ಸೋಮವಾರ, ಜೂನ್ 3, 2019

1049. ಇಳೆ

ಇಳೆ

ನಿಸರ್ಗ ನೀನು ನನ್ನ ತಾಯಿ
ನನ್ನ ತೊಟ್ಟಿಲ ತೂಗೋ ಕೈ,
ನನ್ನ ಮೊದಲ ತಾಯಿ ನೀನು
ನಿನ್ನೆದೆಯಲಿ ಬಾಳೊ ಕಂದ ನಾನು//

ನೋವ ಮರೆತು ನಲಿವ ತರುವೆ
ನನ್ನ ಬದುಕ ಮೆಟ್ಟಿಲಲ್ಲಿ..ಆಹಾ..
ನೀಗಿ ನೀರ ನೋವ ಚಿಂತೆ
ನಮ್ಮ ಪೊರೆದು ಕಾಯುತಿರುವೆ//

ನಲಿವೆ ಇರಲಿ ಬಾಳಿನಲ್ಲಿ
ಎನುತ ಹರಸಿ ವರವ ಕೊಡುವೆ...ಆಹಾ..
ನಲಿಯುತಲಿ ಬದುಕಲೆನಗೆ ನವಿಲಿನಂತೆ ಸ್ವಾತಂತ್ರ್ಯ ತರುವೆ//

ನಿತ್ಯ ನೋಟ ನಶೆಯೇರುತ
ಹಸಿರ ಧಿರಿಸು ತೊಟ್ಟು ನಲಿವೆ..ಆಹಾ..
ನಂದಿನಿಯ ಬಿಳಿ ಹಾಲಲೂ
ನೀನೆ ನನಗೆ ಕಾಣುವೆ...

ನೋವು ನೀಗಿ ನಾಳೆಗಾಗಿ
ನಮ್ಮ ಕಾಯ್ವ ತಾಯಿಯೇ..ಆಹಾ..
ನಿತ್ಯ ನಿನ್ನ ಉಳಿವಿಗಾಗಿ ಹಸಿರ ಬೆಳೆಸೋ ವರವ ನೀಡು..
@ಪ್ರೇಮ್@
03.06.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ