ಶರ ಷಟ್ಪದಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಶರ ಷಟ್ಪದಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶನಿವಾರ, ಜುಲೈ 11, 2020

1484. ಶರ ಷಟ್ಪದಿ

ಆಹ್ಲಾದ(ಶರ)

ವರುಣನ ಕೃಪೆಯದು
ಕರುಣೆಯ ಬೀರಿದೆ
ತರುಲತೆ ನಗುವಲಿ ನಾಟ್ಯವಿದೆ।
ಝರಿಯದು ಹರಿಯುತ
ವರವಾಗುತ ದಿನ
ಹರನನೆ ನೆನೆಯುತ ಸಾಗುತಿದೆ॥

ಭರದಲಿ ಬಾಗಿದೆ 
ಗಿರಗಿರ ತಿರುಗಿದೆ
ಕರದಲಿ ಪುಷ್ಪವ ಹಿಡಿದಂತೆ।
ತರತರ ಬಣ್ಣದ 
ಭರವಸೆ ತಂದಿದೆ
ಸಿರಿಯನು ಬಳಿಯಲಿ ಹಿಡಿದಂತೆ॥

ಪರಿಸರ ಶುದ್ದಿಯು
ಉರಿಸದು ಮನವನು
ಹರಸುತ ಸರ್ವರ ಬೇಸರವ।
ಪರಿಪರಿಯಲಿ ಕಸ 
ಸುರಿಯುತ ಜನಗಳು
ಪೊರೆವಗೆ ಗದರುತ ಸಾಗುವರು॥
@ಪ್ರೇಮ್@
04.07.2020

ಮಂಗಳವಾರ, ಮಾರ್ಚ್ 17, 2020

1331. ಶರ ಷಟ್ಪದಿ

ಗುರುತರ ಕಾರ್ಯವ
ಗುರುವದು ಮಾಡುವ
ಗಮನವು ಆ ಕಡೆ ಇರಬೇಕು
ಗುಡಿಯಲಿ ಕುಳಿತೇ
ಗುಮಾನಿ ಇಲ್ಲದೆ
ಗಜಮುಖ ನೀಡುವ ವರಗಳನು

ಗುರಿಯದು ಬೇಕಿದೆ
ಗುಡುಗುವ ಜನರಿಗೆ
ಗಾಡಿಯ ವೇಗದಲೋಡುತಿಹ
ಗುಡ್ಡದ  ಭೂತಕೆ
ಗುಡುಗದು ತಾಗದು
ಗುರಿಯೇ ಬಾಳಿನ ಗುರುತಂತೆ

ಗುಡಿಮಡಿ ತೊರೆದವ
ಗಡಿಯಲಿ ಕಾಯುತ
ಗಹನದಿ ಪೊರೆವನು ದೇಶವನು
ಗೋಲಿಯ ಆಟದಿ
ಗೋರುತ ನಡೆವವ
ಮಾನವ ಕೊಡುತಲಿ ಕಾಟವನು

ಗುರುಗಳು ಕರವನು
ಗಮನದಿ ಹಿಡಿದರೆ
ಬದುಕದು ಸುಂದರ ಶಿಲೆಯಂತೆ
ಗಣಪನು ವಿಘ್ನವ
ಗದರಿಸಿ ಕಳಿಸಲು
ಬಾಳದು ನಲಿವುದು ನಿಜವಣ್ಣ..
@ಪ್ರೇಮ್@
16.03.2020