ಕಾಡದಿರು ಮನವೇ..
ನೆನಪೆಂಬ ಸಂಕೋಲೆಯಲೆನ್ನ ಬಂಧಿಸಿ.....
ಹಳೆ ಕಹಿಯ ಬೀಜವನು ಮತ್ತೆ ಹೃದಯದಿ ಬಿತ್ತಿ,
ಮರೆವೆಂಬ ಕವಚ ಹೊದ್ದು ಮಲಗಿಹ ಮನಸಿಗೆ,
ಕರಿಮುಗಿಲ ನೆನಪ ತಂದು ಬೇಸರ ಮಳೆಯನೇಕೆ ಸುರಿಸಿರುವೆ ಮೆದುಳೆ?
ಹೊಗೆ ಹಾಕಿ ಕಹಿ ನೆನಪ ಓಡಿಸಿರುವೆ,
ತಂಗಾಳಿ ಬೀಸಿ ಕರಿಮೋಡದ ನೆನಪ ಕರಗಿಸಿರುವೆ,
ನಾಳೆಯೆಂಬ ಆಸೆಯ ಕಂಗಳಲಿ
ನೋವೆಂಬ ಹಳೆಘಟನೆಯ ಮುಚ್ಚಿ ಹಾಕಿರುವೆ!
ಮತ್ತೆ ತಿರುಚಿದ ಹಳೆ ಕ್ಯಾಲೆಂಡರ್ ನ ಪುಟಗಳ ತೆರೆಯದಿರು ಮನವೇ!
ಬರೆದು ನೋವುಂಡ ಕರಿ ಗೆರೆಗಳ ರಬ್ಬರ್ ಇಲ್ಲವಾಗಿಸಿದಂತೆ ಒರೆಸಿ ಬಿಟ್ಟಿರುವೆ..
ಹಾಗಲಕಾಯಿಯ ಕಹಿ ಬೇರನ್ನೂ ಬುಡಸಹಿತ ಕಿತ್ತಿರುವೆ!
ವಿವಿಧ ಮುಖದ ಹಿಂದಿದ್ದ ಕರಾಳ ಭಾವನೆಗಳ ಅರಿತು
ಯಾರ ಗೊಡವೆಗೂ ಹೋಗದೆ
ನನ್ನಷ್ಟಕೆ ನಾನೇ ಸುಮ್ಮನೆ ಬದುಕುತಲಿರುವೆ!
ಮತ್ತೆ ಎತ್ತಿ ಹಾಕುತ ಹಳೆ ನೆನಪುಗಳ ಕಾಡದಿರು ಮನವೇ..
ಎದೆಮಂದಿರದ ಕದ ತೆರೆದು ಅಭಿಷೇಕ ಮಾಡಿ ಶುಚಿಗೊಳಿಸಿರುವೆ!
ಮನಮಂದಿರವ ಬೆಳಗಿ ಉದಾತ್ತಾಲೋಚನೆಗಳ ತುಂಬಿರುವೆ!
ತನಗೆ ತಾನೇ ಉನ್ನತಾದರ್ಶಗಳ ಕೇಳಿ, ಓದಿ ಪಾಲಿಸುತಿರುವೆ,
ಮಂಕುದಿಣ್ಣೆಯ ಹಾಗೆ ಮರುಕಳಿಸಿ ನೋವ ಮತ್ತೆ ಕಾಡದಿರು ಮನವೇ...
@ಪ್ರೇಮ್@
17.06.2019
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ