ಹೃದಯ
ಹೃದಯದ ಗುಡಿಯಲಿ ಲಿಂಗದಂತೆ ನಿನ್ನನಿರಿಸಿ ಭಕ್ತಿ-ಪ್ರೀತಿರಸದಿ ಅಭಿಷೇಕಕಣಿಗೊಳಿಸಿರುವೆ! ೧
ಪುಟ್ಟ ಹೃದಯದ ಅಟ್ಟದಲ್ಲಿರುವ ಭಾವನೆಗಳನರಸಿ ಕಟ್ಟಿ ಮಾಲೆಯಾಗಿಸಿರುವೆ! ೨
ಹೃದಯವ ಅಗೆದು ಪ್ರೀತಿ ನೀರನು ಪಡೆಯೆ ಸುಸ್ತಾದೆ! ೩
ಅವಳ ಪ್ರೀತಿಯ ನುಡಿಕೇಳಿ ಗುಂಡಿಗೆ ಬಿದ್ದೆಯಾ ಹೃದಯಾ?೪
ಮುತ್ತು-ರತ್ನ-ಹವಳ-ಬಂಗಾರದಲಿ ಸಿಂಗರಿಸಲಿಲ್ಲ ಹೃದಯವನು! ೫
@ಪ್ರೇಮ್@
04.06.2019
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ