ಮಂಗಳವಾರ, ಜೂನ್ 4, 2019

1051. ಸ್ನೇಹ ಸಂಗಮ

ಸ್ನೇಹದ ಸಂಗಮವಿದು...

(ಬಳಗದ ಗೀತೆ)

ಕವಿ ಮನಗಳು ಒಂದಾಗುತ ಕಲೆಯಲು
ಕನ್ನಡಮ್ಮನ ಕೆನ್ನೆ ಸವರುತ
ಜತೆಯಲಿ ಸೇರಿ ಕಲಿಯುತಲಿರಲು,
ಪದಗಳ ಜೊತೆಗೆ ಸಹ ನರ್ತನವಾಡಲು,
ಕನ್ನಡ ಸೇವೆಗೆ ಅವಕಾಶ ಕೊಡುವ
ಸ್ನೇಹ ಸಂಗಮವಿದೂ.... ನಮ್ಮಯ ಸ್ನೇಹ...

ಕವನವ ಗೀಚುತ, ಪರಸ್ಪರ ತಿದ್ದುತ
ಮನದ ವಾಂಛೆಯನು ಪದಗಳು ಸಾರುತ!
ತಿಳಿದುದ ಅರುಹುತ, ಸಮಾಜವ ಹರಸುತ,
ಓದುತ ಬರೆಯುತ ಮನವನು ತಣಿಸುವ
ಸ್ನೇಹ ಸಂಗಮವಿದು... ನಮ್ಮಯ ಸ್ನೇಹ..

ಚಂದಿರನ ನೆರಳಲಿ ಆಡುತ ಬೆಳೆಯುತ,
ಬೆಳೆಸುತ ತಾವೂ ದಿನ ದನ ಕಲಿಯುತ,
ಮೇಲು ಕೀಳೆಂಬ ಜಾತಿ ಮತವೆಂಬ
ಬೇಧವೆ ಇಲ್ಲದೆ ಪರಸ್ಪರ ಸಹನೆ ಸಹಕಾರದಿಂದಿಹ
ಸ್ನೇಹ ಸಂಗಮವಿದು...
ನಮ್ಮಯ ಸ್ನೇಹ...//

ಮರೆತರು ಮರೆಯೆವು ಕವಿ ಸಹಕಾರ!
ಮನಗಳ ಸೇರಲು ಕವಿತೆಯೆ  ದಾರ!
ಭಾವನೆ ಹಂಚುವ ಕವಿ ಸರದಾರ!
ಸತ್ವವ ತುಂಬುತ ಬೆಳೆಸುವ ಸಹಕಾರ..
ಸ್ನೇಹ ಸಂಗಮವಿದು...
ನಮ್ಮಯ ಸ್ನೇಹ...

ಬಿಜಾಪುರ, ಮೈಸೂರು ಮಂಗಳೂರ ಒಗ್ಗೂಡಿಸಿದೆ,
ಶಿವಮೊಗ್ಗ, ಹುಬ್ಬಳ್ಳಿ ತುಮಕೂರು ಮೆರೆದಿದೆ!
ಗಡಿನಾಡು ನಡುನಾಡು ಕಾವ್ಯವ ಸವಿದಿದೆ ,
ಕನ್ನಡಕಾಗಿ ಕರ್ನಾಟಕ ಒಂದಾಗಿದೆ..
ಸ್ನೇಹ ಸಂಗಮವಿದೂ..
ನಮ್ಮಯ ಸ್ನೇಹ....

ಚಿನ್ನುಪ್ರಿಯ, ಶ್ಯಾಮಣ್ಣ, ಶಂಕರ, ಅಭಿ, ಹರಿ, ಶಿಂದೆ
ರತ್ನಕ್ಕ, ವಿಜಯಕ್ಕ, ಜ್ಯೋತಿ ಪ್ರಮೀಳೆಯರೊಡಗೂಡಿ
ಶಿವ, ಸರಸ್ವತಿ ,ಗಿರೀಶ, ಸುರೇಶ, ರವಿ -ಶಶಿಯರ
ಸ್ನೇಹ ಸಂಗಮವಿದು..
ನಮ್ಮಯ ಸ್ನೇಹ...

ಜಯಂತಿ, ದಿವ್ಯ, ಸುಧಾ ಪ್ರಶಾಂತ
ಗೋಪಿ,ಕೊಡ್ಲಾಡಿ, ಲತಾ, ಹರ್ಷಿಯಾ...
ಅನುಪಮ,ಗೀತಾ, ಕಿರಣ,ಮೊಗೇರಿ
ಹರಟುತ ಬರೆಯುತ ಕಲಿಯುವ ಹಲವಾರು ಕವಿಮನಗಳ
ಸ್ನೇಹ ಸಂಗಮವಿದು..
ನಮ್ಮಯ ಪ್ರೇಮದ ಸ್ನೇಹ...
ನಮ್ಮಯ ಮುದ್ದಿನ ಸ್ನೇಹ..
ನಮ್ಮಯ ಪ್ರೀತಿಯ ಸ್ನೇಹ..
@ಪ್ರೇಮ್@
05.06.2019..

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ