ಮನ
ಬಾ ಬಾ ಮನದಲಿ ನೋಡುವ ಬಯಕೆಯು
ತಾ ತಾ ಪ್ರೀತಿಯ ಮೊಗೆಯುವ ತವಕವು
ಕಾ ಕಾ ಕರೆಯುವ ಕಾಗೆಯ ಮಿಡಿತವು
ಅ ಆ ಕಲಿಯುವ ಮಗುವಿನ ಹೃದಯವು
ಮಾ ಮಾ ಎನ್ನುತ ಅಳುವ ಮಗುವಂತೆ
ಯಾ ಯಾ ಎನ್ನುವ ಬಂಧುವಿನ ಪ್ರೀತಿಯಂತೆ
ವಾ ವಾ ಎನ್ನುವ ಗೆಳೆಯರ ಉತ್ಸಾಹ
ನೀ ನೀ ಎನ್ನುವ ಸಹಪಾಠಿಗಳ ಪ್ರೋತ್ಸಾಹ
ಕೋ ಕೋ ಕರೆಯುವ ಪಕ್ಷಿಯ ತುಡಿತವು
ಕೀ ಕೀ ಮರಿಯ ನಂಬಿಕೆ ಸೆಳತವು
ಹಾ ಹಾ ನಗುವಿನ ಮಧುರತೆ ನಿರತವು
ಓ ಓ ಕರೆಯುವ ಅಮ್ಮನ ಪಾತ್ರವು..
@ಪ್ರೇಮ್@
23.10.2021
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ