ಆಸೆ ಬಿಡಲಾದೀತೇ?
ಆಸೆಯು ಮನದಲಿ ಚಿಗುರಲು ಮೊದಲು
ನಾಲಿಗೆ ಬಿಡಲದು ರಸ ರುಚಿಯ!
ಮನುಜನ ಬಯಕೆಗೆ ಮಿತಿಯದು ಬಾರದು!
ಧನ ಹಣ ತುಂಬಲು ಮನೆ ಮನವ!
ಕೋಟಿಯ ಕೊಟ್ಟರೂ ಪ್ರಾಣಿಗೆ ಬೇಕೆ?
ಕೂಳದು ಸಾಕು ಆ ಹೊತ್ತಿನದು!
ಮನುಜನ ದುರಾಸೆ ತಿಂದು ಕೂಡಿಡಲದು,
ಸಾವಿರ ಸಂತಾನಕೂ ಪೇರಿಸಿ ಇಡಲು!
ಕೊಟ್ಟದ್ದು ತನಗೆ,ಇಟ್ಟದ್ದು ಪರರಿಗೆ!
ನಾವೇ ಕಟ್ಟಿಹ ಗಾದೆಯಿದು!
ಆದರೂ ಬರದೂ ಬುದ್ಧಿಯು ಎಂದೂ
ಧನವದು ಬಾಯಿಯ ಮುಚ್ಚಿಹುದು!
ಹೆಣಗಳು ಬಿದ್ದರೂ, ಮನಗಳು ಕುದ್ದರೂ
ಕುರ್ಚಿಯ ಆಸೆಯ ಬಿಡಬಹುದೇ?
ಕೆಲಸವ ಮರೆತು ಕಟ್ಟಿಡೊ ಕಾಯಕ,
ನಾಯಕ ಮಂದಿಯು ಬಿಡಬಹುದೇ!?
ಭಾರತ ಬೆಳೆವುದು, ಲೋಕದಿ ಮೆರೆವುದು!
ಬಡತನ ಅಳಿವುದು ಖಂಡಿತವೂ!
ಜನರಲಿ ಬೇಕು ಓಟನು ಮಾರದೆ,
ಸರಿಯಾಗಿ ಆರಿಸೋ ಜಾಣತನವು!
@ಪ್ರೇಮ್@
13.06.2019
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ