ನಗುವಿನ ಗೊಂಚಲು
ವಿದಾಯ ಹೇಳದಿರು ನಿನ್ನ ತುಟಿಯ ಮೇಲಿರುವ
ಸದಾ ಬೆಳಗುತ ಪುಟಿಯುವ ನಗುವಿಗೆ...
ಹೂನಗು ಮಾಸದೆ ಹಸಿಯಾಗಿರುವಂತೆ ಬಯಸಿ,
ಕೆಂದುಟಿ ಬಿರಿಯಲು ಅರಳುವ ನಸು ನಗುವ ಸ್ಫುರಿಸಿ....
ಮನದೊಳು ಸಾವಿರ ರೀತಿಯ ಭಾವಗಳ ಸುರಿಸಿ!
ಬಾಡದ ಬಳ್ಳಿಯ ಹಸಿರಿನ ಚಿಗುರನ
ವಾಲದ ತರದಿ ಮುಖದಿ ಸಂಸ್ಕರಿಸೆ,
ನಾಡಿನ ಜನರದು ಸಂತಸದಿಂದಲೆ ನೋಡುತ
ಇದಿರಾಗಲು ಭಯಪಡದೆ ನಮ್ಮವನೆನುತಲಿ ತಾವೂ ತುಟಿತೆರೆವರು...
ಸಂಪಿಗೆ ಕಂಪಿನ ಸೊಂಪಿನ ಕಿರುನಗೆ
ನಲಿಯುತ ಮಗುವಿನಂದದಿ ಮೊಗದಲಿ...
ಮುಚ್ಚಿದ ತುಟಿಯದು ಏನದು ಚೆನ್ನವು!
ಕಚ್ಚಿದ ಸೊಳ್ಳೆಯು ರಕುತವ ಹೀರುವಂತೆ!
ನಗುವಿನ ಗೊಂಚಲು ಉದುರದೆ ಮೆರೆಯುತ,
ಬದುಕಿನ ಬಂಡಿಗೆ ಉತ್ಸಾಹ ಕೊಡಲಿ!
ಮನುಜನ ಕೃತಕತೆ ಮಾಸುತ ಹೋಗಿ,
ಸಹಜ ನಗುವದು ಚಿಮ್ಮುತ ಬರಲಿ...
@ಪ್ರೇಮ್@
14.06.2019
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ