ಮೈಮರೆತೆ
ಹಚ್ಚ ಹಸಿರಿನ ಪಚ್ಚೆ ಕಾನನ
ಮೆಚ್ಚಿ ನೋಡುತ ನನ್ನೆ ಮರೆತೆ!
ಹುಚ್ಚಿಯಂತೆ ಓಡಾಡುತ ಕಳೆದೆ
ಬಿಚ್ಚು ಮನಸನು ಹೊರಗೆ ಬಿಡುತ//
ಕಚ್ಚಿ ತಿನ್ನುತ ಹಣ್ಣ ಕುಕ್ಕುತ
ಹಂಚಿ ತಿನ್ನುತ ಬಾಳ ಕಳೆಯುತ
ಚುಚ್ಚಿ ಕಚ್ಚಿ ಖುಷಿಯ ಪಡೆಯುತ
ಬದುಕೊ ಪಕ್ಷಿಯ ಮೆಚ್ಚಿ ನಿಂದೆ!//
ಹಚ್ಚಿ ತನ್ನಯ ಮೈಯ ಬಣ್ಣವ
ಗಿಡ ಮರ ಬಳ್ಳಿಯೊಡಲಿಗೆ
ಬಚ್ಚಿ ಕುಳಿತ ಭೂಮಿ ತಾಯಿಗೆ
ಮೆಚ್ಚಿ ಶರಣೆಂದೆ ಮನದಲಿ//
ಬೊಚ್ಚು ಬಾಯ ಅಜ್ಜಿಯಂತೆ
ಮರವ ಕಡಿದು ಮನುಜ ಕೈವಶ!
ಉಚ್ಚಾಟಿಸಬೇಕು ಮನುಜನನ್ನ
ಕಾಡ ದಾರಿಯಿಂದಾಚೆಗೆ!
ಮರವು ಉಳಿವುದು ಕಾಡಿಗೆ!
@ಪ್ರೇಮ್@
04.06.2019
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ