ಗುರುವಾರ, ಜೂನ್ 27, 2019

1084.ವೈದ್ಯ

ವೈದ್ಯ

ಸಲಹೆ ಕೊಡುವ ಒಂದು ಜೀವ ವೃತ್ತಿಯಲ್ಲಿ ವೈದ್ಯ!
ತನ್ನ ನೋವ ಮರೆತು ಕೂಡ ರಾತ್ರಿ ಹಗಲು ಸಿದ್ಧ!!
ಯಾರ ನೋವು ಏನೇ ಇರಲಿ, ನಗುತ ತಾನು ಬರುವ,
ಯಾವ ರೋಗಕೇನು ಬೇಕು ಯೋಚಿಸಿ ತಾನೇ ತರುವ!!

ಅವನ ನೆನಪೆ ನಮ್ಮ ನೋವ ಮಾಡುವುದು ಮಾಯ,
ಓದಿ ಬರೆದು ಕಷ್ಟದಲ್ಲಿ ಕಲಿತ ಛಾಪು ಕಾರ್ಯ!
ಊಟ ತಿಂಡಿ ಮರೆತು ಕೂಡ ಜನರ ನೋವ ನೋಡಿ
ಗುಳಿಗೆ, ಕ್ರೀಮು, ಟಾನಿಕ್ ಸೂಜಿ ಕೊಡುವ ನಗುವ ಜೋಡಿ!

ಯಾವ ನೋವೆ ಬರಲಿ ನಾವು ದೇವರೆಂದು ನಂಬುವೆವು,
ನಮ್ಮ ನೋವ ಕಳೆಯೆನುತ ಎದುರು ಹೋಗಿ ಮಲಗುವೆವು
ಗಂಟೆ ಗಂಟೆ ಕಾದ ನಮಗವರು ಸಿಗುವಾಗ ಸಂತಸ,
ಹೊಟ್ಟೆಯೊಳಗೂ ಹುಡುಕುವರು ನಾವು ತಿಂದ ಕಸ!

ದೇವರೆಂದು ನೆನೆವ ಜನ ಓಡುವರು ಬಳಿಗೆ,
ಪಕ್ಕದಲ್ಲೆ ಇದ್ದರೂನು ಇಲ್ಲ ನಮಗೆ ಸಲುಗೆ,
ದೇವ ಕೊಟ್ಟ ವಿದ್ಯೆಯದು ಜನರ ನೋವ ನೀಗೆ,
ಅವಕಾಶದಿ ಬಳಸಬೇಕು ಮನದ ಪ್ರೀತಿ ತರಲು ಮುಖದಿ  ನಗೆ!
@ಪ್ರೇಮ್@
27.06.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ