.
ಇದಿಷ್ಟು ಅರ್ಥ ಮಾಡಿಡಿಕೊಟ್ಟ, ಕೆಲವರ ಮನೆಯ ಬಡತನ, ಸಿರಿತನ, ಕಷ್ಟ ಸುಖಗಳನ್ನು ತೋರಿಸಿಕೊಟ್ಟ, ನಾವು ನಾವೇ ಶಿಕ್ಷಕರು ಗಲಾಟೆ ಮಾಡಿಕೊಳ್ಳುವಂತಹ ಪರಿಸ್ಥಿತಿಯನ್ನು ಸೃಷ್ಟಿಸಿ ಕೊಟ್ಟ, ನಾಲ್ಕೈದು ಜನ ಒಂದೇ ಮನೆಗೆ ತಿರುಗಿ ಮನೆಯವರೇ ಸುಸ್ತಾಗುವ ಹಾಗೆ ಮಾಡಿದ, ಟೀಚರ್ಸ್ ಗೆ ಬೇರೆ ಕೆಲಸ ಇಲ್ಲ ಎಂದು ಮನೆಯವರೆಲ್ಲಾ ಆಡಿಕೊಳ್ಳುವ ಹಾಗೆ ಮಾಡಿದ ಗಣತಿಯಿಂದ ಬಡವರು ಉದ್ಧಾರ ಆಗಲಿ. ಎಲ್ಲಾ ಜಾತಿಯ ಜನರಿಗೆ ಅವರ ಬಡತನದ ಆಧಾರದ ಮೇಲೆ ಕೆಲಸ ಸಿಗಲಿ, ದುಡಿಯಲು ಆಗದೆ ಒಬ್ಬರೇ ಇರುವ ಹಿರಿಯ ಜೀವಗಳಿಗೆ ಉಚಿತ ಸೌಲಭ್ಯ ಸಿಗಲಿ ಎಂಬ ಶುಭ ಆಶಯಗಳೊಂದಿಗೆ, ಮುಂದಿನ ಗಣತಿಯನ್ನು ಹೋಲ್ ಸೇಲ್ ವ್ಯಾಪಾರ ಮಾಡದೆ ಸರಿಯಾಗಿ, ಒಂದೇ ತೆರನಾಗಿ ಹಂಚಿ ಕೊಟ್ಟು ಅವರವರ ಏರಿಯಾ ಅವರೇ ಮಾಡಿ ಮಾಹಿತಿ ಕೊಡುವ ಹಾಗೆ ಮಾಡಿ ಎಂದು ಮೇಲಧಿಕಾರಿಗಳ ಗಮನಕ್ಕೆ ತಿಳಿಯಪಡಿಸುತ್ತಾ, ಮಹಿಳೆಯರಿಗೂ, ದೈಹಿಕ ಅಸ್ವಸ್ಥರಿಗೂ ಹಲವಾರು ತೊಂದರೆಗಳು ಇರುತ್ತವೆ. ಮನೆಗಳೂ ಕೂಡಾ ದೂರ ದೂರ ಇರುತ್ತವೆ, ಸರಿಯಾದ ಸಮಯಕ್ಕೆ ಹಳ್ಳಿಗಳಿಗೆ ಬಸ್ಗಳು ಇರುವುದಿಲ್ಲ. ಹಾಗಾಗಿ ಟಾರ್ಗೆಟ್ ಕೊಟ್ಟು ಕೊಲ್ಲಬೇಡಿ ಮತ್ತು ದೈಹಿಕ ಅನಾರೋಗ್ಯ (ನಡುವೆ) ಕಾಣಿಸಿದರೆ ಅದಕ್ಕೆ ವಿಶ್ರಾಂತಿಗೆ ಅವಕಾಶ ಕೊಡಿ ಎಂಬ ದಯನೀಯ ಬೇಡಿಕೆ ಇಡುತ್ತಾ, ಇಷ್ಟೊಂದು ಕಾಡಬೇಡಿ ರಜೆಯ ಸಮಯದಲ್ಲಿ ಶಿಕ್ಷಕರನ್ನು ಎಂದು ಕೇಳಿಕೊಳ್ಳುತ್ತಾ, ಎಲ್ಲರಿಗೂ ಒಳಿತಾಗಲಿ, ಈ ಒಳಿತಿನ ಕಾರ್ಯಕ್ಕೆ ನಾವೂ ಕಾರಣಕರ್ತರಾಗಲಿ ಎಂಬ ಶುಭ ಆಶಾ ಭಾವನೆಗಳೊಂದಿಗೆ,
@ಹನಿಬಿಂದು@
17.10.2025


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ