ಭಾನುವಾರ, ಜೂನ್ 30, 2019

1086. ಮನುಜನೆ ಕೇಳು

ಮನುಜನೆ ಕೇಳು

ಸುತ್ತಲು ಮುತ್ತುವ ಕಪ್ಪನೆ ನೊಣಗಳು
ಬೆತ್ತಲ ದೇಹದ ನಾಯಿಯ ಹೆಸರೊಳು,
ಕೆತ್ತನೆ ಮನುಜನ ವ್ಯರ್ಥ ಪ್ರಯತ್ನ!
ಮಾನವ ತನ್ನಯ ಕಾರ್ಯವ ಬಿಡುವನೆ!

ತಂದನ ತನನನ ನಾದದ ವೇದವು!
ವಂದಿಪ ಕೈಗದು ಬೇಡಿಯ ಬರವು!
ಸರಸರ ಕನ್ನಡ  ಓದುತ ಸಾಗಲು
ಕಾಯುವ ದೇವಿಯ ರಕ್ಷೆಯು ಒದಗದೆ?

ಕಟುಕನು ಮನುಜನು ಮಾಡದ ತಪ್ಪಿಗೆ
ಶಿಕ್ಷೆಯ ವಿಧಿಸುತ ನಗುತಲಿ ಮೆರೆವನು,
ಜಗವನು ಕಾಯುವ ತಂದೆಯು ಮೇಲಿಹ
ಕಷ್ಟ ಸುಖಗಳ ಕೂಡುತ ಕಳೆಯುವ..

ಪರರಿಗೆ ಉಪಕಾರ ಮಾಡುತ ಬದುಕಲು
ಜೀವನ ಪಾವನ ನೋಡುತ ನಲಿಯಲು
ನಿನ್ನದು ನೀನೇ ಎಂದರೆ ಕೊನೆಗೆ
ಚಟ್ಟವ ಕಟ್ಟಲು ಬರುವರು ಯಾರು?
ಚಿಂತೆಯು ಬೇಡ ನಾಳಿನ ಬಗೆಗೆ
ಹೊತ್ತಿಹ ಭೂಮಿಗೆ ಪೊರೆಯುವ ಭಾರ!
ಇಳೆಗೆ ಬರಿಸಿದ ದೇವನು ಕಾವ,
ಉತ್ತಮ ಕಾರ್ಯವ ಮಾಡುತ ಕಾಯ..
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ