ಬದುಕ ಬಿಡಬಾರದೆ?
ಸಹನೆ ಇಹುದು ತಾಯ ಮಡಿಲು
ಮನುಜ ನಿನಗೆ ಅರಿವು ಬಹಳ!
ಬಗೆವೆ ಉದರ -ಹೃದಯ- ಕರುಳ,
ನಿನ್ನ ಆಸೆ ನಿನಗೆ ಮುಳುವು!
ತಿಳಿದು ಬದುಕು, ನಾಳೆ ಬೇಕು!
ಮಗುವ ಬದುಕು ಬೇಡವೇಕೆ?
ವಿಷವ ಹಾಕಿ, ಬೆಳೆಯ ಬೆಳೆಸಿ
ತಿಂದ ಜನರು ಸಾಯಲಿಹರು!
ದೇಹ ವಿಷವು, ಮನವು ಕೂಡ,
ಜೀವಿಗಿಂತ ಕಡೆಯು ನೀನು!
ಸೃಷ್ಠಿ ಮಾಡಿ ನಾನು ಸೋತೆ,
ನನ್ನ ಕೊಲೆಗೆ ಹೊರಟೆ ನೀನು!
ನಾಳೆ ಎಂಬ ಚಿಂತೆಯಿಲ್ಲ,
ಇಂದೆ ಬೇಕು ಇಲ್ಲಿ ಎಲ್ಲ,
ಮನದ ಪರದೆ ಸರಿಸೊ ಮೂಢ,
ಸಣ್ಣ ಜೀವಿ ಬದುಕ ನೋಡ!
ನಾನು ನನಗೆ ನನ್ನ ಧನವು
ಎಂಬ ಬಯಕೆ ಸಾಕು ನಿಲಿಸು,
ಎಲ್ಲಾ ಒಂದೆ, ಬಾಳಿ ಬಯಸಿ,
ಬದುಕೆ ಬಾಳು ನಿತ್ಯ ಸೊಗಸು!
@ಪ್ರೇಮ್@
24.06.2019
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ