ಭಾನುವಾರ, ಜೂನ್ 16, 2019

1060. ಪರಿಪರಿಯ ಪಪ್ಪ

ನಿನ್ನೆ ಬರೆಯಲಾಗಲಿಲ್ಲ ಕವನ ಇಂದು ಬರೆಯುತಲಿರುವೆ... ಅಪ್ಪಂದಿರ ದಿನಕ್ಕಾಗಿ...

ಪರಿಪರಿಯ ಪಪ್ಪ

ಪದಕಗಳು ಸಾಲವು ಪದವಿಗಾಗಿ ನಿಮ್ಮ!
ಪಪ್ಪಾಯ ಹಣ್ಣಂತೆ ಸವಿ ಸಿಹಿಯ ಮನ!
ಪಗಾರದ ಚಿಂತೆಯಿಲ್ಲ, ಮಕ್ಕಳ ಪ್ರೀತಿಗಾಗಿ ಎಲ್ಲ!
ಪರದೆ ಸರಿಸಿ ನೋಡಲು ಅಪ್ಪನ ಜೀವನ ನೋವೇ ಎಲ್ಲ!

ಪಂಚ ಮಂದಿಯ ಜೀವನದ ಧೀರ!
ಪುತ್ರ ಪುತ್ರಿಯರಿಗೀತನೇ ಕುಬೇರ!!
ಪರರಿಗೆ ಪರಪುರುಷ, ಕುಟುಂಬಕೆ ಯುಗಪುರುಷ!
ಪರರ ಕಛೇರಿಯಲೀತ ಸದಾ ಸೇವಕ!!

ಪಟ್ಟದರಸಿಯ ಆಜ್ಞಾ ಪಾಲಕ,
ಪಾದ ತೊಳೆದರೂ ಸಾಕಾಗದು ಸೇವೆಗೆ!
ಪಪ್ಪಾ ಎಂದೆಂದಿಗೂ ಪುತ್ರ ನಿನ್ನ ಸೇವಕ!
ಪರಿಪರಿಯ ಪ್ರಣಾಮ ಪಡೆಯಲು ನೀ ಅರ್ಹ!

ಪರಿಸ್ಥಿತಿ ನಿಭಾಯಿಸುವ ನಾವಿಕ,
ಪ್ರಕೋಪ ತೋರುವ ಪುರುಷ ಪುಂಗವ,
ಪದಗಳಲಿ ವರ್ಣಿಸಲಾಗದ ಕವನ,
ಪಂಚಭೂತಗಳಂತೆ ಆರಾಧಿಸಬೇಕಾದ ದೇವರು..
ಅಪ್ಪನೆಂದರೆ ಆಗಸ, ಅಪ್ಪನ ಪ್ರೀತಿ ಕರಗಲು ಪ್ರಪಾತ!
@ಪ್ರೇಮ್@
17.06.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ