ಕಾಣದ ಶಕ್ತಿ
ನೀ ಎನ್ನ ಭೂಮಿಗೆ ತಂದೆ
ಎದೆಯೊಳಗೆ ಉಸಿರನು ತುಂಬಿದೆ..
ಮೆದುಳಲಿ ಭಾವದ ಬೀಜವ ಬಿತ್ತಿ,
ತುಟಿಯಲಿ ಹೊರ ಹಾಕುವ ಶಕ್ತಿಯ ಸುತ್ತಿ..
ಮಣ್ಣಿನ ಮುದ್ದೆಯಂತೆ ಮಾಂಸದ ತುಂಡಾಗಿದ್ದೆ!
ಬೆಳೆಸುತ ಹರಸಲು ಅಮ್ಮನನ್ನೇ ಕೊಟ್ಟೆ!
ಸಹನೆ, ಪ್ರೀತಿಯ ಗುಣವ ಅವಳಿಂದಲೆ ಕಲಿತೆ,
ನೀ ದೂರ ನಿಂತು ನಗುತಲೆ ಇದ್ದೆ,!
ಪ್ರತಿಕ್ಷಣದ ಕಾರ್ಯಕೆ ಎಂದೂ ಕಾರಣನು ನೀನೇ
ಪ್ರತಿ ಜೀವಿಯ ಉದಯದ ನೋವ ತಿಳಿದವನೂ ನೀನೆ..
ಸ್ವರ್ಗವಂತೆ ನರಕವಂತೆ ಅರಿಯದವ ನಾನು,
ಸಕಲರಿಗೆ ಹಿತವನು ಬಯಸೋ ಅಲ್ಪ ಜೀವಿ ನಾನು!
ಮನದ ಮಹಿಮೆಯೇನಿಹುದೋ ನಿನಗೆ ತಾನೇ ಅರಿವು?
ಪ್ರತಿ ಜೀವಿಯು ಶ್ರೇಷ್ಠ, ಸೃಷ್ಟಿ ನಿನ್ನ ಒಲವು!
ವದನ ಬೇರೆ ಹೃದಯವು ಬೇರೆ! ಕಲ್ಪನೆಯ ಲಹರಿ!
ಒಗ್ಗಟ್ಟೆಂಬ ಗುಣವದ ಬೆಳೆಸಬಾರದೇ ಶ್ರೀಹರಿ!
@ಪ್ರೇಮ್@
21.06.2019
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ