ಆಶೀರ್ವಾದ
ಸೃಷ್ಠಿಸಿ ನಿನ್ನಯ ಆಶೀರ್ವದಿಸಿಹೆ,
ನಿನ್ನನು ಕ್ಷಮಿಸುತ ಮಡಿಲಲಿ ಪೊರೆದು!
ಮನೆಮಗನಾಗಿಯೂ ಮನವಿಲ್ಲದೆ ಬೆಳೆದು
ವಿಷವನು ತಾಯಿಗೆ ಉಣಿಸುತ ಕಳೆದು!
ಹೃದಯವ ಒದ್ದು ಘಾಸಿಯಗೊಳಿಸಿ,
ಉದರಕೆ ಗುದ್ದಿ, ಹಸಿರನು ಕಡಿದು
ಉಸಿರಿಗೆ ಇರುವ ಗಾಳಿಯ ಕೆಡಿಸಿ,
ತಿನ್ನುವ ಅನ್ನಕೆ ವಿಷವನು ಬೆರೆಸಿ!
ಆಶೀರ್ವಾದವ ಬೇಡುತಲಿಹರು
ಮುಂದಿನ ತಲೆಮಾರಿನ ಕಂದಮ್ಮಗಳು!
ಆದರೂ ಜಾಗವು ಇಲ್ಲವು ಅವರಿಗೆ,
ಸರ್ವೆಡೆ ಕಸ-ವಿಷದ ರಾಶಿಯೆ ಬಿದ್ದೊಡೆ!
ಮಕ್ಕಳು ಬೆಳೆದು ದ್ವೇಷವ ಕಟ್ಟಿ,
ದುಡ್ಡನೆ ತನ್ನಯ ಪೋಷಕನೆನಲು,
ಹುಟ್ಟಿಸಿ ಪೊರೆವ ಭೂಮಿಯು ತಾನು
ಸಲಹಲಿ ಹೇಗೆ ನಿನ್ನಯ ನಾನು?
@ಪ್ರೇಮ್@
25.06.2019
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ