ಹಾಯ್ ಎಲ್ಲಾರ್ಗೂ... ಮನದ ಮಾತಿಗೆ ಸ್ವಾಗತ.. ಸುಮ್ನೆ ಓದ್ನೋಡಿ..
ಮಳೆ ಜೋರಾಗ್ ಸುರೀತಿದೆ. ಅಮ್ಮ, ಅಪ್ಪನ್ ಸುತ್ತ ಮೂರ್ನಾಲ್ಕು ಮಕ್ಳು ಒಲೆ ಬುಡದಲ್ ಕೂತು ಮನೇಲೇ ಮಾಡಿದ ಹಲಸಿನ್ ಹಪ್ಳ ಸುಟ್ ಕೊಂಡ್ ತಿಂತಾ ಅಜ್ಜಿ ಕತೆ ಕೇಳೋ ಕಾಲವಂತೂ ಈಗಿಲ್ಲ. ಈಗೇನಿದ್ರೂ ಏಕಾಂತವಾಗಿ ಒಂದ್ ಲ್ಯಾಪ್ ಟಾಪೋ, ಕಂಪ್ಯೂಟರೋ ಇಟ್ಕೊಂಡು, ಅದ್ನೇ ನೋಡ್ತಾ, ಪಕ್ಕದಲ್ಲಿರೋ ಮೊಬೈಲ್ ತೆಗ್ದು ಒಮ್ಮೆ ಎಫ್ ಬಿ, ಮತ್ತೊಮ್ಮೆ ವಾಟ್ಸಪ್, ಮಗದೊಮ್ಮೆ ಟ್ವಿಟರ್, ಇನ್ನೊಮ್ಮೆ ಇನ್ ಸ್ಟ್ರಾಗ್ರಾಂ, ಮೆಸೆಂಜರ್, ಶೇರ್ ಚಾಟ್ ಹೀಗೆ ಜೀವನದಲ್ಲಿ ಕೂತಲ್ಲೇ ತಲೆ ಎತ್ತದೆ, ಯಾರ್ನೂ ನೋಡ್ದೆ ತಾನೇ ತಾನಾಗಿ ಮಜಾ ತಗೊಳ್ಳೋ ಕಾಲ ಬಂದ್ಬಿಟ್ಟಿದೆ.
ಈಗಂತೂ ಯಾರು ಯಾರ ಸುದ್ದಿಗೂ ಇಲ್ಲ, ಪಕ್ಕದ್ ಮನೆಯವ್ರ ಜೊತೆ ಜಗಳವಾಡೋ ಕಾಲಾನೂ ಎಂದೋ ಹೋಯ್ತು. ಈಗಂತೂ ಪಕ್ಕದ್ ಗೋಡೆಯಿಂದಾಚೆ ಯಾರಿದ್ದಾರೆ, ಯಾರ್ ಬರ್ತಾರೆ, ಯಾರ್ ಹೋಗ್ತಾರೆ, ಯಾರ್ ಸಾಯ್ತಾರೆ ಅಂತಾನೂ ಗೊತ್ತಾಗಲ್ಲ! ಮಾತು, ಕತೆ, ಹರಟೆ ಅನ್ನೋದು ಮರ್ತೇ ಹೋಗಿದೆ ಜನರಿಗೆ. ಅದೇನಿದ್ರೂ ಈಗ ರಿಟನ್ ಚಾಟ್, ವಾಯ್ಸ್ ಚಾಟ್, ವಿಡಿಯೋ ಕಾಲಲ್ಲೇ. ಜನ ಮೊಬೈಲೆಂಬ ಸಣ್ಣ ಸಾಧನಕ್ಕೆ ಎಷ್ಟು ಅಂಟಿ ಬಿಟ್ಟಿದ್ದಾರಂದ್ರೆ ಅಪ್ಪ, ಅಮ್ಮ, ಮಕ್ಳು ಸಂಸಾರ ಯಾರನ್ ಬೇಕಾದ್ರೂ ಬಿಟ್ಟು ಒಬ್ರೇ ಮೊಬೈಲ್ ಜೊತೆ ಬದ್ ಕ್ತಾರೆ. ಮೊಬೈಲ್ ನೋಡ್ವಾಗ ತಮ್ ಮಕ್ಳೇ ಡಿಸ್ಟರ್ಬ್ ಅನ್ನಿಸ್ತಾರೆ. ಗಂಡ ಹೆಂಡತಿ ಎಷ್ಟೇ ಕ್ಲೋಸ್ ಇದ್ರೂ ಒಬ್ರ ಮೊಬೈಲ್ ಮತ್ತೊಬ್ರು ನೋಡೋದ್ ಅಪರಾಧ! ಓಹೋ..ಕಾಲ ಕೆಟ್ಹೋಗಿದ್ಯೋ? ಸಮಯ ಬದಲಾಗಿದ್ಯೋ, ಜನಾ ಕೆಟ್ಹೋಗಿದ್ದಾರೋ? ಜನರೇಶನ್ ಬದಲಾಗಿದ್ಯೋ ಒಂದೂ ತಿಳೀತಿಲ್ಲ. ಕಾಲಾನೇ ಕೊರೋನ ರೂಪ್ದಲ್ ಬಂದು ನಿಮ್ ನಿಮ್ ಮನೆಗಳಲ್ಲಿ, ನಿಮ್ದೇ ಸಂಸಾರದ್ ಜೊತೆ ಸುಖವಾಗಿರಿ ಅಂತ ಬುದ್ಧಿ ಕಲಿಸ್ಬೇಕೇನೋ?
ಮುಂದಿನ ಜನರೇಶನ್ ಮಕ್ಳಿಗೆ ನಾಲ್ಗೆ ತಿರುಗೋದೇ ಕಷ್ಟವೇನೋ. ಕೂತಲ್ಲಿಗೇ ಎಲ್ಲ ಬಂದೂ ಕೈ ಕಾಲೂ ತಮ್ಮ ಶಕ್ತಿಯನ್ನು ಕಳ್ಕೊ ಬಹುದೇನೋ. ಮೊಬೈಲ್, ಕಂಪ್ಯೂಟರ್ ನೋಡಿ ನೋಡಿ ಕಣ್ಣಿನ ಪವರ್ ಹೋದ್ರೆ, ಒತ್ತಿ ಒತ್ತಿ ಬೆರಳುಗಳಿಗೂ ರೋಗ ಬರ್ತದಂತೆ. ಮತ್ತೆ ಮನೋರೋಗ! ಎಲ್ಲಾ ನ್ಯೂಸ್ ಗಳ ನೋಡಿ, ಓದಿ! ಮತ್ತೆ ಸರಿಯಾದ ಊಟ ತಿಂಡಿ ಇಲ್ದೇ ಆರೋದ್ಯದಲ್ಲಿ ಏರ್ ಪೇರು. ತಿಂದ್ರೆ ಕರಗೋಲ್ಲ, ಜಾಸ್ತಿ ತಿಂದ್ರೆ ಬೊಜ್ಜು ಬರತ್ತೆ! ಮದ್ದು ಹಿಡಿಸೋಲ್ಲ! ಹಿಂಗಾದ್ರೆ ಹೆಂಗೇ? ಕಲಿಗಾಲ ಅಂದ್ರೆ ಇದೇಯೇನೋ, ಸೃಷ್ಟಿಯ ವಿನಾಶ ಕಾಲವೇನೋ. ನೀವೇನಂತೀರಿ?
@ಪ್ರೇಮ್@
08.08.2020
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ