ಮಧುವರಸಿಯ ಮನದಾಳ
ಬೆಳಗಾಗೆದ್ದು ನೊಣಗಳನೆಬ್ಬಿಸಿ
ಮಧುವ ಹೀರೆ ಹೂಗಳೆಡೆಗೆ ಕಳುಹಿಸಿ,
ಗೂಡ ಕಟ್ಟಿ ತುಂಬುವವರೆಗೆ ತಾಳ್ಮೆಯಿಂದಲೆ ಕಾದು
ಹಲ ಹೂವ ಪರಾಗಗಳ ಹೊತ್ತೊಯ್ದು
ಗೂಡುಗಳೊಳಗೆ ಅಂದದಿ ತುಂಬಿಸಿ!
ತಿನ್ನುವವರಾರೋ ಕೇಳಮ್ಮ//
ಹೆಸರಿಗೆ ನಾ ರಾಣಿಯೆಂದಿಗೂ,
ಹೂವ ಮೇಲೆ ಕುಳಿತಿರಲಾರೆ!
ಮಕರಂದವ ಹೀರಿ ತರಲಾರೆ!
ತನ್ನರಮನೆಯ ಸಂಪೂರ್ಣ ಜವಾಬ್ದಾರಿಯೆನಗೆ!
ಕೆಲಸಗಾರರಿಗೆ ನಾ ಹೇಳಿ ನಡೆಸಬೇಕಲ್ಲವೇ?
ನಮ್ಮಯ ಮಧುವದು ನಿನ್ನಯ ಆರೋಗ್ಯ!
ಸಿಹಿಯದು ಸವಿಯೂ ಅದು, ತಿನ್ನಲು ಯೋಗ್ಯ!
ತೋಟದಿ, ಮರದಿ,ಕಟ್ಟಡದೊಳಗಡೆ!
ಬೀಳದು ನಮ್ಮಯ ಗೂಡದು ಕೆಳಗಡೆ!
ಜೇನಿನ ಸಿಹಿಯದು ಬಾಳಲಿ ಇರಲಿ,
ಬರಲದು ಹುಳಗಳ ಕಷ್ಟದ ದಾರಿಯ ನೆನೆಯಲಿ!
ಕಷ್ಟದ ಬಳಿಕ ಸಿಹಿಯದು ಬರುವುದು
ಎನ್ನುವ ಪಾಠವ ನಮ್ಮಿಂದ ಕಲಿಯಲಿ!
@ಪ್ರೇಮ್@
06.06.2019
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ