ಶುಕ್ರವಾರ, ಜೂನ್ 21, 2019

1066. ಜೀ-ವನ

1.  ಜೀ-ವನ

ಈ ವನದೊಳಗೆ ಬಂದು ನುಗ್ಗಿ,
ಒಳನಡೆದು ನೋಡಿದಾಗಲೇ ತಿಳಿವುದು
ಏನೊಂದು ಜಂಜಾಟದ ಜೀ-ವನ!

ಮಾಡ ಹೊರಟಿಹರು ಹಲವರು
ಮೊದಮೊದಲೇ ನಮಗಿಂತ ಹಿರಿಯರು
ಅದ ಇತರರಿಗಿಂತ ಬಹಳ ಪಾ-ವನ..
ಅಲ್ಲಿ ಬೇಕಂತೆ ಉತ್ಸಾಹ-ಉಲ್ಲಾಸಗಳ ವಿಲನ!

ಈ ವನದೊಳಗೆ ಪ್ರವೇಶಿಸಿದರೆ ಒಂದಲ್ಲ
ಎರಡಲ್ಲ, ಮೂರಲ್ಲ ಏಳು ಜನುಮ ಪಡೆಯ ಬೇಕಂತೆ
ಸಿಗಲು ಸರಿಯಾದ ಸದ್ಗತಿನ..

ವನ ಬೆಳೆಸಬೇಕೆಂಬ ಕೂಗು ಎಲ್ಲೆಡೆ
ಬರಿದಾಗಿದೆ ಇಲ್ಲಿ ನೆಲ, ಜಲ, ವಾಯು, ಸಂಪತ್ತು!
ಅದೆಷ್ಟು ಜನುಮ ಮತ್ತೆ ಎತ್ತಬೇಕೋ ಬಿಡಲೀ ಮೈ-ಮನ!

ಈ ಜೀವನ ಕವನದ ಕೊನೆಯ ಚರಣ
ಬರೆಯ ಹೊರಡುವವರೆಗೆ ಉಸಿರ ತನನ!
ಮುಗಿದು ಜೀವನ ಕೊನೆಗೆ ಮರಣ!
ಅದರ ಮೊದಲೇ ಮಾಡಿ ಮುಗಿಸಬೇಕು ಜೀ-ವನ ಪಾ-ವನ!!!
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ