ಶುಕ್ರವಾರ, ಜೂನ್ 14, 2019

1057. ಭಾವಗೀತೆ-ನೀ ಯಾಕ ಬಂದಿ

ನೀ ಯಾಕ ಬಂದಿ ?

ನೀ ಯಾಕ ಬಂದಿ ನನ್ನ ಕನಸ್ನಾಗ?
ಬಂದು ಕುಂತಿ ಶಿವಾನ ಮುಂದಿನ ಬಸವನ ಹಾಂಗ..
ನೀ ಯಾಕ ಬಂದಿ....

ಎರ್ಡೂ ಕೈನಾಗ ಹೂಹಾರವ ಹಿಡಕೊಂತ,
ದೇವರ ಮಂತ್ರವ ಬಕುತೀಲೆ ಹಾಡ್ಕೊಂತ,
ಅವ್ವನ ಜತೆಯಲಿ ಮುಂದಕೆ ಕೂಡ್ಕೊಂತ,
ಗೆಣೆಯರನೆಲ್ಲಾನ ಜತೆಯಾಗೆ ಕಟ್ಕೊಂಡು..
ನೀ ಯಾಕ ಬಂದಿ....

ನನಗಂತ ಏನೂನು ತರಲಿಲ್ಲ ನೀನ..
ಲಗೂನೆ ಬಂದು ನುಗ್ಗಿದ್ಯ ತಾನಾ..
ಮನ್ಯಾಗ ಯಾರಿಲ್ಲ, ನೀ ನನ ಬಾಳೀಗ ಬೇಕಂತ..
ಇಲ್ಲಾಂದ್ರ ನನ್ನ ಬಾಳು ಒಂಟೀಲೆ ಹೋಯ್ತಂತ..
ನೀ ಯಾಕ ಬಂದಿ..

ಆಸಿಯ ಮಂಟಪವ ನನ್ನಲ್ಲಿ ಕಟ್ಟಾಕ..
ಮೀಸೀಯ ತಿರುವುತ್ತ ನಾನೇನೇ  ಹೀರೋಂತ..!
ದಾಸಾನುದಾಸ್ನಾಗಿ ನಾ ಇರೋವಾತ ನಿಂಗಂತ!
ಕಾಸಿಲ್ಲ, ಕವಡಿಲ್ಲ ಪ್ರೀತೀನಾ ನೀನಂತ..!
ನೀ  ಯಾಕ ಬಂದಿ....?

ನನ ಬದ್ಕು ನಿನ್ಗೇ ಮೀಸಲ್ಯಾಗಿ ಇರಲಂತ,
ನನ ಜೋಡಿ ಬದ್ಕಾಕ ನೀನೇ ಬೇಕಂತ!
ಹಠಮಾರಿ ನನ್ನವ್ಗ ಸೊಸಿಯು ಬೇಕಂತ!
ನನ ಜೀವ ತಿಂತಾ, ಕೈಯ ಹಿಡ್ ಕೊಂತ!
ನೀ ಯಾಕ ಬಂದಿ....?
@ಪ್ರೇಮ್@
15.06.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ