ಬಾಳು ಬೆಳಗಲಿ
ಉದುರಲಿ ಪ್ರೀತಿಯೆ ನಿನ್ನಯ ಕಣ್ಣಲಿ
ಸಂತಸಭರಿತ ಕಂಬನಿ ಬಿಂದುವು!
ಬಾರದೆ ಇರಲಿ ನಿನಗೆಂದು ನೋವಿನ ಕಣ್ಣೀರು!
ಬಿಂದುವು ಕೆಳಕ್ಕಿಳಿಯುತಲಿ ನೆನಪಾಗಲಿ ಸುಖ
ದುಃಖದ ಕ್ಷಣವು ದೂರಾಗಿ ಬೇಸರ ದೂರ ಹೋಗಲಿ!
ಬೇನೆಯ ಛಾಯೆಯು ಮಾಯವೆ ಆಗಿ ಬರಲಿ ನವ ಉಲ್ಲಾಸ!
ಕಾಂತಿಯ ಹೊತ್ತ ಕಳೆ ಬರಲಿ!
ನೀತಿಯ ತುಂಬಿದ ಬಾಳುವೆ ಈಯಲಿ!
ಸಾಧನೆ ಮುಡಿಕಡೆ ಏರದೆ ಜಗದಲಿ
ನನ್ನ ಕೆಲಸ ಸಾಲದೆಂಬ ನಂಬಿಕೆ ಬರುತಲಿ ಬಾಳದು ಬೆಳಗಲಿ!
@ಪ್ರೇಮ್@
25.06.2019
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ