*ಹೀಗಿದೆ ಈಗಿನ ಪ್ರಪಂಚ!*
*ತುಂಬಾ ಜಂಭ ಬೆಳೆದಿದೆಯೆನಗೆ..*
*ಈಗೀಗ ಜಂಗಮವಾಣಿ ಕೈಗೆ ಬಂದ ಮೇಲೆ!*
*ಯಾರೂ ಬೇಡ, ಏನೂ ಬೇಡ!*
*ಅದರೊಳಗಿರುವವರ ಬಿಟ್ಟು!*
*ಅಲ್ಲೆ ಪ್ರೀತಿ, ಅಲ್ಲೆ ಸ್ನೇಹ, ಅಲ್ಲೆ ಜಗಳ, ಅಲ್ಲೆ ವಿರಸ,* *ಬೇರೊಂದಿಲ್ಲ!!*
*ಪಕ್ಕದವರಿಗೇನಾದರೂ ಹೇಳಬೇಕೆಂದರೂ ಸುತ್ತಿ ಬಳಸಿ ಅವನಿಗರ್ಥವಾಗುವಂತೆ*
*ಫೋನಲಿ ಮಾತನಾಡುತ್ತಾ ಚುಚ್ಚುವೆ!*
*ಮನೆಯವರೊಡನೆ ಮಾತು ಕಡಿಮೆ!*
*ದಿನಾ ನೋಡುವವರಲಿ ಏನಿದೆ ಮಾತು ಹೇಳಿ!*
*ದೂರದೂರಿನ ಗೆಳೆಯರ ಸಂಗವೇ ಬೇರೆ!*
*ಮನತಣಿಸುವ ಸಂದೇಶಗಳ ಸುರಿಮಳೆ!*
*ಬರದಿಹುದೇ ಜಂಭದ ಕಳೆ!*
*ಮನಬಂದಂತೆ ಹರಟ ಬಹುದು, ಇಲ್ಲವೇ ಸುಮ್ಮನಿರಬಹುದು!*
*ಆರೋಗ್ಯ, ದೇಶ, ರಾಜಕೀಯ ವಿಚಾರಗಳು ಸಿಕ್ಕಾವು!*
*ಚರ್ಚೆಯಲಿ ನೀನ್ಹೆಚ್ಚು ನಾನ್ಹೆಚ್ಚೆನಬಹುದು!*
*ದೂರದಿಂದಲೆ ಮುದ್ದಿಸಿ, ರಮಿಸಿ,* *ಕೋಪಿಸಿಕೊಳಬಹುದು!*
*ಈಗೀಗ ಜನಕ್ಕದುವೇ ಪ್ರಿಯವಾಗಿದೆ!*
*ಎಲ್ಲೂ ಮಾತು ಬೇಡ, ಸಂದೇಶ, ಹಾಡು ಸಾಕು!*
*ಮಾತನಾಡಲೋ.. ಜಂಗಮವಾಣಿ ಸಾಕು!*
*@ಪ್ರೇಮ್@*
25.06.2019
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ