ನನ್ನದು
ಪ್ರೀತಿಯ ಹಾಡನು ಹಾಡುವ ಸಖಿಯೇ,
ನೀತಿಯ ಮಾರ್ಗದಿ ಸಾಗುವ ಸಖಿಯೇ..
ಹಗಲು ಇರುಳು ಅದನು ಹಂಚುತ ನಾವು
ತೊಗಲು ಗೊಂಬೆಯ ಹಾಗೆಯೆ ನಗುವ ಸಖಿಯೇ..
ಸಿಗಲು ನೂರಾರು ಅವಕಾಶ ಬಾಳಲಿ,
ಬಳಸಿ ನಡೆದು ತೋರುವ ಸಖಿಯೇ..
ಬಳಲಿ ಬೆಂಡಾದ ಜನಕೆ ಸುಖದಿ
ಮೆರೆವ ಕ್ಷಣವ ತೋರುವ ಸಖಿಯೇ..
ನರಳಿ ಸಾಯುವ ಮನಕೆ ಶಾಂತಿಯ
ದೀಪವ ಬೆಳಗಿ ಬೆಳಕ ನೀಡುವ ಸಖಿಯೇ..
ಮನದ ಕಿಚ್ಚನು ಕಳೆದು ಬಿಸಾಕೆ
ಮನೆಯ ಸ್ವಚ್ಛತೆ ಆಗುವ ಭಾವವ ಬರೆವ ಸಖಿಯೇ..
ಬೇರೆಯ ಮನವು ಎಂಬುದ ಮರೆತು
ಶಾಂತಿಯ ಬಾಳುವೆ ನಡೆಸುವ ಗುಣವ ತಿಳಿಸುವ ಸಖಿಯೇ..
ತಣ್ಣನೆ ಗಾಳಿಯ ಹಿತದ ಸ್ಪರ್ಶಕೆ
ಮರವ ಬೆಳೆವ ಮಾತನು ಸರ್ವಗೆ ಸಾರುವ ಸಖಿಯೇ..
@ಪ್ರೇಮ್@
12.06.2019
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ