ಸೋಮವಾರ, ಜೂನ್ 3, 2019

1037. ನಾನೇನ್ಮಾಡ್ಲಿ...

ನಾನೇನ್ಮಾಡ್ಲಪ್ಪೋ....

ನಾನೇನ್ಮಾಡ್ಲಪ್ಪಾ...ನಾನೇನ್ಮಾಡ್ಲಿ
ನನ್ ಹೆಂಡ್ತಿ ನನ್ಗಿಂತ ಭಾರ ಆಗ್ಯಾಳಲ್ಲಪ್ಪಾ! //ಪ//

ಸಂತೆಗ್ಹೋದ್ರೆ ನಡ್ಯೋಕ್ಕಾಗಲ್ಲಾಂತಾಳೆ
ಬೈಕಲ್ಲಿ ಸಾಮಾನು ಜೊತೆ ಹತ್ಸೋದ್ ಕಷ್ಟ!
ನಾನೇನ್ಮಾಡ್ಲಪ್ಪಾ...

ಶಾಪಿಂಗ್  ಹೋದ್ರೆ ನನ್ನನ್ನ ಅವ್ಳ ಜತೆ ನೋಡಿ
ಅವ್ಳ ಗೆಳತೀರು ಹಲ್ಗಿಂಜಿ ಕೇಳ್ತಾರೆ,
ಇವರ್ಯಾರು ನಿಮ್ ಬಾಡಿಗಾರ್ಡಾಂತ!
ನಾನೇನ್ಮಾಡ್ಲಪ್ಪಾ...

ನೆಂಟ್ರ ಮನೆಗೆ ಗಂಟ್ ಕಟ್ಟೋಣಾಂದ್ರೆ
ಬಸ್ಸಲ್ಲವ್ಳ ಪಕ್ಕ ಕೂರೋದೇ ಕಷ್ಟ!
ನಾನೇನ್ಮಾಡ್ಲಪ್ಪಾ...

ಮಕ್ಳ್ ಶಾಲೆಗ್ಹೋಗು ಮೀಟಿಂಗ್ ಇದೆ ಯಂದ್ರೆ
ಮಕ್ಳೇ ಮಮ್ಮಿ ಬರೋದ್ ಬೇಡ್ವೇ ಬೇಡಂತಾರೆ!
ನಾನೇನ್ಮಾಡ್ಲಪ್ಪಾ...

ಮದ್ವೆ ಗಿದ್ವೆಗೋಗೋದಾದ್ರೆ ನನ್ ಪಾಡನ್ನ ಕೇಳೋರ್ಯಾರು!
ಅವ್ಳ್ ಸೈಝ್ ಮುಂದೆ ನಾನೆಲ್ ಕಾಣ್ತೀನಿ..
ಪಕ್ದಲ್ಲಿದ್ರೂ ಯಜ್ಮಾನ್ರೆಲ್ಲಿ..ಬರ್ಲಿಲ್ವಾ ಅಂತ
ಅವ್ಳತ್ರಾನೇ ನನ್ಮುಂದೇನೇ ಕೇಳ್ತಾರಣ್ಣಾ..
ನಾನೇನ್ ಮಾಡ್ಲಪ್ಪಾ....

ವಾಕಿಂಗ್ ಜೊತೇಲಿ ಹೋಗೋಕಾಗೋಲ್ಲ,
ನನ್ ಹೆಂಡ್ತೀಗ್ ದೇಹ ಎತ್ಕೊಂಡ್ ನಡ್ಯೋಕಾಗೋಲ್ಲ!
ಇವ್ಳ್ ಜೊತೆ ಒದ್ದಾಡ್ತ ಜೀವ್ನ ಮಾಡ್ತಾ
ಸುಸ್ತಾಗೋದ್ನಲ್ಲೋ...
ನನ್ ತಲೆ ಕೆಟ್ಹೋಗ್ತಿದ್ಯಲ್ಲೋ..
ನಾನೇನ್ ಮಾಡ್ಲಪ್ಪಾ....
@ಪ್ರೇಮ್@
04.06.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ